ಆ್ಯಪ್ನಗರ

ಪ್ರೀಪೇಡ್ ಬೆಲೆ ಹೆಚ್ಚಿಸಿದ ಏರ್‌ಟೆಲ್‌ನಿಂದ ಇದೀಗ ಉಚಿತ ಡೇಟಾ ಆಫರ್!

ಏರ್‌ಟೆಲ್ ಕಂಪನಿಯ ವೆಬ್‌ಸೈಟ್‌ನಲ್ಲಿ ಹೊಸ ದರಗಳಲ್ಲಿ ರೀಚಾರ್ಜ್ ಯೋಜನೆಗಳು ಆರಂಭವಾಗಿದ್ದು, ಏರ್‌ಟೆಲ್ ತನ್ನ ನಾಲ್ಕು ಪ್ರಿಪೇಯ್ಡ್ ಯೋಜನೆಗಳ ಡೇಟಾ ಪ್ರಯೋಜನಗಳನ್ನು 500MB ಉಚಿತ ಡೇಟಾದೊಂದಿಗೆ ನವೀಕರಿಸಿದೆ.

Vijaya Karnataka Web 26 Nov 2021, 2:04 pm
ಏರ್‌ಟೆಲ್‌ ತನ್ನ ಪ್ರಿಪೇಯ್ಡ್ ಯೋಜನೆಗಳನ್ನು ಹೆಚ್ಚಿಸಿದ ನಂತರ ಇದೀಗ ತನ್ನ ಗ್ರಾಹಕರಿಗೆ ಉಚಿತವಾಗಿ ಹೆಚ್ಚುವರಿ ಡೇಟಾ ನೀಡಲು ಮುಂದಾಗಿದೆ. ಏರ್‌ಟೆಲ್ ಕಂಪನಿಯ ವೆಬ್‌ಸೈಟ್‌ನಲ್ಲಿ ಹೊಸ ದರಗಳಲ್ಲಿ ರೀಚಾರ್ಜ್ ಯೋಜನೆಗಳು ಆರಂಭವಾಗಿದ್ದು, ಏರ್‌ಟೆಲ್ ತನ್ನ ನಾಲ್ಕು ಪ್ರಿಪೇಯ್ಡ್ ಯೋಜನೆಗಳ ಡೇಟಾ ಪ್ರಯೋಜನಗಳನ್ನು 500MB ಉಚಿತ ಡೇಟಾದೊಂದಿಗೆ ನವೀಕರಿಸಿದೆ. ಅಂದರೆ, ಏರ್‌ಟೆಲ್ Rs 719, Rs 299, Rs 265 ಮತ್ತು Rs 839 ಪ್ಲಾನ್‌ಗಳೊಂದಿಗೆ ರೀಚಾರ್ಜ್ ಮಾಡುವ ಏರ್‌ಟೆಲ್ ಬಳಕೆದಾರರು ಪ್ರತಿದಿನ ಅರ್ಧ ಗಿಗಾಬೈಟ್ ಅಥವಾ 500GB ಡೇಟಾವನ್ನು ಕಂಪನಿಯಿಂದ ಉಚಿತವಾಗಿ ಪಡೆಯಲು ಸಾಧ್ಯವಾಗುತ್ತದೆ. ಆದರೆ, ಈ 500MB ಡೇಟಾ ಆಫರ್ ಅನ್ನು ಗ್ರಾಹಕರು ರಿಡೀಮ್ ಮಾಡಿಕೊಳ್ಳಬೇಕಿದೆ.
Vijaya Karnataka Web airtel


ಏರ್‌ಟೆಲ್ ನೀಡಿರುವ ಈ ನಾಲ್ಕು ಪ್ರಿಪೇಯ್ಡ್ ಯೋಜನೆಗಳಲ್ಲಿ 500MB ಹೆಚ್ಚುವರಿ ದೈನಂದಿನ ಡೇಟಾವನ್ನು ರಿಡೀಮ್ ಮಾಡುವ ವಿಧಾನ ತುಂಬಾ ಸರಳವಾಗಿದ್ದು, ಏರ್‌ಟೆಲ್ ಬಳಕೆದಾರರು ಈ ನಾಲ್ಕು ಯೋಜನೆಗಳಲ್ಲಿ ಒಂದು ಯೋಜನೆಯನ್ನು ರೀಚಾರ್ಜ್ ಮಾಡಿಕೊಂಡು, ನಂತರ ಏರ್‌ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಂಡರೆ, ಆಪ್‌ನಲ್ಲಿ 500MB ಉಚಿತ ಡೇಟಾವನ್ನು ರಿಡೀಮ್ ಮಾಡಿಕೊಳ್ಳುವ ಅಯ್ಕೆ ಕಾಣಿಸಲಿದೆ. ಈ ಮೂಲಕ ಉಚಿತವಾಗಿ 500MB ಹೆಚ್ಚುವರಿ ದೈನಂದಿನ ಡೇಟಾವನ್ನು ಪಡೆಯಬಹುದಾಗಿದೆ.ಮೇಲಿನ ಎಲ್ಲಾ ನಾಲ್ಕು ಯೋಜನೆಗಳು ಅನಿಯಮಿತ ಧ್ವನಿ ಕರೆ ಮತ್ತು ಪ್ರತಿದಿನ 100 ಎಸ್‌ಎಂಎಸ್‌ಗಳ ಜೊತೆಗೆ ಪ್ರತಿದಿನ ಡೇಟಾವನ್ನು ಒದಗಿಸುತ್ತಿದ್ದು, ಇವುಗಳ ಪರಿಚಯ ಇಲ್ಲಿದೆ.

ಏರ್‌ಟೆಲ್ ಹೊಸದಾಗಿ ನೀಡುತ್ತಿರುವ 839 ರೂಪಾಯಿಗಳ ಯೋಜನೆಯು ಬಳಕೆದಾರರಿಗೆ 2GB ದೈನಂದಿನ ಡೇಟಾವನ್ನು ನೀಡುತ್ತದೆ.ಜೊತೆಗೆ ಏರ್‌ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್‌ನಿಂದ 500MB ಹೆಚ್ಚುವರಿ ದೈನಂದಿನ ಡೇಟಾದೊಂದಿಗೆ, ಬಳಕೆದಾರರು ಒಟ್ಟು 2.5GB ದೈನಂದಿನ ಡೇಟಾವನ್ನು ಪಡೆಯುತ್ತಾರೆ. ಇನ್ನು 265 ರೂ ಯೋಜನೆಯು 1GB ದೈನಂದಿನ ಡೇಟಾದೊಂದಿಗೆ ಲಭ್ಯವಿದೆ. ಜೊತೆಗ ಬೋನಸ್ 500MB ಡೇಟಾದೊಂದಿಗೆ ಪ್ರತಿದಿನ 1.5GB ದೈನಂದಿನ ಡೇಟಾದೊಂದಿಗೆ ಈ ಯೋಜನೆ ಲಭ್ಯವಿದೆ. ಈ ಎರಡೂ ಯೋಜನೆಗಳಲ್ಲಿಯೂ ಅನಿಯಮಿತ ಧ್ವನಿ ಕರೆ ಮತ್ತು ಪ್ರತಿದಿನ 100 ಎಸ್‌ಎಂಎಸ್‌ಗಳನ್ನು ಹೊಂದಿರುವುದನ್ನು ನಾವು ನೋಡಬಹುದು.
10,999 ರೂ.ಗೆ ಹೊಸ 'Tecno Spark 8' ಫೋನ್ ಲಾಂಚ್!..ಖರೀದಿಗೆ ಭರ್ಜರಿ ಆಫರ್!
ಹಾಗೆಯೇ, ರೂ 299 ಮತ್ತು ರೂ 719 ಎರಡೂ ಯೋಜನೆಗಳು 1.5GB ದೈನಂದಿನ ಡೇಟಾವನ್ನು ನೀಡುತ್ತವೆ, ಇದು ಕಂಪನಿಯು ನೀಡುವ 500MB ಹೆಚ್ಚುವರಿ ಡೇಟಾದೊಂದಿಗೆ 2GB ದೈನಂದಿನ ಡೇಟಾದಲ್ಲಿ ಈ ಯೋಜನೆಗಳನ್ನು ಪಡೆಯಬಹುದಾಗಿದೆ. ರೂ 299 ಮತ್ತು ರೂ 265 ಪ್ಲಾನ್‌ಗಳು 28 ದಿನಗಳ ಅಲ್ಪ ವ್ಯಾಲಿಡಿಟಿಯೊಂದಿಗೆ ಬರುತ್ತವೆ. ಆದರೆ ರೂ 719 ಮತ್ತು ರೂ 839 ಪ್ಲಾನ್‌ಗಳು ಮಧ್ಯಮ-ಅವಧಿಯ ಬಳಕೆದಾರರಿಗೆ ಸೂಕ್ತವಾದ 84 ದಿನಗಳ ಸೇವಾ ಮಾನ್ಯತೆಯೊಂದಿಗೆ ಬರುತ್ತವೆ ಮತ್ತು ಒಂದು ತಿಂಗಳಿಗೆ ಅಮೆಜಾನ್ ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿ, ವೈಂಕ್ ಮ್ಯೂಸಿಕ್ ಮತ್ತು ಹೆಚ್ಚಿನವು ಸೇರಿದಂತೆ ಎಲ್ಲಾ ಇತರ ಏರ್‌ಟೆಲ್ ಥ್ಯಾಂಕ್ಸ್ ಪ್ರಯೋಜನಗಳನ್ನು ಸಹ ಹೊಂದಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌