ಆ್ಯಪ್ನಗರ

4ಜಿಗೆ ಹೆಚ್ಚಿದ ಬೇಡಿಕೆ: 3ಜಿ ತಂತ್ರಜ್ಞಾನ ಸ್ಧಗಿತಕ್ಕೆ ಏರ್‌ಟೆಲ್ ಚಾಲನೆ

2011ರಿಂದ ಇಂಟರ್ನೆಟ್ ವೇಗದೊಂದಿಗೆ ಕ್ರಾಂತಿ ಮಾಡಿದ್ದ 3ಜಿ ನೆಟ್ವರ್ಕ್ ಸೇವೆಯನ್ನು ಸ್ಥಗಿತಗೊಳಿಸಲು ಏರ್‌ಟೆಲ್ ನಿರ್ಧರಿಸಿದ್ದು, ಕೋಲ್ಕತಾದಿಂದ ಕಾರ್ಯಾಚರಣೆ ಆರಂಭಿಸಿದೆ. 4ಜಿ ಇಂಟರ್ನೆಟ್ ಸೇವೆಯನ್ನು ಉತ್ತೇಜಿಸುವುದೇ ಇದರ ಹಿಂದಿನ ಉದ್ದೇಶ.

Agencies 1 Jul 2019, 1:06 pm
ಭಾರ್ತಿ ಏರ್‌ಟೆಲ್ ತನ್ನ 3ಜಿ ಸೇವೆಗಳನ್ನು ಸ್ಥಗಿತಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದು, ಕೋಲ್ಕತಾದಿಂದ ಕಾರ್ಯಾಚರಣೆ ಪ್ರಾರಂಭಿಸಿದೆ. ಗ್ರಾಹಕರು ತಕ್ಷಣ 4ಜಿ ಇಂಟರ್ನೆಟ್ ಸೇವೆಗೆ ಬದಲಾಗುವಂತೆ ಅದು ತನ್ನ ಗ್ರಾಹಕರನ್ನು ಪ್ರೋತ್ಸಾಹಿಸುತ್ತಿದೆ.
Vijaya Karnataka Web bsnl tower
Picture used for representational purpose only


ಶುಕ್ರವಾರ ಕೋಲ್ಕತಾದಲ್ಲಿ 3ಜಿ ಸೇವೆಯನ್ನು ಸ್ಧಗಿತಗೊಳಿಸಿರುವ ಏರ್‌ಟೆಲ್, ಅದಕ್ಕಾಗಿ ಬಳಸುತ್ತಿದ್ದ 900MHz ಸ್ಪೆಕ್ಟ್ರಂ ಅನ್ನು 4ಜಿ ಸೇವೆಗಾಗಿ ಮರುರೂಪಿಸಲಾಗುತ್ತಿದೆ ಎಂದು ತಿಳಿಸಿದೆ.

ಇದರೊಂದಿಗೆ, 2011ರಲ್ಲಿ ಭಾರತದಲ್ಲಿ ಚಾಲನೆಗೆ ಬಂದಿದ್ದ 3ಜಿ ತಂತ್ರಜ್ಞಾನವು ಅತ್ಯಂತ ವೇಗವಾಗಿ ತೆರೆಮರೆಗೆ ಸರಿಯುವ ಲಕ್ಷಣಗಳು ಗೋಚರಿಸತೊಡಗಿದೆ.

ದೇಶಾದ್ಯಂತ 3ಜಿ ತರಂಗ ಗುಚ್ಛ (ಸ್ಪೆಕ್ಟ್ರಂ)ಗಳನ್ನು ಹಂತ ಹಂತವಾಗಿ 4ಜಿ ಹಂತಕ್ಕೆ ಏರಿಸಲಿರುವುದಾಗಿ ಭಾರ್ತಿ ಏರ್‌ಟೆಲ್ ಮುಖ್ಯ ತಾಂತ್ರಿಕ ಅಧಿಕಾರಿ ರಣದೀಪ್ ಶೇಖನ್ ತಿಳಿಸಿದ್ದಾರೆ. ಮುಂದಿನ ಆರು ತಿಂಗಳಲ್ಲೇ ಏರ್‌ಟೆಲ್ ತನ್ನ 3ಜಿ ಸೇವೆಯನ್ನು ಸ್ಥಗಿತಗೊಳಿಸಿ, ಎಲ್ಲ ಗ್ರಾಹಕರೂ 4ಜಿ ಸೇವೆ ಬಳಸುವಂತೆ ಕ್ರಮ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಇದರ ಜತೆಗೆ, VoLTE ಸೇವೆಯನ್ನೂ ಉನ್ನತೀಕರಿಸಲಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌