ಆ್ಯಪ್ನಗರ

ಆಂಡ್ರಾಯ್ಡ್ ಫೋನ್‌ನಲ್ಲಿ ಈ 24 ಆ್ಯಪ್ಸ್ ಇದ್ದರೆ, ತಕ್ಷಣ ಅನ್‌ಇನ್‌ಸ್ಟಾಲ್ ಮಾಡಿಬಿಡಿ

ಆಂಡ್ರಾಯ್ಡ್ ಆ್ಯಪ್‌ಗಳಿಗೇ ಕುತಂತ್ರಾಂಶ (ಮಾಲ್ವೇರ್) ಬಾಧಿಸಿದ್ದು, ಅವುಗಳು ನಿಮ್ಮ ಮೊಬೈಲ್ ಫೋನ್‌ನಲ್ಲಿದ್ದರೆ ಅವುಗಳನ್ನು ತಕ್ಷಣ ಅಳಿಸಿಬಿಡಿ. ನಿಮ್ಮ ಮಾಹಿತಿ ಕದಿಯುವ ಈ 24 ಅಪಾಯಕಾರಿ ಫೋನ್‌ಗಳ ಪಟ್ಟಿ ಇಲ್ಲಿದೆ.

Vijaya Karnataka Web 9 Sep 2019, 3:59 pm
ಆನ್‌ಲೈನ್ ಬಳಕೆ ಹೆಚ್ಚುತ್ತಿರುವಂತೆಯೇ ವಂಚಕರ ಹಾವಳಿಯೂ ಹೆಚ್ಚಾಗುತ್ತಿದೆ. ಆ್ಯಪ್‌ಗಳಲ್ಲೇ ದುರುದ್ದೇಶಪೂರಿತ ತಂತ್ರಾಂಶಗಳನ್ನು (ಮಾಲ್‌ವೇರ್) ಅಳವಡಿಸಿ, ಬಳಕೆದಾರರ ಮಾಹಿತಿ ಕದಿಯುವ ದಂಧೆ ಜೋರಾಗಿಯೇ ನಡೆಯಲಾರಂಭಿಸಿದೆ. ಸೈಬರ್ ಸುರಕ್ಷತಾ ಕಂಪನಿಗಳು ಕಾಲದಿಂದ ಕಾಲಕ್ಕೆ ಈ ಕುರಿತು ಎಚ್ಚರಿಕೆ ನೀಡುತ್ತಲೇ ಬಂದಿವೆ. ಈಗ ಸಿಎಸ್ಐಎಸ್ ಹೆಸರಿನ ಸೈಬರ್ ಸುರಕ್ಷತಾ ಕಂಪನಿಯ ಸಂಶೋಧಕರು ಹೊಸ ಮಾಲ್‌ವೇರ್ ಒಂದು ಕನಿಷ್ಠ 24ರಷ್ಟು ಆಂಡ್ರಾಯ್ಡ್ ಆ್ಯಪ್‌ಗಳಿಗೆ ಅಂಟಿಕೊಂಡಿದ್ದು, ಅವುಗಳ ಬಳಕೆ ತಕ್ಷಣವೇ ನಿಲ್ಲಿಸುವಂತೆ ಎಚ್ಚರಿಕೆ ನೀಡಿದೆ.
Vijaya Karnataka Web Malware


ಈ ಆಂಡ್ರಾಯ್ಡ್ ಆ್ಯಪ್‌ಗಳು ಬಹುತೇಕ ಜನಪ್ರಿಯವೇ. ಸುಮಾರು 4.72 ಲಕ್ಷಕ್ಕಿಂತಲೂ ಹೆಚ್ಚು ಮಂದಿ ಇವುಗಳನ್ನು ಬಳಸುತ್ತಿದ್ದಾರೆ. 'ಜೋಕರ್' ಹೆಸರಿನಲ್ಲಿ ಗೂಗಲ್ ಪ್ಲೇ ಸ್ಟೋರ್‌ನಲ್ಲಿರುವ ಹೊರ ಟ್ರೋಜನ್ ವೈರಸ್‌ಗಳು ಈ 24 ಆ್ಯಪ್‌ಗಳಲ್ಲಿ ಕಂಡುಬಂದಿವೆ.

ಈ ಆ್ಯಪ್ ರಹಸ್ಯವಾಗಿ ಜಾಹೀರಾತು ವೆಬ್‌ಸೈಟ್‌ಗಳೊಂದಿಗೆ ಸಂವಹನದ ಆರಂಭಕ್ಕೆ ಪ್ರಚೋದನೆ ನೀಡುತ್ತದೆ. ಬಾಧೆಗೀಡಾದ ಫೋನ್‌ನ ಎಸ್ಸಮ್ಮೆಸ್ ಸಂದೇಶಗಳನ್ನು ಕದಿಯುತ್ತದೆ, ಸಂಪರ್ಕ ಸಂಖ್ಯೆಯ ಪಟ್ಟಿ ಮತ್ತು ಸಾಧನದ ಮಾಹಿತಿಯನ್ನೂ ಪಡೆದುಕೊಳ್ಳುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಇಷ್ಟಲ್ಲದೆ ಮಾಲ್‌ವೇರ್ ಬಾಧಿತ ಎಲ್ಲ 24 ಆ್ಯಪ್‌ಗಳ ಪ್ಯಾಕೇಜ್ ಹೆಸರನ್ನೂ ಬಿಡುಗಡೆಳಿಸಿದ್ದಾರೆ. ನಿಮ್ಮಲ್ಲಿ ಈ ಆ್ಯಪ್‌ಗಳಿದ್ದರೆ ತಕ್ಷಣವೇ ಅಳಿಸಿ, ನಿಮ್ಮ ಖಾಸಗಿ ಮಾಹಿತಿಯನ್ನು ರಕ್ಷಿಸಿಕೊಳ್ಳಲು ಇದು ಸಕಾಲ. ಪ್ಯಾಕೇಜ್‌ಗಳು ಸುಧಾರಿತ ಆವೃತ್ತಿಗಳ ಸಂಖ್ಯೆಯಾಗಿದ್ದು, ಈ ಆ್ಯಪ್‌ನ ಹಳೆಯ ವರ್ಷನ್ ಇದ್ದರೂ ಅನ್‌ಇನ್‌ಸ್ಟಾಲ್ ಮಾಡಿಕೊಳ್ಳಿ.


ಇವುಗಳಲ್ಲಿ ಹೆಚ್ಚಿನವು ಕ್ಯಾಮೆರಾ ಆ್ಯಪ್‌ಗಳು. ಜತೆಗೆ, ವಾಲ್‌ಪೇಪರ್ ಆ್ಯಪ್‌ಗಳೂ, ಫೇಸ್ ಸ್ಕ್ಯಾನಿಂಗ್ ಆ್ಯಪ್‌ಗಳು ಮತ್ತು ಎಸ್ಸೆಮ್ಮೆಸ್ ಕಳುಹಿಸಲು-ಓದಲು ನೆರವಾಗುವ ಆ್ಯಪ್‌ಗಳಿವೆ. ವಿಶೇಷವೆಂದರೆ, ಆ್ಯಂಟಿ ವೈರಸ್ ಸುರಕ್ಷತಾ ಆ್ಯಪ್ ಕೂಡ ಮಾಲ್‌ವೇರ್ ಹೊಂದಿರುವುದು, ಆ್ಯಂಟಿ ವೈರಸ್ ಆ್ಯಪ್‌ಗಳ ವಿಶ್ವಾಸಾರ್ಹತೆಯ ಮೇಲೂ ಶಂಕೆಗೆ ಕಾರಣವಾಗಿದೆ. ಯಾವುದೇ ಒಳ್ಳೆಯ ಹೆಸರಿರುವ ಕಂಪನಿಗಳ ಆ್ಯಪ್‌ಗಳನ್ನೇ ಅಳವಡಿಸಿಕೊಳ್ಳುವುದು ನಮ್ಮ ವಿವೇಚನೆಗೆ ಬಿಟ್ಟ ವಿಚಾರ.


ಈಗ ಈ ಆ್ಯಪ್‌ಗಳನ್ನು ಗೂಗಲ್ ಪ್ಲೇ ಸ್ಟೋರಿನಿಂದ ತೆಗೆಯಲಾಗಿದೆ. ಆದರೆ, ಈಗಾಗಲೇ ಅಳವಡಿಸಿಕೊಂಡಿರುವವರು ಇದನ್ನು ಅನ್‌ಇನ್‌ಸ್ಟಾಲ್ ಮಾಡಿಕೊಳ್ಳುವುದು ಭದ್ರತೆಯ ದೃಷ್ಟಿಯಿಂದ ಸೂಕ್ತ.

ಈ ಆ್ಯಪ್‌ಗಳ ಹೆಸರುಗಳು ಇಲ್ಲಿವೆ. (ಪ್ರತೀ ಆ್ಯಪ್ ಹೆಸರಿನ ಕೊನೆಯಲ್ಲಿರುವುದು ಆ್ಯಪ್‌ನ ಇತ್ತೀಚಿನ ಆವೃತ್ತಿ ಸಂಖ್ಯೆ. ಅದು ಗೂಗಲ್ ಪ್ಲೇ ಸ್ಟೋರಿನಲ್ಲಿ ಕಾಣಿಸುವ ಹೆಸರಿನಲ್ಲಿ ಇರುವುದಿಲ್ಲ.):

ಈ ಆ್ಯಪ್‌ಗಳ ಐಕಾನ್‌ಗಳು ಹೇಗಿರುತ್ತವೆ ಅಂತ ನೋಡಿ ಖಚಿತಪಡಿಸಿಕೊಳ್ಳಲು ಈ ಸ್ಲೈಡ್-ಶೋ ವೀಕ್ಷಿಸಿ.

1. Beach Camera 4.2
2. Mini Camera 1.0.2
3. Certain Wallpaper 1.02
4. Reward Clean 1.1.6
5. Age Face 1.1.2
6. Altar Message 1.5
7. Soby Camera 1.0.1
8. Declare Message 10.02
9. Display Camera 1.02
10. Rapid Face Scanner 10.02
11. Leaf Face Scanner 1.0.3
12. Board Picture editing 1.1.2
13. Cute Camera 1.04
14. Dazzele Wallpaper 1.0.1
15. Spark Wallpaper 1.1.11
16. Climate SMS 3.5
17. Great VPN 2.0
18. Humour Camera 1.1.5
19. Print Plant Scan 1.03
20. Advocate Wallpaper 1.1.9
21. Ruddy SMS Mod
22. Ignite Clean 7.3
23. Antivirus Security - Security Scan, App Lock 1.1.2
24. Collate Face Scanner 1.1.2

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌