ಆ್ಯಪ್ನಗರ

PUBG Mobile: ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪ್ ಸ್ಟೋರ್‌ನಿಂದ ಕಣ್ಮರೆಯಾದ ಪಬ್‌ಜಿ

ಚೀನಾ ಮೂಲದ ಆ್ಯಪ್ ನಿಷೇಧದ ಬೆನ್ನಲ್ಲೇ ಅದೇ ಮಾದರಿಯ ನೂರಾರು ನಕಲಿ ಆ್ಯಪ್ ಕೂಡ ಕಾಣಿಸಿಕೊಂಡಿದ್ದು, ಜನರು ಎಚ್ಚರಿಕೆ ವಹಿಸುವುದು ಸೂಕ್ತ.

Times Now 4 Sep 2020, 2:48 pm
ದೇಶದಲ್ಲಿ ಚೀನಾ ಮೂಲದ ಆ್ಯಪ್ ವಿರುದ್ಧ ಸರಕಾರ ನಿಷೇಧದ ಕ್ರಮ ಮುಂದುವರಿದಿದೆ. ಈ ಬಾರಿ ಪಬ್‌ಜಿ ಸಹಿತ 118 ಆ್ಯಪ್‌ ಮತ್ತು ಗೇಮ್‌ಗಳನ್ನು ನಿಷೇಧಿಸಲಾಗಿದ್ದು, ಅದರ ಬೆನ್ನಲ್ಲೇ ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪಲ್ ಆ್ಯಪ್ ಸ್ಟೋರ್‌ನಿಂದ ಪಬ್‌ಜಿ ಮತ್ತು ಪಬ್‌ಜಿ ಲೈಟ್ ತೆಗೆದುಹಾಕಲಾಗಿದೆ.
Vijaya Karnataka Web PubG Ban
PUBG Mobile


ಸರಕಾರ ಆ್ಯಪ್ ಮತ್ತು ಗೇಮ್ ನಿಷೇಧಿಸಿದ ಬೆನ್ನಲ್ಲೇ ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪ್ ಸ್ಟೋರ್‌ಗೆ ಅಧಿಸೂಚನೆ ಹೊರಡಿಸಿದೆ. ಜತೆಗೆ ಎಲ್ಲ ಟೆಲಿಕಾಂ ಮತ್ತು ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್ ಸೇವೆ ಪೂರೈಕೆದಾರರಿಗೆ ಸೂಚನೆ ಹೊರಡಿಸಿದ್ದು, ಅದರ ಪ್ರಕಾರ ಪ್ಲೇ ಸ್ಟೋರ್ ಮತ್ತು ಆ್ಯಪ್ ಸ್ಟೋರ್‌ನಿಂದ ನಿಷೇಧಿತ ಆ್ಯಪ್ ತೆಗೆದುಹಾಕಲಾಗಿದೆ.

ದೇಶದಲ್ಲಿ ಭದ್ರತೆ ಮತ್ತು ರಾಷ್ಟ್ರೀಯ ಹಿತಾಸಕ್ತಿ ಕಾರಣದಿಂದ ಚೀನಾ ಮೂಲದ ವಿವಿಧ ಆ್ಯಪ್ ಮತ್ತು ಗೇಮ್‌ಗಳನ್ನು ನಿಷೇಧಿಸಲಾಗುತ್ತಿದೆ. ಹೀಗಾಗಿ ನಿಷೇಧಿತ ಪಬ್‌ಜಿ ಗೇಮ್ ಅನ್ನು ಇನ್ನು ದೇಶದಲ್ಲಿ ಡೌನ್‌ಲೋಡ್ ಮಾಡಲು ಮತ್ತು ಬಳಸಲು ಸಾಧ್ಯವಿಲ್ಲ. ಈಗಾಗಲೇ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಬಳಸುತ್ತಿರುವವರಿಗೆ ಪಬ್‌ಜಿ ನೋಟಿಫಿಕೇಶನ್‌ ಕಾಣಿಸಿಕೊಳ್ಳುತ್ತಿದ್ದು, ಭಾರತದಲ್ಲಿ ಆ್ಯಪ್ ಕಾರ್ಯನಿರ್ವಹಿಸುವುದಿಲ್ಲ ಎಂದಿದೆ.

ಪಬ್‌ಜಿ ನಿಷೇಧ



PUBG Ban: ಜನಪ್ರಿಯ ಪಬ್‌ಜಿ ಸಹಿತ 118 ಆ್ಯಪ್ ಬ್ಯಾನ್ ಮಾಡಿದ ಕೇಂದ್ರ ಸರಕಾರ

ಚೀನಾ ಮೂಲದ ಆ್ಯಪ್ ನಿಷೇಧದ ಬೆನ್ನಲ್ಲೇ ಅದೇ ಮಾದರಿಯ ನೂರಾರು ನಕಲಿ ಆ್ಯಪ್ ಕೂಡ ಕಾಣಿಸಿಕೊಂಡಿದ್ದು, ಜನರು ಎಚ್ಚರಿಕೆ ವಹಿಸುವುದು ಸೂಕ್ತ. ಅಲ್ಲದೆ, ನಕಲಿ ವಿಪಿನ್ ಮೂಲಕ ಗೇಮ್ ಮತ್ತು ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಆಟವಾಡುವುದು ಕೂಡ ಅಪಾಯಕಾರಿಯಾಗಿದೆ.

PUBG Ban: ಪಬ್‌ಜಿ ಗೇಮ್ ಬದಲು ಬೇರೆ ಯಾವ ಸ್ಮಾರ್ಟ್‌ಫೋನ್ ಗೇಮಿಂಗ್ ಆಯ್ಕೆ ಇದೆ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌