ಆ್ಯಪ್ನಗರ

ನಿಮ್ಮ ಡೇಟಾ ಯಾರಲ್ಲಿದೆ?

ನೀವು ಇಂಟರ್‌ನೆಟ್ಟನ್ನು ಸಿಕ್ಕಾಪಟ್ಟೆ ಬಳಸುವವರಾದರೆ, ನಿಮ್ಮ ಸಂಪೂರ್ಣ ಡಿಜಿಟಲ್‌ ಪ್ರೊಫೈಲ್‌ ಈಗಾಗಲೇ ಹಲವಾರು ಟ್ರ್ಯಾಕಿಂಗ್‌ ಕಂಪನಿಗಳ ಬಳಿ ಸಿದ್ಧವಾಗಿರುತ್ತದೆ.

Vijaya Karnataka Web 27 Feb 2018, 1:52 pm

ನೀವು ಇಂಟರ್‌ನೆಟ್ಟನ್ನು ಸಿಕ್ಕಾಪಟ್ಟೆ ಬಳಸುವವರಾದರೆ, ನಿಮ್ಮ ಸಂಪೂರ್ಣ ಡಿಜಿಟಲ್‌ ಪ್ರೊಫೈಲ್‌ ಈಗಾಗಲೇ ಹಲವಾರು ಟ್ರ್ಯಾಕಿಂಗ್‌ ಕಂಪನಿಗಳ ಬಳಿ ಸಿದ್ಧವಾಗಿರುತ್ತದೆ.

Vijaya Karnataka Web are you tracking by apps
ನಿಮ್ಮ ಡೇಟಾ ಯಾರಲ್ಲಿದೆ?


ನಿಮ್ಮ ಹೆಸರು, ಲಿಂಗ, ಚಹರೆ, ಧರ್ಮ, ನಂಬಿಕೆ, ರಾಜಕೀಯ ನಿಲುವು, ಆರೋಗ್ಯ, ಲೈಂಗಿಕ ಆಯ್ಕೆ, ಅಂತರ್ಜಾಲ ಹಿಸ್ಟರಿ, ಲೊಕೇಶನ್‌, ಸಂಪರ್ಕಗಳು, ಸೋಶಿಯಲ್‌ ಮೀಡಿಯಾ ಚಟುವಟಿಕೆ, ಹಣಕಾಸಿನ ಸ್ಥಿತಿ, ಬಯೋಮೆಟ್ರಿಕ್‌ ಮಾಹಿತಿ ಇವೆಲ್ಲವೂ ಅವುಗಳಿಗೆ ಗೊತ್ತು. ನಾವು ಸ್ಮಾರ್ಟ್‌ಫೋನ್‌ಗಳಲ್ಲಿ ಬಳಸುವ ಹತ್ತರಲ್ಲಿ 7 ಆ್ಯಪ್‌ಗಳು ತಮಗೆ ಲಭ್ಯವಾದ ನಿಮ್ಮ ಡೇಟಾವನ್ನು ಗೂಗಲ್‌ ಅನಾಲಿಟಿಕ್ಸ್‌ನಂಥ ಟ್ರ್ಯಾಕಿಂಗ್‌ ಕಂಪನಿಗಳಿಗೆ ಮಾರಿಕೊಳ್ಳುತ್ತಿವೆ.

ಹೆಚ್ಚಿನ ಕಂಪನಿಗಳು ಈ ಮಾಹಿತಿ ಪಡೆದು ತಮ್ಮ ಉತ್ಪನ್ನಗಳನ್ನು ನಿಮಗೆ ಮಾರಲು ಯತ್ನಿಸುತ್ತವೆ. ಇದೆಲ್ಲ ನಮ್ಮ ಅರಿವು, ಒಪ್ಪಿಗೆ, ನಿಯಂತ್ರಣವಿಲ್ಲದೆ ಆಗುತ್ತಿದೆ ಎಂಬುದು ಮಾತ್ರ ಆತಂಕಕಾರಿ. ನೀವು ಮಾಡಿದ ಮೂರ್ನಾಲ್ಕು ಕರೆಗಳ ಆಧಾರದಲ್ಲಿ, ನಿಮಗೊಂದು ಆರೋಗ್ಯ ಸಮಸ್ಯೆಯಿದೆ ಎಂಬುದನ್ನು ಪತ್ತೆಹಚ್ಚಬಹುದು. ನಿಮಗೆ ಕೆಲಸ ಕೊಡಲಿರುವ ಕಂಪನಿ ಈ ಮಾಹಿತಿಯನ್ನು ಪಡೆದರೆ, ಆಗ ನಿಮ್ಮ ಗತಿಯೇನು? ಊಹಿಸಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌