ಆ್ಯಪ್ನಗರ

Apple AirPods: ಬಜೆಟ್ ದರದ ಏರ್‌ಪಾಡ್ಸ್ ಪರಿಚಯಿಸಲಿದೆ ಆ್ಯಪಲ್

ಗ್ಯಾಜೆಟ್ ಮತ್ತು ಅಕ್ಸೆಸ್ಸರಿ ಟ್ರೆಂಡ್ ಪ್ರಕಾರ, ಈಗ ಮಾರುಕಟ್ಟೆಯಲ್ಲಿ ವೈರ್‌ಲೆಸ್ ಹೆಡ್‌ಫೋನ್, ಇಯರ್‌ಫೋನ್, ಇಯರ್‌ಪಾಡ್ ಮತ್ತು ಏರ್‌ಪಾಡ್‌ಗಳಿಗೆ ಬೇಡಿಕೆ ಹೆಚ್ಚಿದೆ.

TNN & Agencies 26 Oct 2020, 8:32 pm
ವೈರ್‌ಲೆಸ್ ಹೆಡ್‌ಫೋನ್ಸ್ ಮತ್ತು ಇಯರ್‌ಫೋನ್ಸ್ ಮಾರುಕಟ್ಟೆಗೆ ಬಿಡುಗಡೆ ಮಾಡಿದ ಬಳಿಕ ಆ್ಯಪಲ್ ಏರ್‌ಪಾಡ್ಸ್ ವಿನ್ಯಾಸವನ್ನು ಚೀನಾ ಮೂಲದ ಬಹುತೇಕ ಬ್ರ್ಯಾಂಡ್ ಕಂಪನಿಗಳು ನಕಲು ಮಾಡಿದವು. ಆದರೂ ಆ್ಯಪಲ್ ಜನಪ್ರಿಯತೆ ಕಡಿಮೆಯಾಗಿರಲಿಲ್ಲ. ಆ್ಯಪಲ್ ಈಗಾಗಲೇ ಜನರೇಶನ್ 2 ವೈರ್‌ಲೆಸ್ ಏರ್‌ಪಾಡ್ಸ್ ಮತ್ತು ಏರ್‌ಪಾಡ್ಸ್ ಪ್ರೊ ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಆದರೆ ಈಗ ಮಾರುಕಟ್ಟೆಯಲ್ಲಿನ ಬೇಡಿಕೆ ಪೂರೈಸಲು, ನೂತನ ಮಾದರಿಯ ಏರ್‌ಪಾಡ್ಸ್ ಬಿಡುಗಡೆ ಮಾಡಲು ಮುಂದಾಗಿದೆ.
Vijaya Karnataka Web Apple
Apple Airpods


ಆ್ಯಪಲ್ ಏರ್‌ಪಾಡ್ಸ್
ಗ್ಯಾಜೆಟ್ ಮಾರುಕಟ್ಟೆಯಲ್ಲಿ ವೈರ್‌ಲೆಸ್ ಹೆಡ್‌ಫೋನ್ ಮತ್ತು ಇಯರ್‌ಫೋನ್‌ಗಳಿಗೆ ಅತ್ಯಧಿಕ ಬೇಡಿಕೆಯಿದೆ. ಅದರಲ್ಲೂ ವಿಶಿಷ್ಟ ವಿನ್ಯಾಸ ಹೊಂದಿರುವ ಆ್ಯಪಲ್ ಏರ್‌ಪಾಡ್ಸ್ ಅನ್ನು ಪ್ರತಿಸ್ಪರ್ಧಿ ಕಂಪನಿಗಳು ಹೆಚ್ಚಿನ ಸಂಖ್ಯೆಯಲ್ಲಿ ನಕಲು ಮಾಡುತ್ತಿವೆ.

ಬಜೆಟ್ ದರದ ಏರ್‌ಪಾಡ್ಸ್
ದೇಶದ ಮಾರುಕಟ್ಟೆಯಲ್ಲಿ ಆ್ಯಪಲ್ ಏರ್‌ಪಾಡ್ಸ್ ಆರಂಭಿಕ ಆವೃತ್ತಿ 14,990 ರೂ. ದರ ಹೊಂದಿದೆ. ಏರ್‌ಪಾಡ್ಸ್ ಪ್ರೊ ಮಾದರಿ ಬೆಲೆ 24,990 ರೂ. ದರ ಹೊಂದಿದೆ. ಆದರೆ ಪ್ರತಿಸ್ಪರ್ಧಿ ಚೀನಾ ಬ್ರ್ಯಾಂಡ್‌ಗಳ ದರ 5000 ರೂ. ಮತ್ತು ಅದಕ್ಕಿಂತ ಕಡಿಮೆ ಇದೆ. ಹೀಗಾಗಿ ಮಾರುಕಟ್ಟೆ ಸ್ಪರ್ಧಿಸಲು ಆ್ಯಪಲ್ ಬಜೆಟ್ ದರದ ಏರ್‌ಪಾಡ್ಸ್ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಅಲ್ಲದೆ, ಏರ್‌ಪಾಡ್ಸ್ ಪ್ರೊ ನೆಕ್ಸ್ಟ್ ಜನರೇಶನ್ ಕೂಡ ಬಿಡುಗಡೆಯಾಗುವ ನಿರೀಕ್ಷೆಯಿದೆ.

Wireless Earbuds: ಖರೀದಿ ಮಾಡುವಾಗ ಗಮನಿಸಬೇಕಾಗಿರುವುದೇನು?

ಮಾರುಕಟ್ಟೆ ಟ್ರೆಂಡ್
ಗ್ಯಾಜೆಟ್ ಮತ್ತು ಅಕ್ಸೆಸ್ಸರಿ ಟ್ರೆಂಡ್ ಪ್ರಕಾರ, ಈಗ ಮಾರುಕಟ್ಟೆಯಲ್ಲಿ ವೈರ್‌ಲೆಸ್ ಹೆಡ್‌ಫೋನ್, ಇಯರ್‌ಫೋನ್, ಇಯರ್‌ಪಾಡ್ ಮತ್ತು ಏರ್‌ಪಾಡ್‌ಗಳಿಗೆ ಬೇಡಿಕೆ ಹೆಚ್ಚಿದೆ. ಹೀಗಾಗಿ ಆ್ಯಪಲ್ ಕೂಡ ಆಕರ್ಷಕ ದರದಲ್ಲಿ ಉತ್ತಮ ಫೀಚರ್ ಇರುವ ಏರ್‌ಪಾಡ್ಸ್ ನೂತನ ಆವೃತ್ತಿಯನ್ನು ಜನರಿಗೆ ಒದಗಿಸಲು ಮುಂದಾಗಿದೆ.

Headphones Under 2000 Rs: ನಿಮ್ಮ ಬಜೆಟ್‌ಗೆ ತಕ್ಕ ಬೆಸ್ಟ್ ಹೆಡ್‌ಫೋನ್ ಇಲ್ಲಿದೆ..

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌