ಆ್ಯಪ್ನಗರ

ಎನಿಡೆಸ್ಕ್ (AnyDesk) ಅಪ್ಲಿಕೇಷನ್ ಸೇವೆಯಲ್ಲಿ ಸಮಸ್ಯೆ!

ಕೆಲವು ಕಂಪೆನಿಗಳ ಉದ್ಯೋಗಿಗಳಿಗೆ ಈಗಲೂ ತಮ್ಮ ಮನೆಯಲ್ಲೇ ಕಾರ್ಯನಿರ್ವಹಿಸಲು ಅವಕಾಶವನ್ನು ಪಡೆದಿದ್ದಾರೆ. ಇಂತಹ ಬಹುತೇಕ ಉದ್ಯೋಗಿಗಳು ರಿಮೋಟ್‌-ಕಂಟ್ರೋಲ್ ಮೂಲಕ ಕಾರ್ಯನಿರ್ವಹಿಸಬಹುದಾದ ಅಪ್ಲಿಕೇಷನ್‌ಗಳನ್ನು ಬಳಸುತ್ತಿದ್ದು, ಇಂಥಹ ಆಪ್‌ಗಳಲ್ಲಿ ಎನಿಡೆಸ್ಕ್ ವಿಶ್ವದ ಜನಪ್ರಿಯ ಅಪ್ಲಿಕೇಶನ್ ಎಂದು ಗುರುತಿಸಿಕೊಂಡಿದೆ.

Vijaya Karnataka Web 29 Aug 2022, 5:00 pm
ಒಂದು ಸ್ಥಳದಲ್ಲಿರುವ ಕಂಪ್ಯೂಟರ್‌ ಅಥವಾ ಇತರೆ ಸಾಧನವನ್ನು ಮತ್ತೆಲ್ಲೋ ಕುಳಿತು ರಿಮೋಟ್‌-ಕಂಟ್ರೋಲ್ ಮೂಲಕ ಕಾರ್ಯನಿರ್ವಹಿಸಬಹುದಾದ ಜನಪ್ರಿಯ ಎನಿಡೆಸ್ಕ್ (AnyDesk) ಅಪ್ಲಿಕೇಷನ್ ಸೇವೆಯಲ್ಲಿ ಎರಡು ದಿನಗಳಿಂದ ಸಮಸ್ಯೆ ಕಂಡುಬರುತ್ತಿದೆ. ಜಗತ್ತಿನಾದ್ಯಂತ ಹಲವೆಡೆ ಎನಿಡೆಸ್ಕ್ (AnyDesk) ಅಪ್ಲಿಕೇಷನ್ ಸ್ಥಗಿತವಾಗಿರುವ ಬಗ್ಗೆ ಹಲವು ದೂರುಗಳು ಕೇಳಿಬರುತ್ತಿದ್ದು, ಎನಿಡೆಸ್ಕ್ ಅಪ್ಲಿಕೇಷನ್ ಸೇವೆಯಲ್ಲಿ ವ್ಯತ್ಯಯವಾಗಿರುವುದರಿಂದ ತಮ್ಮ ಉದ್ಯೋಗ ಕಾರ್ಯಗಳಿಗೆ ತೊಂದರೆ ಎದುರಾಗಿರುವ ಬಗ್ಗೆ ಬಳಕೆದಾರರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಇನ್ನು ದೂರುಗಳು ದಾಖಲಾದ ನಂತರ ಎನಿಡೆಸ್ಕ್ ಸಂಸ್ಥೆಯು ಶೀಘ್ರದಲ್ಲೇ ಸಮಸ್ಯೆಯನ್ನು ಬಗೆಹರಿಸುವ ಬಗ್ಗೆ ಭರವಸೆ ನೀಡಿದೆ.
Vijaya Karnataka Web ಎನಿಡೆಸ್ಕ್ (AnyDesk) ಅಪ್ಲಿಕೇಷನ್ ಸೇವೆಯಲ್ಲಿ ಸಮಸ್ಯೆ!


ಬಳಕೆದಾರರ ದೂರುಗಳ ಬಳಿಕ ಎನಿಡೆಸ್ಕ್ ತತಕ್ಷಣ ಕ್ರಮಕೈಗೊಂಡಿದ್ದು ಸೇವೆಯನ್ನು ಮರುಸ್ಥಾಪಿಸುವಲ್ಲಿ ಕಾರ್ಯನಿರ್ವಹಿಸುತ್ತಿದೆ. "ನಮ್ಮ ಬ್ಯಾಕೆಂಡ್ ಸಿಸ್ಟಮ್‌ಗಳಲ್ಲಿ ಒಂದು ವಿಫಲವಾಗಿದೆ ಮತ್ತು ನಾವು ಬದಲಾಗಿ ಈ ವ್ಯವಸ್ಥೆಗಳನ್ನು ಅಳವಡಿಸಿದ್ದೇವೆ ಮತ್ತು ಕ್ರಮೇಣ ನಮ್ಮ ಸೇವೆಯನ್ನು ಮರುಸ್ಥಾಪಿಸುತ್ತೇವೆ. ಸ್ಟೇಟಸ್ ಪುಟವನ್ನು ಪರಿಶೀಲಿಸಲಾಗಿದೆ, ಅಲ್ಲಿ ನಿರಂತರವಾಗಿ ಮಾಹಿತಿ ನೀಡುತ್ತೇವೆ" ಎಂದು ಎನಿಡೆಸ್ಕ್ ಸಂಸ್ಥೆ ತಿಳಿಸಿದೆ. "ನಾವು ಸಮಸ್ಯೆ ಪರಿಹರಿಸುತ್ತಿದ್ದೇವೆ ಮತ್ತು ಫಲಿತಾಂಶಗಳನ್ನು ಮೇಲ್ವಿಚಾರಣೆ ಮಾಡುತ್ತೇವೆ" ಎಂದು ಎನಿಡೆಸ್ಕ್ ಸಂಸ್ಥೆಯ ವಕ್ತಾರರು ಹೇಳಿದ್ದಾರೆ. ಇನ್ನು ಈಗಷ್ಟೇ ಎನಿಡೆಸ್ಕ್ ಸೇವೆ ಮರುಸ್ಥಾಪಿತವಾಗಿರುವ ಬಗ್ಗೆಯೂ ಸಹ ಸುದ್ದಿಗಳು ಸಹ ಬರುತ್ತಿವೆ.

ವರ್ಕ್ ಫ್ರಂ ಹೋಮ್ ಕಾರ್ಯಗಳನ್ನು ನಿರ್ವಹಿಸುತ್ತಿರುವ ಬಹುತೇಕ ಉದ್ಯೋಗಿಗಳು ಎನಿಡೆಸ್ಕ್ (AnyDesk) ಅಪ್ಲಿಕೇಷನ್ ಮೇಲೆ ಅವಲಂಬಿತರಾಗಿದ್ದಾರೆ. ಕೊರೋನಾ ನಂತರ ಜಗತ್ತಿನ ಬಹುತೇಕ ಕಂಪನಿಗಳು ಉದ್ಯೋಗಿಗಳಿಗೆ ವರ್ಕ್‌ ಫ್ರಮ್ ಹೋಮ್ ಮಾಡಲು ಅವಕಾಶ ನೀಡಿದ್ದವು. ಕೊರೋನಾ ಕ್ರಮೇಣ ಕಡಿಮೆಯಾದಂತೆ ಹಲಚು ಕಂಪನಿಗಳು ಕಚೇರಿಗಳನ್ನು ಪ್ರಾರಂಭಿಸಿವೆಯಾದರೂ, ಕೆಲವು ಕಂಪೆನಿಗಳ ಉದ್ಯೋಗಿಗಳಿಗೆ ಈಗಲೂ ತಮ್ಮ ಮನೆಯಲ್ಲೇ ಕಾರ್ಯನಿರ್ವಹಿಸಲು ಅವಕಾಶವನ್ನು ಪಡೆದಿದ್ದಾರೆ. ಇಂತಹ ಬಹುತೇಕ ಉದ್ಯೋಗಿಗಳು ರಿಮೋಟ್‌-ಕಂಟ್ರೋಲ್ ಮೂಲಕ ಕಾರ್ಯನಿರ್ವಹಿಸಬಹುದಾದ ಅಪ್ಲಿಕೇಷನ್‌ಗಳನ್ನು ಬಳಸುತ್ತಿದ್ದು, ಇಂಥಹ ಆಪ್‌ಗಳಲ್ಲಿ ಎನಿಡೆಸ್ಕ್ ವಿಶ್ವದ ಜನಪ್ರಿಯ ಅಪ್ಲಿಕೇಶನ್ ಎಂದು ಗುರುತಿಸಿಕೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌