ಆ್ಯಪ್ನಗರ

Apple iPhone: ಕೊರೊನಾದಿಂದಾಗಿ ಆ್ಯಪಲ್ ಸ್ಟಾಕ್ ಖಾಲಿ!

ಕೊರೊನಾ ವೈರಸ್ ಹಾವಳಿಯಿಂದಾಗಿ ಆ್ಯಪಲ್ ಐಫೋನ್ ದಾಸ್ತಾನು ಖಾಲಿಯಾಗಿದ್ದು, ಹೊಸ ಸ್ಟಾಕ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಬಹುಬೇಡಿಕೆ ಪಡೆದುಕೊಂಡಿದ್ದ ಐಫೋನ್ 11 ಸರಣಿ ಅಗತ್ಯ ಸಂಖ್ಯೆಯಲ್ಲಿ ಲಭ್ಯವಾಗುತ್ತಿಲ್ಲ!

Times Now 13 Mar 2020, 12:53 pm
ಜನಪ್ರಿಯ ಆ್ಯಪಲ್ ಕಂಪನಿಯ ಐಫೋನ್ 11 ಸರಣಿಯ ಬಹುತೇಕ ಸ್ಟಾಕ್ ಖಾಲಿಯಾಗಿದ್ದು, ಪೂರೈಕೆಯಲ್ಲಿ ಸಮಸ್ಯೆಯಾಗಿದೆ. ಆ್ಯಪಲ್ ಐಫೋನ್ 11 ಸರಣಿಯಲ್ಲಿ ಮೂರು ನೂತನ ಮಾದರಿಗಳನ್ನು ಬಿಡುಗಡೆ ಮಾಡಿತ್ತು.
Vijaya Karnataka Web apple iPhone
iPhone 11 Pro Max


ಆ್ಯಪಲ್ ಐಫೋನ್ 11 ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಆದರೆ ಚೀನಾದಲ್ಲಿ ಉತ್ಪಾದನೆ ಕುಂಠಿತವಾಗಿದ್ದು, ಆ್ಯಪಲ್ ಐಪೋನ್ ಜೋಡಣಾ ಘಟಕ ಕೂಡ ಕೊರೊನಾ ವೈರಸ್ ಹಾವಳಿಯಿಂದಾಗಿ ತಾತ್ಕಾಲಿಕವಾಗಿ ಮುಚ್ಚಿತ್ತು.

ಆಮದು ರಫ್ತು ನಿರ್ಬಂಧ
ಚೀನಾದಿಂದ ರಫ್ತಾಗುವ ಸರಕುಗಳನ್ನು ಆಮದು ಮಾಡಿಕೊಳ್ಳಲು ನಿರ್ಬಂಧ ವಿಧಿಸಲಾಗಿದೆ. ಹೀಗಾಗಿ ಹೊಸ ಐಫೋನ್ ಸ್ಟಾಕ್ ಬರುತ್ತಿಲ್ಲ. ಇರುವ ಸ್ಟಾಕ್ ಖಾಲಿಯಾಗಿದ್ದು, ಹೆಚ್ಚಿನ ಸಂಖ್ಯೆಯ ದಾಸ್ತಾನು ಇಲ್ಲದೆ ಜನರು ಪರದಾಡುವಂತಾಗಿದೆ.

Redmi Note 9 Pro Max: ಶವೋಮಿ ರೆಡ್ಮಿ ವಿನೂತನ ಸ್ಮಾರ್ಟ್‌ಫೋನ್ ಬಿಡುಗಡೆ

ಐಫೋನ್ ಸ್ಟಾಕ್ ಇಲ್ಲ!
ಆ್ಯಪಲ್ ಐಫೋನ್ 11 ಪ್ರೊ ಮತ್ತು 11 ಪ್ರೊ ಮ್ಯಾಕ್ಸ್ ಬಹುತೇಕ ಖಾಲಿಯಾಗಿದ್ದು, ಮುಂದಿನ ದಾಸ್ತಾನು ಬರುವವರೆಗೆ ಕಾಯಬೇಕಿದೆ.
ಜತೆಗೆ ನೂತನ ಆ್ಯಪಲ್ ಐಫೋನ್ ಮಾದರಿ ಬಿಡುಗಡೆಯೂ ತಡವಾಗುತ್ತಿದೆ.

WhatsApp Chat: ಕೊರೊನಾ ಸಂಶಯವಿದ್ದರೆ ವಾಟ್ಸಪ್ ಚಾಟ್ ಮಾಡಿ..

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌