ಆ್ಯಪ್ನಗರ

ಐಫೋನ್ ಬದಲು ಬಟ್ಟೆ ಸೋಪ್ ಪಡೆದಿದ್ದ ಅಮೆಜಾನ್ ಗ್ರಾಹಕನ ಕಥೆ ಏನಾಯ್ತು?

ಆಲುವಾ ನಿವಾಸಿ ನೂರುಲ್ ಅಮೀನ್ ಎಂಬವರು ಐಫೋನ್ 12 ಖರೀದಿಸಲೆಂದು 70,900 ರೂಪಾಯಿಯನ್ನು ಅಮೆಜಾನ್ ಮೂಲಕ ಪಾವತಿಸಿದ್ದರು. ಆದರೆ ಪೊಲೀಸ್ ಮಧ್ಯಸ್ಥಿಕೆ ಹಿನ್ನೆಲೆಯಲ್ಲಿ ಪಾವತಿಸಿದ ಸಂಪೂರ್ಣ ಹಣ ಮೋಸ ಹೋದ ಗ್ರಾಹಕನ ಖಾತೆಗೆ ವಾಪಾಸಾಗಿದೆ ಎಂದು ತಿಳಿದುಬಂದಿದೆ. ಇದರಿಂದ ಗ್ರಾಹಕನು ನಿಟ್ಟುಸಿರು ಬಿಟ್ಟಿದ್ದಾನೆ.

Vijaya Karnataka Web 25 Oct 2021, 1:15 pm
70,900 ಮೌಲ್ಯದ ಆಪಲ್ ಐಫೋನ್ -12 ಅನ್ನು ಆರ್ಡರ್ ಮಾಡಿದ್ದ ಗ್ರಾಹಕನು ಪಾತ್ರೆ ತೊಳೆಯುವ ಸೋಪ್ ಮತ್ತು 5 ರೂ ನಾಣ್ಯವನ್ನು ಸ್ವೀಕರಿಸಿದ ಪ್ರಕರಣದಲ್ಲಿ ಅಮೆಜಾನ್ ಸಂಪೂರ್ಣ ಮೊತ್ತವನ್ನು ಮರುಪಾವತಿಸಿದೆ. ಆಲುವಾ ನಿವಾಸಿ ನೂರುಲ್ ಅಮೀನ್ ಎಂಬವರು ಐಫೋನ್ 12 ಖರೀದಿಸಲೆಂದು 70,900 ರೂಪಾಯಿಯನ್ನು ಅಮೆಜಾನ್ ಮೂಲಕ ಪಾವತಿಸಿದ್ದರು. ಆದರೆ ಪೊಲೀಸ್ ಮಧ್ಯಸ್ಥಿಕೆ ಹಿನ್ನೆಲೆಯಲ್ಲಿ ಪಾವತಿಸಿದ ಸಂಪೂರ್ಣ ಹಣ ಮೋಸ ಹೋದ ಗ್ರಾಹಕನ ಖಾತೆಗೆ ವಾಪಾಸಾಗಿದೆ ಎಂದು ತಿಳಿದುಬಂದಿದೆ. ಇದರಿಂದ ಗ್ರಾಹಕನು ನಿಟ್ಟುಸಿರು ಬಿಟ್ಟಿದ್ದಾನೆ.
Vijaya Karnataka Web Amazon refunds Rs70,000 to an Aluva resident who received soap instead of an Apple phone


ಹೌದು, ಐಫೋನ್ ಬದಲು ಬಟ್ಟೆ ಒಗೆಯುವ ಸೋಪ್ ಹಾಗೂ 5 ರೂಪಾಯಿ ನಾಣ್ಯ ಸಿಕ್ಕಿದ ಗ್ರಾಹಕನಿಗೆ ಅಮೆಜಾನ್ 70,900 ರೂ. ವಾಪಸ್ ಕೊಟ್ಟಿದೆ. ಕೇರಳದ ನೂರುಲ್ ಅಮೀನ್ ಅವರು ಅಕ್ಟೋಬರ್ 12 ರಂದು ಅಮೆಜಾನ್ ಮೂಲಕ ಐಫೋನ್ 12 ಆರ್ಡರ್ ಮಾಡಿದ್ದರು. ಇದಕ್ಕೆ ಅವರು ತಮ್ಮ ಕ್ರೆಡಿಟ್ ಕಾರ್ಡ್ ಬಳಸಿದ್ದರು. ಆದರೆ ಮನೆಗೆ ಬಂದ ಪಾರ್ಸೆಲ್ ಓಪನ್ ಮಾಡಿದಾಗ ಅದರಲ್ಲಿ ಮೊಬೈಲ್ ಬದಲು ಬಟ್ಟೆ ಒಗೆಯುವ ಸೋಪ್ ಹಾಗೂ 5 ರೂಪಾಯಿ ನಾಣ್ಯ ಸಿಕ್ಕಿತ್ತು. ಈ ಬಗ್ಗೆ ದೂರು ದಾಖಲಿಸಿದ್ದ ಅವರಿಗೆ ಪೊಲೀಸ್ ಮಧ್ಯಸ್ಥಿಕೆಯಲ್ಲಿ ಹಣವು ಮರಳಿ ಸಿಕ್ಕಿದೆ.

ನೂರುಲ್ ಅಮೀನ್ ಆಗಾಗ ಅಮೆಜಾನ್ ಖರೀದಿದಾರರಾಗಿದ್ದು, ತನ್ನ ಕ್ರೆಡಿಟ್ ಕಾರ್ಡ್ ಅನ್ನು ಇಎಂಐ ಆಗಿ ಬಳಸಿಕೊಂಡು ಅಕ್ಟೋಬರ್ 12 ರಂದು ಅಮೆಜಾನ್ ವಿಶ್ವಾಸಾರ್ಹ ಮಾರಾಟಗಾರ ಅಪ್ಪಾರಿಯೊ ಮೂಲಕ ಐಫೋನ್ ಖರೀದಿಸಿದ್ದಾರೆ.. ಹೈದರಾಬಾದ್‌ನಿಂದ ಕಳುಹಿಸಲಾಗಿದ್ದ ಫೋನ್ ಸೇಲಂನಲ್ಲಿ ಒಂದು ದಿನ ಸ್ಥಗಿತಗೊಂಡಿತ್ತು. ಇದರಿಂದ ಅನುಮಾನಗೊಂಡ ಆತ ಅದನ್ನು ಡೆಲಿವರಿ ಬಾಯ್ ಮುಂದೆ ಬಿಚ್ಚಿಟ್ಟರು. ಡೆಲಿವರಿ ಬಾಯ್ ಮುಂದೆ ಅನ್ಬಾಕ್ಸ್ ಮಾಡುವ ಮೂಲಕ ಮತ್ತು ಅದನ್ನು ಚಿತ್ರೀಕರಿಸಿ ತನಗೆ ಆಗಬಹುದಾದ ಮೋಸದಿಂದ ಅವರು ತಪ್ಪಿಸಿಕೊಂಡಿದ್ದಾರೆ.

ಹೈದರಾಬಾದ್‌ನಿಂದ ಅಮೆಜಾನ್ ಉತ್ಪನ್ನವು ಸಾಮಾನ್ಯವಾಗಿ ಎರಡು ದಿನಗಳಲ್ಲಿ ಕೊಚ್ಚಿಗೆ ಆಗಮಿಸುತ್ತದೆ. ಆದರೆ, ಈ ಬಾರಿ ಮೂರು ದಿನ ಬೇಕಾಯಿತು. ಪೆಟ್ಟಿಗೆಯಲ್ಲಿ ಐಫೋನ್ ಬದಲಿಗೆ ಸಾಬೂನು ಇಡುವ ಹಗರಣದ ಬಗ್ಗೆ ನೂರುಲ್ ಅಮೀನ್ ಅವರು ಈಗಾಗಲೇ ಕೇಳಿದ್ದ ಪರಿಣಾಮವಾಗಿ, ಅವರು ಜಾಗರೂಕರಾಗಿದ್ದರು. ಹೀಗಾಗಿ ಅನುಮಾನ ಬಂದ ಹಿನ್ನೆಲೆಯಲ್ಲಿ ಡೆಲಿವರಿ ಬಾಯ್ ಮುಂದೆಯೇ ಈ ಬಾಕ್ಸ್ ಓಪನ್ ಮಾಡಿದ್ದರು. ಆ ವೀಡಿಯೋ ಶೂಟ್ ಮಾಡಿ ಈ ಬಗ್ಗೆ ಕಂಪೆನಿಯ ಕಸ್ಟಮರ್ ಕೇರ್ ಹಾಗೂ ಕೇರಳ ಪೊಲೀಸ್ ಸೈಬರ್ ಕಚೇರಿಗೆ ದೂರು ಸಲ್ಲಿಸಿದ್ದರು.
ಇನ್ಮುಂದೆ ನಿಮ್ಮ ಮೊಬೈಲ್ ಮೂಲಕವೇ ನಿಮ್ಮ ಜಮೀನು ಸರ್ವೆ ಮಾಡಬಹುದು!
ಈ ಪ್ರಕರಣದ ಬಗ್ಗೆ ಸೈಬರ್ ಠಾಣೆಯ ವಿಶೇಷ ತಂಡವು ತನಿಖೆ ಶುರು ಮಾಡಿ, ಅಮೆಜಾನ್ ಸಂಪರ್ಕಿಸಿದೆ. ನಂತರ ನೂರುಲ್ ಅಮೀನ್‌ಗೆ ಬಂದ ಮೊಬೈಲ್ ಬಾಕ್ಸ್‌ನಲ್ಲಿ ಐಎಂಇಐ ನಂಬರ್ ಇತ್ತು. ಇದನ್ನು ಪರಿಶೀಲನೆ ನಡೆಸಿದಾಗ ಮೊಬೈಲ್ ಜಾರ್ಖಾಂಡ್‌ನಲ್ಲಿ ಬಳಕೆಯಾಗುತ್ತಿರುವ ಮಾಹಿತಿ ಸಿಕ್ಕಿದೆ. ಅದೇ ಐಫೋನ್‍ಗೆ ಆಪಲ್ ಸ್ಟೋರ್ ಖಾತೆಯೂ ಇತ್ತು. ಹಣ ವಾಪಸ್ ಸಿಕ್ಕಿದರೂ ಪ್ರಕರಣ ಮುಂದುವರಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಮೋಸದ ಜಾಲವನ್ನು ಹಿಡಿಯುವ ಸಲುವಾಗಿ ಪ್ರಕರಣದ ತನಿಖೆ ವೇಗವಾಗಿ ಮುಂದುವರಿದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌