ಆ್ಯಪ್ನಗರ

ನೋಕಿಯಾ 6 ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ; ವೈಶಿಷ್ಟ್ಯಗಳೇನು?

ನೋಕಿಯಾ ಬ್ರಾಂಡ್ ಸ್ಮಾರ್ಟ್‌ಫೋನ್‌ಗಳ ಮಾರಾಟ ಹಾಗೂ ನಿರ್ಮಾಣ ಹಕ್ಕನ್ನು ಹೊಂದಿರುವ ಎಚ್‌ಎಂಡಿ ಗ್ಲೋಬಲ್ ಸಂಸ್ಥೆಯು, ಅತಿ ನೂತನ ನೋಕಿಯಾ 6 ಸ್ಮಾರ್ಟ್‌ಫೋನ್ ಬಿಡುಗಡೆಗೊಳಿಸಿದೆ.

Vijaya Karnataka Web 8 Jan 2017, 7:26 pm
ಭಾರತದಲ್ಲಿ ಅತಿ ಹೆಚ್ಚು ಯಶಸ್ಸನ್ನು ಕಂಡಿರುವ ನೋಕಿಯಾ ಹೊಸ ರೂಪದಲ್ಲಿ ನೆರೆಯ ಚೀನಾಗೆ ಕಾಲಿರಿಸಿದೆ. ನೋಕಿಯಾ ಬ್ರಾಂಡ್ ಸ್ಮಾರ್ಟ್‌ಫೋನ್‌ಗಳ ಮಾರಾಟ ಹಾಗೂ ನಿರ್ಮಾಣ ಹಕ್ಕನ್ನು ಹೊಂದಿರುವ ಎಚ್‌ಎಂಡಿ ಗ್ಲೋಬಲ್ ಸಂಸ್ಥೆಯು, ಅತಿ ನೂತನ ನೋಕಿಯಾ 6 ಸ್ಮಾರ್ಟ್‌ಫೋನ್ ಬಿಡುಗಡೆಗೊಳಿಸಿದೆ.
Vijaya Karnataka Web hmd global launches nokia 6 smartphone with android 7 0 nougat
ನೋಕಿಯಾ 6 ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ; ವೈಶಿಷ್ಟ್ಯಗಳೇನು?


ಇದು ಚೀನಾದಲ್ಲಿ ಜೆಡಿ ಡಾಟ್ ಕಾಮ್ ಎಂಬ ವೆಬ್‌ಸೈಟ್‌ನಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ. ಇದು ಭಾರತೀಯ ರುಪಾಯಿ ಪ್ರಕಾರ ಚೀನಾದಲ್ಲಿ 16,700 ರು.ಗಳಷ್ಟು (1699 ಚೈನೀಸ್ ಯುವಾನ್) ದುಬಾರಿಯೆನಿಸಲಿದೆ. ಅಲ್ಲದೆ 2017ನೇ ಸಾಲಿನಲ್ಲಿ ನೋಕಿಯಾ ಎಚ್1 ಶ್ರೇಣಿಯ ಮತ್ತಷ್ಟು ಹ್ಯಾಂಡ್ ಸೆಟ್‌ಗಳನ್ನು ಬಿಡುಗಡೆ ಮಾಡಲಿದೆ.

ವೈಶಿಷ್ಟ್ಯಗಳು:
*ಆಂಡ್ರಾಯ್ಡ್ 7.0 ಎನ್ (Nougat),
*ಡ್ಯುಯಲ್ ಸಿಮ್ ಕಾರ್ಡ್,
*5.5 ಇಂಚುಗಳ ಸಂಪೂರ್ಣ ಎಚ್‌ಡಿ (1080X1920 ಪಿಕ್ಸೆಲ್) ರೆಸೊಲ್ಯೂಷನ್ ಡಿಸ್‌ಪ್ಲೇ,
*2.5ಡಿ ಕರ್ವ್ ಗ್ಲಾಸ್ ಕೋಟಿಂಗ್,
*ಗೋರಿಲ್ಲಾ ಗ್ಲಾಸ್ 3 ರಕ್ಷಣೆ.
*ಓಕ್ಟಾ ಕೋರ್ ಕ್ವಾಲ್ಕಂ 430 ಪ್ರೊಸೆಸರ್,
*ಆಡ್ರೆನೊ 505 ಜಿಪಿಯು,
*4 ಜಿಬಿ ಎಲ್‌ಪಿಡಿಡಿಆರ್3 ರ‍್ಯಾಮ್.

ಸ್ಟೋರೆಜ್: 64 ಜಿಬಿ,
ವಿಸ್ತರಿಸು: 128 ಜಿಬಿ ವರೆಗೂ (ಮೈಕ್ರೋ ಎಸ್‌ಡಿ ಕಾರ್ಡ್ ಮುಖಾಂತರ)

ಕ್ಯಾಮೆರಾ
ರಿಯರ್: 16 ಎಂಪಿ, ಡ್ಯುಯಲ್ ಟೋನ್ ಎಲ್‌ಇಡಿ ಫ್ಲ್ಯಾಶ್, ಫೇಸ್ ಡಿಟೆಕ್ಷನ್ ಆಟೋಫೋಕಸ್
ಫ್ರಂಟ್: 8ಎಂಪಿ, 84 ಡಿಗ್ರಿ ವಿಶಾಲ ಕೋನ

ಬಣ್ಣ: ಕಪ್ಪು

4ಜಿ ಎಲ್‌ಟಿಇ ಬೆಂಬಲಿತ ನೋಕಿಯಾ 6 ಬ್ಲೂಟೂತ್ ವಿ4.1, ಜಿಪಿಎಸ್, ಯುಎಸ್‌ಬಿ ಓಟಿಜಿ, ವೈ-ಫೈ ಕನೆಕ್ಟಿವಿಟಿ ಮತ್ತು 300 ಎಂಎಎಚ್ ಬ್ಯಾಟರಿಗಳನ್ನು ಒಳಗೊಂಡಿರಲಿದೆ. ಇನ್ನುಳಿದಂತೆ 154X75.8X7.8ಎಂಎಂ ಅಳತೆ, ಡೋಲ್ಬಿ ಆಟ್ಮೆೋಸ್ ನಿಯಂತ್ರಿತ ಡ್ಯುಯಲ್ ಸ್ಪೀಕರ್, 3.5 ಎಂಎಂ ಹೆಡ್‌‌ಫೋನ್ ಜ್ಯಾಕ್ ಮತ್ತು ಫಿಂಗರ್‌ಪ್ರಿಂಟ್ ಸೆನ್ಸರ್ ವೈಶಿಷ್ಟ್ಯಗಳನ್ನು ಗಿಟ್ಟಿಸಿಕೊಳ್ಳಲಿದೆ.

2017ನೇ ಸಾಲಿನಲ್ಲಿ ಐದು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವುದಾಗಿ ಎಚ್‌ಎಂಡಿ ಗ್ಲೋಬಲ್ ಘೋಷಿಸಿದೆ. ಸಂಸ್ಥೆಯ ಎರಡನೇ ನೋಕಿಯಾ ಸ್ಮಾರ್ಟ್‌ಫೋನ್ 2017 ಎಂಡಬ್ಲ್ಯುಸಿನಲ್ಲಿ ಅನಾವರಣಗೊಳ್ಳುವ ಸಾಧ್ಯತೆಯಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌