ಆ್ಯಪ್ನಗರ

Huawei Ban: ಬ್ರಿಟನ್‌ನಲ್ಲಿ ಚೀನಾದ ಹುವೈಗೆ ನಿರ್ಬಂಧ

ಬ್ರಿಟನ್‌ನಲ್ಲಿ ಹುವೈ ನೆಟ್‌ವರ್ಕ್ ಜತೆಗೆ ಸಹಯೋಗ ಹೊಂದಿರುವ ಎಲ್ಲ ಕಂಪನಿಗಳಿಗೂ ಸೂಚನೆ ನೀಡಿದ್ದು, ಮುಂದೆ ಹುವೈ ಹೊರತಾದ ಮತ್ತು ಚೀನಾ ಹೊರತಾದ ಇತರ ಕಂಪನಿಗಳಿಗೆ ಆದ್ಯತೆ ನೀಡಲು ಮುಂದಾಗಿದೆ.

Gadgets Now 14 Jul 2020, 5:20 pm
ಅಮೆರಿಕದಲ್ಲಿ 5G ನೆಟ್‌ವರ್ಕ್ ಅಳವಡಿಕೆ ಮತ್ತು ಪೂರಕ ಟೆಂಡರ್‌ಗಳಿಂದ ಚೀನಾ ಮೂಲದ ಹುವೈ ಕಂಪನಿಯನ್ನು ಸಂಪೂರ್ಣ ನಿರ್ಬಂಧಿಸಿದ ಬೆನ್ನಲ್ಲೇ ಬ್ರಿಟನ್ ಕೂಡ ಅದೇ ಮಾದರಿಯ ನಿರ್ಣಯ ಕೈಗೊಳ್ಳುತ್ತಿದ್ದು, ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್ ಹುವೈಗೆ ತಡೆ ನೀಡಿದ್ದಾರೆ. ಬ್ರಿಟನ್‌ನಲ್ಲಿ 5G ಅಳವಡಿಕೆ ಮತ್ತು ವಿಸ್ತರಣೆ ಹಾಗೂ ನೆಟ್‌ವರ್ಕ್ ಅಪ್‌ಗ್ರೇಡ್ ಸಹಿತ ಯಾವುದೇ ಟೆಂಡರ್‌, ಹೊಸ ಕೆಲಸದಲ್ಲಿ ಚೀನಾದ ಹುವೈ ಭಾಗವಹಿಸುವಂತಿಲ್ಲ.
Vijaya Karnataka Web Huawei
Huawei 5G


ಅಮೆರಿಕ ಈ ಮೊದಲೇ ಬ್ರಿಟನ್‌ ಸಹಿತ ಯುರೋಪ್‌ನ ವಿವಿಧ ರಾಷ್ಟ್ರಗಳಿಗೆ ಹುವೈ ನಿರ್ಬಂಧ ಕುರಿತು ಸೂಚನೆ ವಿಧಿಸಿತ್ತು. ಜತೆಗೆ ಬದಲಿ ವ್ಯವಸ್ಥೆಗೆ ಸಹಾಯ ಮಾಡುವುದಾಗಿ ಹೇಳಿತ್ತು. ಅದರ ಬೆನ್ನಲ್ಲೇ ಹಾಂಗ್ ಕಾಂಗ್ ವಿಚಾರದಲ್ಲಿ ಚೀನಾದ ನಡೆಯ ಬಳಿಕ ಬ್ರಿಟನ್ ಈಗ ಹುವೈಯನ್ನು ದೂರವಿರಿಸಲಾರಂಭಿಸಿದೆ.

ಹಾಂಗ್ ಕಾಂಗ್ ವಿಚಾರದಲ್ಲಿ ಲಂಡನ್ ಮತ್ತು ಬೀಜಿಂಗ್ ನಡುವಣ ಸಂದಭ ಕೂಡ ಹಳಸಿದೆ. ಮತ್ತೊಂದೆಡೆ ಇಟಲಿ, ಆಸ್ಟ್ರೇಲಿಯಾ ಕೂಡ ಚೀನಾದ ಹುವೈಯನ್ನು 5G ಇಂಟರ್‌ನೆಟ್ ಸಂಪರ್ಕ ಒದಗಿಸುವ ಕಾಮಗಾರಿ, ನೆಟ್‌ವರ್ಕ್ ವಿಸ್ತರಣೆಯಿಂದ ದೂರವಿರಿಸಲು ಚಿಂತನೆ ನಡೆಸಿವೆ. ಹೀಗಾಗಿ ಬ್ರಿಟನ್ ಕೂಡ ಹುವೈಯನ್ನು ದೂರವಿರಿಸಲು ಮುಂದಾಗಿದೆ. ಆದರೆ ಒಮ್ಮೆಲೆ ಹುವೈಯ ನಿರ್ಬಂಧ ಸಾಧ್ಯವಿಲ್ಲದ ಕಾರಣ, ಹಂತಹಂತವಾಗಿ ಚೀನಾದ ಹುವೈಯನ್ನು 5G ಕ್ಷೇತ್ರದಿಂದ ತೆಗೆದುಹಾಕುವುದಾಗಿ ಬೋರಿಸ್ ಸರಕಾರ ನಿರ್ಣಯ ಕೈಗೊಳ್ಳಲಿದೆ.

Lava Z61 Pro: ಮಾರುಕಟ್ಟೆಗೆ ಬಂತು ಮೇಡ್ ಇನ್ ಇಂಡಿಯಾ ಬಜೆಟ್ ಸ್ಮಾರ್ಟ್‌ಫೋನ್

ಜತೆಗೆ ಬ್ರಿಟನ್‌ನಲ್ಲಿ ಹುವೈ ನೆಟ್‌ವರ್ಕ್ ಜತೆಗೆ ಸಹಯೋಗ ಹೊಂದಿರುವ ಎಲ್ಲ ಕಂಪನಿಗಳಿಗೂ ಸೂಚನೆ ನೀಡಿದ್ದು, ಮುಂದೆ ಹುವೈ ಹೊರತಾದ ಮತ್ತು ಚೀನಾ ಹೊರತಾದ ಇತರ ಕಂಪನಿಗಳಿಗೆ ಆದ್ಯತೆ ನೀಡಲು ಮುಂದಾಗಿದೆ. ಹುವೈ ಜಾಗತಿಕವಾಗಿ 5G ಅಳವಡಿಕೆಯಲ್ಲಿ ಮುಂಚೂಣಿಯಲ್ಲಿದೆ. ಆದರೆ ಪ್ರಸ್ತುತ ಒಂದೊಂದಾಗಿ ರಾಷ್ಟ್ರಗಳು ಹುವೈಗೆ ನಿರ್ಬಂಧ ವಿಧಿಸುತ್ತಿದೆ. ಇದರಿಂದ ಚೀನಾ ಮುಖಭಂಗ ಅನುಭವಿಸಲಿದೆ.

Huawei 5G: ಅಮೆರಿಕ ಆಯ್ತು, ಇಟಲಿ, ಬ್ರೆಜಿಲ್‌ನಲ್ಲೂ ಚೀನಾದ ಹುವೈಗೆ ನಿರ್ಬಂಧ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌