ಆ್ಯಪ್ನಗರ

Start Up: ಗ್ರಾಹಕರಿಗೂ ರೇಟಿಂಗ್‌ ನೀಡಲು ನಿರ್ಧಾರ

ಬ್ಯಾಂಕ್‌ಗಳು ತಮ್ಮ ಸಾಲಗಾರರ ಅರ್ಹತೆಯನ್ನು ಪರೀಕ್ಷಿಸಲು ಸಿಬಿಲ್‌ನ ಕ್ರೆಡಿಟ್‌ ಸ್ಕೋರ್‌ ಅನ್ನು ಬಳಸುತ್ತವೆ. ಇದೇ ರೀತಿ ಮಾದರಿಯಲ್ಲಿ ರೇಟಿಂಗ್‌ ಮೂಲಕ ಗ್ರಾಹಕರ ವಿಶ್ವಾಸಾರ್ಹತೆಯನ್ನು ಅರಿತು ವಹಿವಾಟು ನಡೆಸಲು ಬಾಡಿಗೆ ವಲಯದ ಸ್ಟಾರ್ಟಪ್‌ಗಳು ಮುಂದಾಗಿವೆ.

TNN 25 Jun 2019, 4:31 pm
ಬೆಂಗಳೂರು: ಬಾಡಿಗೆ ವಲಯದಲ್ಲಿ ವಹಿವಾಟು ನಡೆಸುತ್ತಿರುವ ಸ್ಟಾರ್ಟಪ್‌ಗಳು ಶೀಘ್ರದಲ್ಲಿಯೇ ತಮ್ಮ ಗ್ರಾಹಕರ ವರ್ತನೆಯನ್ನು ಗ್ರಹಿಸಲು ಅವರಿಗೇ ರೇಟಿಂಗ್‌ ನೀಡಲು ನಿರ್ಧರಿಸಿವೆ.
Vijaya Karnataka Web start up


ಬ್ಯಾಂಕ್‌ಗಳು ತಮ್ಮ ಸಾಲಗಾರರ ಅರ್ಹತೆಯನ್ನು ಪರೀಕ್ಷಿಸಲು ಸಿಬಿಲ್‌ನ ಕ್ರೆಡಿಟ್‌ ಸ್ಕೋರ್‌ ಅನ್ನು ಬಳಸುತ್ತವೆ. ಇದೇ ರೀತಿ ಮಾದರಿಯಲ್ಲಿ ರೇಟಿಂಗ್‌ ಮೂಲಕ ಗ್ರಾಹಕರ ವಿಶ್ವಾಸಾರ್ಹತೆಯನ್ನು ಅರಿತು ವಹಿವಾಟು ನಡೆಸಲು ಬಾಡಿಗೆ ವಲಯದ ಸ್ಟಾರ್ಟಪ್‌ಗಳು ಮುಂದಾಗಿವೆ.

ಬಾಡಿಗೆಗೆ ಕಾರು, ಬೈಕ್‌ಗಳನ್ನು ಒದಗಿಸುವ ಡ್ರೈವ್‌ಜಿ ಎಂಬ ಸೆಲ್ಫ್‌-ರೆಂಟಲ್‌ ಸ್ಟಾರ್ಟಪ್‌ ಶೀಘ್ರದಲ್ಲಿ ತನ್ನ ಗ್ರಾಹಕರಿಗೆ ರೇಟಿಂಗ್‌ ಅನ್ನು ನೀಡಲಿದೆ. ಈ ನಿಟ್ಟಿನಲ್ಲಿ ಇದೇ ವಲಯದ ಜೂಮ್‌ಕಾರ್‌ ಮತ್ತು ವಿಕೆಡ್‌ ರೈಡ್‌ ಜತೆಗೂ ಸಂಸ್ಥೆ ಪಾಲುದಾರಿಕೆ ವಹಿಸಲಿದೆ. ಚಾಲಕ ರಹಿತ ಕಾರು, ಸ್ಕೂಟರ್‌, ಬೈಕ್‌ ಇತ್ಯಾದಿಗಳನ್ನು ಬಾಡಿಗೆಗೆ ನೀಡುವ ಸೆಲ್ಫ್‌-ರೆಂಟಲ್‌ ಸ್ಟಾರ್ಟಪ್‌ಗಳು ಇತ್ತೀಚೆಗೆ ಜನಪ್ರಿಯವಾಗುತ್ತಿದೆ. ಜತೆಗೆ ಇಂಥ ಸ್ಟಾರ್ಟಪ್‌ಗಳಿಗೆ ಗ್ರಾಹಕರ ವಿಶ್ವಾಸಾರ್ಹತೆಯನ್ನು ಖಾತರಿಪಡಿಸಿಕೊಳ್ಳಬೇಕಾದ ಅಗತ್ಯ ಮತ್ತು ಸವಾಲು ಎದುರಾಗಿದೆ.

ಈ ಹಿನ್ನೆಲೆಯಲ್ಲಿ ಗ್ರಾಹಕರಿಗೆ ರೇಟಿಂಗ್‌ ನೀಡುವ ಪರಿಕಲ್ಪನೆಗೆ ಚಾಲನೆ ಸಿಕ್ಕಿದೆ. ಪೀಠೋಪಕರಣಗಳನ್ನು ಬಾಡಿಗೆಗೆ ನೀಡುವ ಫರ್ಲೆನ್ಕೊ ಮತ್ತು ರೆಂಟೊಮೊಜೊ ಇತ್ಯಾದಿ ಕಂಪನಿಗಳೂ ಪರಸ್ಪರ ಗ್ರಾಹಕರ ವಿವರಗಳನ್ನು ವಿನಿಮಯ ಮಾಡಿಕೊಂಡಿವೆ. ಹಾಗೂ ಗ್ರಾಹಕರ 'ರೆಂಟಲ್‌ ಸ್ಕೋರ್‌' ಅನ್ನು ವ್ಯವಸ್ಥೆಗೊಳಿಸುತ್ತಿವೆ.

ಸದ್ಯಕ್ಕೆ ಗ್ರಾಹಕರ ವರ್ತನೆಯನ್ನು ಅಳೆಯುವ ರೇಟಿಂಗ್‌ ವ್ಯವಸ್ಥೆ ನಮ್ಮಲ್ಲಿ ಇಲ್ಲ. ಸದ್ಯ ಯಾವುದಾದರೂ ಒಂದು ಕಂಪನಿ ಗ್ರಾಹಕರೊಬ್ಬರನ್ನು ಕಪ್ಪು ಪಟ್ಟಿಗೆ ಸೇರಿಸಿದರೆ ಸುಲಭವಾಗಿ ಮತ್ತೊಂದು ಸ್ಟಾರ್ಟಪ್‌ಗೆ ತೆರಳುತ್ತಾರೆ. ಹೀಗಾಗಿ ಎಲ್ಲ ಸ್ಟಾರ್ಟಪ್‌ಗಳೂ ಸಂಘಟಿತವಾಗಿ ಇಂಥ ರೇಟಿಂಗ್‌ ವ್ಯವಸ್ಥೆ ಏರ್ಪಡಿಸಿಕೊಳ್ಳಬೇಕು ಎನ್ನುತ್ತಾರೆ ಡ್ರೈವ್‌ಜಿ ವಕ್ತಾರರು.

ಸದ್ಯಕ್ಕೆ ಬಾಡಿಗೆಗೆ ನಾನಾ ಉತ್ಪನ್ನ, ವಾಹನ ಇತ್ಯಾದಿಗಳನ್ನು ಕೊಡುವ ಸ್ಟಾರ್ಟಪ್‌ಗಳು ಕೆವೈಸಿ, ಸ್ಥಳದ ಮಾಹಿತಿ, ಗುರುತಿನ ಚೀಟಿ ಇತ್ಯಾದಿ ದಾಖಲಾತಿಗಳನ್ನು ಬಳಸುತ್ತವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌