ಆ್ಯಪ್ನಗರ

Great Indian Sale: ಮತ್ತೊಮ್ಮೆ ಅಮೆಜಾನ್ ಆಫರ್ ಸೇಲ್

ದೇಶದ ಇ ಕಾಮರ್ಸ್ ಕ್ಷೇತ್ರದಲ್ಲಿ ಪ್ರಮುಖವಾಗಿರುವ ಅಮೆಜಾನ್ ಮತ್ತೊಮ್ಮೆ ವಿಶೇಷ ಗ್ರೇಟ್ ಇಂಡಿಯನ್ ಸೇಲ್ ನಡೆಸಲು ಸಿದ್ಧವಾಗಿದೆ. ಈ ಬಾರಿಯ ಆಫರ್, ಡಿಸ್ಕೌಂಟ್ ಕೊಡುಗೆಗಳ ಕುರಿತು ಮಾಹಿತಿ ಇಲ್ಲಿದೆ.

Times Now 10 Jan 2020, 5:41 pm
ಅಮೆಜಾನ್‌ ಗ್ರೇಟ್ ಇಂಡಿಯನ್ ಸೇಲ್ ಮತ್ತೆ ಬಂದಿದೆ. ಜ. 19ರಂದು ಆರಂಭವಾಗುವ ಆಫರ್ ಸೇಲ್ ಜ. 22ರವರೆಗೆ ನಡೆಯಲಿದೆ. ನಾಲ್ಕು ದಿನಗಳ ವಿಶೇಷ ಸೇಲ್‌ನಲ್ಲಿ ಈ ಬಾರಿ ಗ್ರಾಹಕರು ಎಸ್‌ಬಿಐ ಕಾರ್ಡ್ ಬಳಸಿದರೆ ಶೇ. 10 ಡಿಸ್ಕೌಂಟ್ ಕೂಡ ಲಭ್ಯವಾಗಲಿದೆ.
Vijaya Karnataka Web Amazon
Great India Sale


ಅಮೆಜಾನ್ ಪ್ರೈಮ್ ಸದಸ್ಯರಿಗೆ ಜ. 18ರಂದೇ ಮಧ್ಯಾಹ್ನ 12 ಗಂಟೆಗೆ ಸೇಲ್ ಪ್ರಯೋಜನ ಲಭ್ಯವಾಗಲಿದೆ.

ಯಾವೆಲ್ಲ ಕೊಡುಗೆಗಳಿವೆ?
ಅಮೆಜಾನ್ ಆಫರ್ ಸೇಲ್‌ನಲ್ಲಿ ಈ ಬಾರಿ ಸ್ಮಾರ್ಟ್‌ಫೋನ್, ಗೃಹಬಳಕೆಯ ಎಲೆಕ್ಟ್ರಾನಿಕ್ ಉತ್ಪನ್ನ, ಮನೆ ಮತ್ತು ಅಡುಗೆಯ ಉಪಕರಣಗಳು, ಟಿವಿ ಖರೀದಿಗೆ ವಿಶೇಷ ಕೊಡುಗೆ ದೊರೆಯಲಿದೆ. ಸ್ಮಾರ್ಟ್‌ಫೋನ್ ಖರೀದಿಗೆ ಶೇ. 40ರವರೆಗೆ ಮತ್ತು ಎಲೆಕ್ಟ್ರಾನಿಕ್ ಉತ್ಪನ್ನಗಳಿಗೆ ಶೇ. 60ರವರೆಗೆ ಡಿಸ್ಕೌಂಟ್ ದೊರೆಯಲಿದೆ.

ಎಸ್‌ಬಿಐ ಕಾರ್ಡ್‌ಗೆ ಡಿಸ್ಕೌಂಟ್
ಗ್ರಾಹಕರು ಅಮೆಜಾನ್‌ ಗ್ರೇಟ್ ಇಂಡಿಯನ್ ಸೇಲ್‌ನಲ್ಲಿ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಮತ್ತು ಇಎಂಐ ಬಳಸಿದರೆ, ಶೇ. 10 ಡಿಸ್ಕೌಂಟ್ ಲಭ್ಯವಾಗಲಿದೆ. ಜತೆಗೆ ಬಜಾಜ್‌ ಫಿನ್‌ಸರ್ವ್ ಕಾರ್ಡ್‌, ಆಯ್ದ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗೆ ನೋ ಕಾಸ್ಟ್ ಇಎಂಐ ಆಫರ್ ಕೂಡ ದೊರೆಯಲಿದೆ.

Aadhaar Correction: ಮೊಬೈಲ್ ನಂಬರ್ ತಿದ್ದುಪಡಿ ಹೇಗೆ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌