ಆ್ಯಪ್ನಗರ

Prepaid Plan: ಏರ್‌ಟೆಲ್, ವೊಡಾಫೋನ್ ಐಡಿಯಾ ಗ್ರಾಹಕರಿಗೆ ಮತ್ತೆ ಬೆಲೆಯೇರಿಕೆ ಬಿಸಿ!

ಸುಪ್ರೀಂಕೋರ್ಟ್‌ ಎಜಿಆರ್‌ ಶುಲ್ಕಕ್ಕೆ ಸಂಬಂಧಿಸಿ ಟೆಲಿಕಾಂ ಕಂಪನಿಗಳ ವಿರುದ್ಧ ಆದೇಶ ನೀಡಿತ್ತು. ಇದರಿಂದಾಗಿ ವೊಡಾಫೋನ್‌ ಐಡಿಯಾ, ಭಾರ್ತಿ ಏರ್‌ ಟೆಲ್‌ ದೊಡ್ಡ ಮೊತ್ತದ ಹಣವನ್ನು ಪಾವತಿಸಬೇಕಿದೆ.

Vijaya Karnataka Web 23 Jan 2020, 12:57 pm
ಎಜಿಆರ್ ಶುಲ್ಕಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪು ಏರ್‌ಟೆಲ್, ವೊಡಾಫೋನ್ ಐಡಿಯಾಗೆ ಸಮಸ್ಯೆಯಾಗಿ ಪರಿಣಮಿಸಿದೆ. ಇದರಿಂದಾಗಿ ಎಜಿಆರ್ ಶುಲ್ಕ ಪಾವತಿಸುವ ಸಲುವಾಗಿ ಭಾರ್ತಿ ಏರ್‌ಟೆಲ್, ವೊಡಾಫೋನ್ ಗ್ರಾಹಕರಿಂದಲೇ ವಸೂಲಿ ಮಾಡುವ ಸಾಧ್ಯತೆಯಿರುವುದರಿಂದ ಮೊಬೈಲ್ ಬಿಲ್ ಮತ್ತೆ ಶೇ. 30ರವರೆಗೆ ಏರಿಕೆಯಾಗುವ ಸಂಭವವಿದೆ. ಸುಪ್ರೀಂಕೋರ್ಟ್ ತೀರ್ಪಿನ ಮರುಪರಿಶೀಲನೆಗೆ ಒಪ್ಪದಿರುವುದು ಟೆಲಿಕಾಂ ಕಂಪನಿಗಳಿಗೆ ಮಾತ್ರವಲ್ಲ, ಗ್ರಾಹಕರಿಗೂ ಹೊರೆಯಾಗಲಿದೆ.
Vijaya Karnataka Web airtel vodafone idea tariff to hike after supreme court instruction on agr dues
Prepaid Plan: ಏರ್‌ಟೆಲ್, ವೊಡಾಫೋನ್ ಐಡಿಯಾ ಗ್ರಾಹಕರಿಗೆ ಮತ್ತೆ ಬೆಲೆಯೇರಿಕೆ ಬಿಸಿ!



​ಶೇ. 25 ರಿಂದ ಶೇ. 30 ಏರಿಕೆ

ಎವರೇಜ್ ರೆವಿನ್ಯೂ ಪರ್ ಯೂಸರ್ ಅಂದರೆ ಸರಾಸರಿ ಆದಾಯ 18-200 ರವರೆಗೆ ಕಡಿಮೆಯಿದೆ. ಕಳೆದ ಬಾರಿಯೂ ಬೆಲೆ ಏರಿಕೆಯಾಗಿದ್ದು, ಈ ಬಾರಿ ಮತ್ತೆ ಶೇ. 30ವರೆಗೆ ಏರಿಕೆ ಕಂಡುಬರಲಿದೆ. ಟೆಲಿಕಾಂ ಕಂಪನಿ ದರ ಏರಿಕೆಯ ಅನಿವಾರ್ಯತೆಗೆ ಸಿಲುಕಿದ್ದು, ವರ್ಷಾಂತ್ಯಕ್ಕೆ ಒಟ್ಟಾರೆ ಮತ್ತೆ ಶೇ. 30 ದರ ಏರಿಕೆ ಅಂದಾಜಿಸಲಾಗಿದೆ.

​ಸುಪ್ರೀಂ ಸೂಚನೆ

ಎಜಿಆರ್‌ ಶುಲ್ಕಕ್ಕೆ ಸಂಬಂಧಿಸಿ ಟೆಲಿಕಾಂ ಕಂಪನಿಗಳ ವಿರುದ್ಧ ಸುಪ್ರೀಂಕೋರ್ಟ್ ಇತ್ತೀಚೆಗೆ ಆದೇಶ ನೀಡಿತ್ತು. ಪ್ರಕರಣದಲ್ಲಿ ದೂರ ಸಂಪರ್ಕ ಇಲಾಖೆಯ ಪರ ಸುಪ್ರೀಂ ಆದೇಶ ಬಂದಿತ್ತು. ಇದರ ಪರಿಣಾಮ ವೊಡಾಫೋನ್‌ ಐಡಿಯಾ, ಭಾರ್ತಿ ಏರ್‌ ಟೆಲ್‌ ದೊಡ್ಡ ಮೊತ್ತದ ಹಣವನ್ನು ಪಾವತಿಸಬೇಕಿದೆ. ಒಂದು ವೇಳೆ ವೊಡಾಫೋನ್‌ ಐಡಿಯಾ ಪರನವಾದರೆ ಭಾರ್ತಿ ಏರ್‌ ಟೆಲ್‌, ರಿಲಯನ್ಸ್‌ ಜಿಯೊ ದೊಡ್ಡ ಮಟ್ಟಿನಲ್ಲಿ ದರ ಏರಿಸುವ ಸಾಧ್ಯತೆ ಇದೆ. ವೊಡಾಫೋನ್‌ ಐಡಿಯಾ ಎಜಿಆರ್‌ ಶುಲ್ಕ ಬಾಕಿಯನ್ನು ಪಾವತಿಸಬೇಕಿದೆ.

​ಬಾಕಿ ಹೊರೆ ತಪ್ಪಿಸಲು ತಂತ್ರ

ಸುಪ್ರೀಂ ಸೂಚನೆಯಂತೆ ಸರಕಾರಕ್ಕೆ ದುಬಾರಿ ಮೊತ್ತವನ್ನು ಭಾರ್ತಿ ಏರ್‌ಟೆಲ್, ವೊಡಾಫೋನ್ ಐಡಿಯಾ ಪಾವತಿಸಬೇಕಿದೆ. ಆದರೆ ಈಗಾಗಲೇ ಲಾಭ ಗಳಿಕೆಯಲ್ಲಿ ಹಿಂದೆ ಬಿದ್ದಿರುವ ಕಂಪನಿಗಳು ಶುಲ್ಕ ಪಾವತಿಯಲ್ಲಿ ವಿನಾಯಿತಿ ಕೋರಿದ್ದರೂ ಅದು ಸಾಧ್ಯವಾಗಿಲ್ಲ. ಅಲ್ಲದೆ ಅರ್ಜಿ ಮರುಪರಿಶೀಲನೆಗೆ ಸುಪ್ರೀಂ ನಿರಾಕರಿಸಿದೆ. ಹೀಗಾಗಿ ಶುಲ್ಕ ಪಾವತಿ ಹೊರೆ ತಪ್ಪಿಸಲು ಕಂಪನಿಗಳು ತಂತ್ರಕ್ಕೆ ಮುಂದಾಗಿದೆ.

​ಸುಪ್ರೀಂ ಡೆಡ್‌ಲೈನ್

ವೊಡಾಫೋನ್‌ ಐಡಿಯಾ ಮತ್ತು ಏರ್‌ಟೆಲ್ ಒಟ್ಟಾರೆ 53,039 ಕೋಟಿ ರೂ. ಎಜಿಆರ್‌ ಶುಲ್ಕ ಬಾಕಿಯನ್ನು ಪಾವತಿಸಬೇಕಿದೆ. ಇದರಿಂದಾಗಿ ಜನವರಿ 23ರೊಳಗೆ ಅದು ಸರಕಾರಕ್ಕೆ ಈ ಮೊತ್ತ ನೀಡಬೇಕಿದೆ.

​ಯಾವ ಕಂಪನಿಗೆ ಎಷ್ಟು ಶುಲ್ಕ?

ಟೆಲಿಕಾಂ ಸಚಿವಾಲಯದ ಪ್ರಕಾರ, ವೊಡಾಫೋನ್ ಐಡಿಯಾ ಒಟ್ಟು 19,823.71 ಕೋಟಿ ರೂ., ಏರ್‌ಟೆಲ್ 23,000 ಕೋಟಿ ರೂ. ಮತ್ತು ಆರ್‌ಕಾಂ 16,456.47 ಕೋಟಿ ರೂ. ಮೊತ್ತವನ್ನು ಪಾವತಿಸಬೇಕಿದೆ.

​ಬಳಕೆದಾರರಿಂದ ಸರಾಸರಿ ಆದಾಯ ಕಡಿಮೆ

ದೇಶದಲ್ಲಿನ ಎಲ್ಲ ಟೆಲಿಕಾಂ ಕಂಪನಿಗಳು ಒಟ್ಟಾರೆಯಾಗಿ ಕಡಿಮೆಯಿದೆ. ಮುಂದಿನ ಕೆಲ ತಿಂಗಳುಗಳಲ್ಲಿ ಟೆಲಿಕಾಂ ಕಂಪನಿಗಳಿಗೆ ಪ್ರತಿ ಬಳಕೆದಾರರಿಂದ ಸರಾಸರಿ ಆದಾಯ (ಎಆರ್‌ಪಿಯು) 120 ರೂ.ಗಳಿಂದ 160 ರೂ.ಗೆ ವೃದ್ಧಿಸುವ ಸಾಧ್ಯತೆ ಇದೆ. ತಿಂಗಳಿನ ಹಿಂದೆಯಷ್ಟೇ ಭಾರ್ತಿ ಏರ್‌ಟೆಲ್‌, ವೊಡಾಫೋನ್‌ ಐಡಿಯಾ, ರಿಲಯನ್ಸ್‌ ಜಿಯೊ ದರಗಳನ್ನು 14-33ರಷ್ಟು ಏರಿಸಿದ್ದವು. ಆದರೆ ಮತ್ತೆ ದರ ಏರಿಕೆಯಿಂದ ಮೊಬೈಲ್ ಚಂದಾದಾರರ ಸಂಖ್ಯೆಯಲ್ಲಿ ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌