ಆ್ಯಪ್ನಗರ

iPhone XR: ಈಗ ಮೇಡ್ ಇನ್ ಇಂಡಿಯಾ ಐಫೋನ್!

ದೇಶದಲ್ಲಿ ಆ್ಯಪಲ್ ಐಫೋನ್ ಉತ್ಪಾದನೆಯನ್ನು ಎರಡು ವರ್ಷ ಮೊದಲೇ ಆರಂಭಿಸಿದೆ. ಜಗತ್ತಿನ ಅತಿಹೆಚ್ಚು ಮಾರಾಟವಾಗುವ ಐಫೋನ್ XR ಕೂಡ ಭಾರತದಲ್ಲೇ ತಯಾರಾಗುತ್ತಿದೆ.

Times Now 23 Oct 2019, 9:12 am
ಆ್ಯಪಲ್ ಐಫೋನ್ ಉತ್ಪಾದನೆಗೆ ಚೀನಾ ಮೇಲಿನ ಅವಲಂಬನೆಯನ್ನು ಹಂತಹಂತವಾಗಿ ಕಡಿಮೆ ಮಾಡುತ್ತಾ ಬರುತ್ತಿದೆ. ಹೀಗಾಗಿ ವಿಯೆಟ್ನಾಂ ಮತ್ತು ಭಾರತದಲ್ಲಿನ ಆ್ಯಪಲ್ ಐಫೋನ್ ಉತ್ಪಾದನಾ ಘಟಕದಲ್ಲಿ ಹೆಚ್ಚು ಹೂಡಿಕೆ ಮಾಡುತ್ತಿದೆ.
Vijaya Karnataka Web Apple


ಈ ಮೊದಲು ಆ್ಯಪಲ್ ಐಫೋನ್ 5S, ಐಫೋನ್ 6S ಮತ್ತು ಐಫೋನ್ 7 ಅನ್ನು ದೇಶದಲ್ಲಿ ಉತ್ಪಾದಿಸಲಾಗುತ್ತಿತ್ತು. ಈಗ ಜಗತ್ತಿನ ಜನಪ್ರಿಯ ಆ್ಯಪಲ್ ಐಫೋನ್ XR ಅನ್ನು ಕೂಡ ದೇಶದಲ್ಲೇ ಉತ್ಪಾದಿಸಲಾಗುತ್ತಿದೆ.

ಐಫೋನ್ XR ಹೊಸದಾಗಿ ಮೇಡ್ ಇನ್ ಇಂಡಿಯಾ, ಅಂದರೆ ಆ್ಯಪಲ್ ಐಫೋನ್ ಬಾಕ್ಸ್‌ನಲ್ಲಿ ಡಿಸೈನ್‌ಡ್ ಇನ್ ಕ್ಯಾಲಿಫೋರ್ನಿಯಾ, ಅಸೆಂಬಲ್ಡ್ ಇನ್ ಇಂಡಿಯಾ ಎಂಬ ಟ್ಯಾಗ್‌ಲೈನ್‌ನೊಂದಿಗೆ ಮಾರುಕಟ್ಟೆಗೆ ಪ್ರವೇಶಿಸಿದೆ.

Apple AirPods: ಅಕ್ಟೋಬರ್ ಕೊನೆಗೆ ಬಿಡುಗಡೆ

ದೇಶದ ಸ್ಮಾರ್ಟ್‌ಫೋನ್ ಮಾರುಕಟ್ಟೆಯನ್ನು ಆ್ಯಪಲ್ ಗಂಭೀರವಾಗಿ ಪರಿಗಣಿಸಿದ್ದು, ಐಫೋನ್ ಮಾರಾಟ ಮಾತ್ರವಲ್ಲದೆ, ವಿದೇಶಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ರಫ್ತು ಮಾಡುತ್ತಿದೆ. ದೇಶೀಯವಾಗಿ ತಯಾರಾಗುವ ಆ್ಯಪಲ್ ಐಫೋನ್ ಬೆಲೆ ಕೂಡ ಕಡಿಮೆಯದ್ದು, ತೆರಿಗೆ ಪ್ರಯೋಜನ ಪಡೆಯಬಹುದಾಗಿದೆ.

ಪ್ರಸ್ತುತ ಆ್ಯಪಲ್ ಐಫೋನ್ XR ದೇಶದಲ್ಲಿ 49,990 ರೂ. ಗರಿಷ್ಠ ಮಾರಾಟ ದರ ಹೊಂದಿದ್ದು, ಹಬ್ಬದ ವಿಶೇಷ ಸೇಲ್ ಮತ್ತು ಬ್ಯಾಂಕ್ ಕ್ಯಾಶ್‌ಬ್ಯಾಕ್ ಕೊಡುಗೆಗಳೂ ಕೂಡ ಲಭ್ಯವಿದೆ.

Google Password: ಸುರಕ್ಷಿತವಾಗಿ ಇರಿಸುವುದು ಹೇಗೆ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌