ಆ್ಯಪ್ನಗರ

ಆ್ಯಪಲ್‌ ಹೊಸ ಐಪ್ಯಾಡ್‌ ಪ್ರೊ, ಮ್ಯಾಕ್‌ಬುಕ್‌ ಮಿನಿ ಲಾಂಚ್‌

ಮತ್ತೊಂದು ಆ್ಯಪಲ್‌ ಪ್ರಾಡಕ್ಟ್‌ ಲೋಕಾರ್ಪಣೆ

Vijaya Karnataka Web 30 Oct 2018, 10:14 pm
ನ್ಯೂಯಾರ್ಕ್‌: ಆ್ಯಪಲ್‌ ಇನ್ನಷ್ಟು ಹೊಸ ಹೊಸತನಕ್ಕೆ ತೆರೆದುಕೊಂಡಿದೆ. ಆಧುನಿಕ ತಂತ್ರಜ್ಞಾನ, ವಿಶೇಷತೆಗಳುಳ್ಳ ಹಲವು ಪ್ರಾಡಕ್ಟ್‌ಗಳನ್ನು ಮಾರುಕಟ್ಟೆಗೆ ಪರಿಚಯ ಮಾಡಲಾಗಿದೆ.
Vijaya Karnataka Web ಆ್ಯಪಲ್‌
ಆ್ಯಪಲ್‌


ಆ್ಯಪಲ್‌ ತನ್ನ ನೂತನ ಐಪ್ಯಾಡ್‌ ಪ್ರೊ ಸೇರಿದಂತೆ ಹಲವು ಹೊಸ ಉತ್ಪನ್ನಗಳನ್ನು ಮಂಗಳವಾರ ಬಿಡುಗಡೆಗೊಳಿಸಿದೆ.

ಮ್ಯಾಕ್‌ಬುಕ್‌ ಏರ್‌ ಎಂಬ ತೆಳುವಾದ ಅತ್ಯಾಧುನಿಕ ಲ್ಯಾಪ್‌ಟಾಪ್‌, ಮ್ಯಾಕ್‌ಮಿನಿ ಎಂಬ ಚಿಕ್ಕ ಡೆಸ್ಕ್‌ಟಾಪ್‌ ಕಂಪ್ಯೂಟರ್‌ ಇತ್ಯಾದಿ ಉತ್ಪನ್ನಗಳನ್ನು ಬಿಡುಗಡೆಗೊಳಿಸಿದೆ.

ಮ್ಯಾಕ್‌ಬುಕ್‌ ಏರ್‌, ಮ್ಯಾಕ್‌ಬುಕ್‌ ಮಿನಿ ಹಾಗೂ ಹೊಸ ಐಪ್ಯಾಡ್‌ ರಿಲೀಸ್‌ ಆಗಿದೆ.

ನ್ಯೂಯಾರ್ಕ್‌ನ ಬ್ರೂಕ್ಲೈನ್‌ ಮ್ಯೂಸಿಕ್‌ ಅಕಾಡೆಮಿಯಲ್ಲಿ ಆ್ಯಪಲ್‌ನ ಹೊಸ ಪ್ರಾಡಕ್ಟ್‌ಗಳ ಲೋಕಾರ್ಪಣೆಗೆ ಕಂಪನಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಟಿಮ್‌ ಕುಕ್‌ ಚಾಲನೆ ನೀಡಿದರು.

ಆ್ಯಪಲ್‌ನ ಐಪ್ಯಾಡ್‌ ಈಗಾಗಲೇ ಸಾಕಷ್ಟು ಜನಪ್ರಿಯವಾಗಿದೆ. ಈಗ ಅದಕ್ಕೆ ಮತ್ತೊಂದು ಸೇರ್ಪಡೆಯಾಗಿದೆ. ಈಗಾಗಲೇ 400 ದಶಲಕ್ಷ ಐಪ್ಯಾಡ್‌ ಮಾರಾಟ ಮಾಡಲಾಗಿದೆ. ಈಗ ಐಪ್ಯಾಡ್‌ ಪ್ರೊ ಲೋಕಾರ್ಪಣೆ ಮಾಡಲಾಗುರ್ತಿದೆ ಎಂದು ಕಂಪನಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಟಿಮ್‌ ಕುಕ್‌ ತಿಳಿಸಿದರು.

ಐಪ್ಯಾಡ್‌ ಪ್ರೊ 12.9 ಇಂಚು ಡಿಸ್‌ಪ್ಲೇ ಹೊಂದಿದೆ. 8 ಕೋರ್‌ಗಳನ್ನು ಹೊಂದಿರುವ ಇದು ಶೇಕಡ 90ರಷ್ಟು ಕ್ಷಿಪ್ರಗತಿಯಲ್ಲಿ ಕಾರ್ಯ ನಿರ್ವಹಿಸಲಿದೆ. ಇದು ನ್ಯೂರಾಲ್ ಎಂಜಿನ್‌ ಅನ್ನು ಹೊಂದಿದೆ.

ಐಪ್ಯಾಡ್‌ ಪ್ರೊ ಮೂಲಕ ಐಫೋನ್‌ ಅನ್ನೂ ಚಾರ್ಜ್‌ ಮಾಡಬಹುದು ಎಂದು ಕಂಪನಿ ತಿಳಿಸಿದೆ. ಇದೇ ಮೊದಲ ಬಾರಿಗೆ ಈ ರೀತಿಯ ತಂತ್ರಜ್ಞಾನ ಅಳವಡಿಸಲಾಗಿದೆ. ಐಪ್ಯಾಡ್‌ ಪ್ರೊ ಬೆಲೆ 999 ಅಮೆರಿಕನ್‌ ಡಾಲರ್‌ ಆದರೆ, ಐಪ್ಯಾಡ್‌ ಮಿನಿ ಬೆಲೆಯನ್ನು 799 ಅಮೆರಿಕನ್‌ ಡಾಲರ್‌ಗೆ ನಿಗದಿಪಡಿಸಲಾಗಿದೆ.

ಹೊಸ ಮ್ಯಾಕ್‌ ಬುಕ್‌ ಮಿನಿ ಎರಡು ಶ್ರೇಣಿ ಹೊಂದಿದೆ. ಒಂದು ಮ್ಯಾಕ್‌ ಬುಕ್‌ ಪ್ರೊ ಮತ್ತು ಮ್ಯಾಕ್‌ಬುಕ್‌ ಏರ್‌ ಲ್ಯಾಪ್‌ಟಾಪ್‌ ಹಲವು ವಿಶೇಷತೆಗಳನ್ನು ಹೊಂದಿದೆ.

ಮ್ಯಾಕ್‌ಬುಕ್‌ ಏರ್‌


ಇದುವರೆಗೆ 100 ದಶಲಕ್ಷ ಮ್ಯಾಕ್‌ಬುಕ್‌ಗಳನ್ನು ಮಾರಾಟ ಮಾಡಲಾಗಿದೆ ಎಂದು ಟಿಮ್‌ ಕುಕ್‌ ಮಾಹಿತಿ ನೀಡಿದ್ದಾರೆ. ಈಗ ಹೊಸ ಮ್ಯಾಕ್‌ ಏರ್ ಅನ್ನು ಪರಿಚಯಿಸುತ್ತಿದ್ದೇವೆ. ಇದು 15.3 ಇಂಚು ರೆಟಿನಾ ಡಿಸ್‌ಪ್ಲೇ ಹೊಂದಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಎರಡು ಥಂಡರ್‌ಬೋಲ್ಟ್‌ ಪೋರ್ಟ್‌, 16 ಜಿಬಿ ರ‍್ಯಾಮ್‌, 1.5 ಟಿಬಿ ಸ್ಟೋರೇಜ್‌, 12 ಗಂಟೆ ಕಾಲ ವೈರ್‌ಲೆಸ್‌ ಬ್ರೌಸಿಂಗ್‌ ಹೊಂದಿದೆ. ಇದರ ಬೆಲೆ 1199 ಅಮೆರಿಕನ್‌ ಡಾಲರ್‌ ಎಂದು ಕುಕ್‌ ಪ್ರಕಟಿಸಿದರು.

ಇಂದಿನಿಂದಲೇ ಪ್ರಿ ಬುಕ್ಕಿಂಗ್‌ ಆರಂಭವಾಗಲಿದ್ದು, ಮುಂದಿನ ವಾರದಲ್ಲಿ ಲಭ್ಯವಾಗಲಿದೆ ಎಂದು ಹೇಳಿದ್ದಾರೆ.

ಮ್ಯಾಕ್‌ ಮಿನಿ ಎಂಬ ಮತ್ತೊಂದು ಪ್ರಾಡಕ್ಟ್‌ ಕೂಡ ಪರಿಚಯಗಿದೆ. ಮ್ಯಾಕ್‌ ಮಿನಿಯ ಬೆಲೆ 799 ಅಮೆರಿಕನ್‌ ಡಾಲರ್‌.

ವಿಶೇಷತೆಗಳು


ಕಳೆದ ಎಂಟು ವರ್ಷದಲ್ಲಿ ಮ್ಯಾಕ್‌ ಕಂಪ್ಯೂಟರ್‌ಗಳ ಮಾರಾಟ ಗಣನೀಯವಾಗಿ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಆ್ಯಪಲ್‌ ಹೊಸ ಶ್ರೇಣಿಯ ಕಂಪ್ಯೂಟರ್‌ ಲೋಕಾರ್ಪಣೆ ಮಾಡಿದೆ.

ಇದರ ಜತೆಗೆ ಐಪ್ಯಾಡ್‌ ಪ್ರೊ ಸೇರಿದಂತೆ ಕೆಲವು ಹೊಸ ಹೊಸ ಪ್ರಾಡಕ್ಟ್‌ಗಳನ್ನು ಪರಿಚಯ ಮಾಡಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌