ಆ್ಯಪ್ನಗರ

Ola Cab: ಲಂಡನ್‌ ರಸ್ತೆಗೆ ಬೆಂಗಳೂರಿನ ಓಲಾ

ದೇಶದ ಪ್ರಮುಖ ಸ್ಟಾರ್ಟಪ್ ಓಲಾ ವಿದೇಶದಲ್ಲೂ ಸೇವೆ ವಿಸ್ತರಿಸುತ್ತಿದೆ. ಸಮೀಪದ ಪ್ರತಿಸ್ಪರ್ಧಿ ಉಬೆರ್ ಲಂಡನ್‌ನಲ್ಲಿ ಹಿನ್ನಡೆ ಅನುಭವಿಸಿದ ಬೆನ್ನಲ್ಲೇ ಓಲಾ ಲಂಡನ್‌ ರಸ್ತೆಗೆ ಲಗ್ಗೆ ಇರಿಸಿದೆ.

Vijaya Karnataka 12 Feb 2020, 9:44 am
ಕ್ಯಾಬ್‌ ಸೇವೆ ನೀಡುತ್ತಿರುವ ಬೆಂಗಳೂರು ಮೂಲದ ಓಲಾ, ಈಗ ಲಂಡನ್‌ಗೆ ತನ್ನ ಸೇವೆ ಆರಂಭಿಸಿದೆ. ಲಂಡನ್‌ನಲ್ಲಿ 25,000 ಚಾಲಕರು ನೋಂದಣಿಯಾಗಿದ್ದು, ಇಂಗ್ಲೆಂಡ್‌ನ ಈ ನಗರದಲ್ಲಿ ಸದ್ದು ಮಾಡಲು ಓಲಾ ಹೊರಟಿದೆ.
Vijaya Karnataka Web Ola App
Ola Cab


ಸುರಕ್ಷತೆಯ ವಿಷಯದಲ್ಲಿ ನಿಯಮಗಳನ್ನು ಉಲ್ಲಂಘಿಸಿದ ಆರೋಪದನ್ವಯ ಉಬರ್‌ ಸಂಸ್ಥೆಯು ಲಂಡನ್‌ನಲ್ಲಿ ತನ್ನ ಪರವಾನಗಿಯನ್ನು ಇತ್ತೀಚೆಗಷ್ಟೇ ಕಳೆದುಕೊಂಡಿದೆ. ಈ ಹೊತ್ತಿನಲ್ಲಿಉಬರ್‌ನ ಸ್ಪರ್ಧಿಯಾದ ಓಲಾ, ಲಂಡನ್‌ನಲ್ಲಿ ತನ್ನ ಕಾರ್ಯಾಚರಣೆ ಆರಂಭಿಸಿದೆ. ಇದು ಮತ್ತೊಂದು ನಗರಕ್ಕೆ ನಮ್ಮ ಪ್ರವೇಶ ಮಾತ್ರವಲ್ಲ. ನಮ್ಮೆಲ್ಲರ ಪಾಲಿಗೆ ರೂಪಾಂತರ ತರುವಂಥ ಸಂದರ್ಭ ಇದಾಗಿದೆ ಎಂದು ಉದ್ಯೋಗಿಗಳಿಗೆ ಬರೆದಿರುವ ಇ-ಮೇಲ್‌ನಲ್ಲಿಓಲಾ ಸಿಇಒ ಭವಿಷ್‌ ಅಗರವಾಲ್‌ ಹೇಳಿದ್ದಾರೆ.

ಉಬರ್‌ ಮತ್ತು ಓಲಾ ಈ ಎರಡು ಕಂಪನಿಗಳಿಗೂ ಜಪಾನ್‌ನ ಸಾಫ್ಟ್‌ಬ್ಯಾಂಕ್‌ ನೆರವು ನೀಡಿದೆ. ಭಾರತದಲ್ಲಿ ಕ್ಯಾಬ್‌ ಸೇವೆಯಲ್ಲಿ ನಾಯಕತ್ವಕ್ಕಾಗಿ ಎರಡು ಕಂಪನಿಗಳೂ ತೀವ್ರ ಪೈಪೋಟಿಗೆ ಇಳಿದಿವೆ. 2018ರ ಫೆಬ್ರವರಿಯಲ್ಲಷ್ಟೇ ಓಲಾ ಕಂಪನಿಯು ಆಸ್ಪ್ರೇಲಿಯಾದಲ್ಲಿ ಸೇವೆಯನ್ನು ಆರಂಭಿಸಿದೆ. ಅದೇ ವರ್ಷದ ಆಗಸ್ಟ್‌ನಲ್ಲಿ ಬ್ರಿಟನ್‌ಗೆ, ನವೆಂಬರ್‌ನಲ್ಲಿ ನ್ಯೂಜಿಲೆಂಡ್‌ಗೆ ತನ್ನ ಸೇವೆಯನ್ನು ಓಲಾ ವಿಸ್ತರಿಸಿದೆ.

ಜತೆಗೆ ದೇಶದಲ್ಲೂ ವಿವಿಧ ಸ್ವರೂಪದ ಸೇವೆಯನ್ನು ಓಲಾ ನೀಡುತ್ತಿದ್ದು, ಮೆಟ್ರೋ ಮತ್ತು ಮಹಾನಗರಗಳಲ್ಲಿ ಸೇವೆ ವಿಸ್ತರಿಸುತ್ತಿದೆ.

Forget Password: ಐಫೋನ್ ಫೇಸ್‌ ಐಡಿ ಅಥವಾ ಫಿಂಗರ್‌ಪ್ರಿಂಟ್ ಸಾಕು!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌