ಆ್ಯಪ್ನಗರ

Samsung Galaxy A80: ಫ್ಲಿಪ್‌ಕಾರ್ಟ್‌ ಸೇಲ್‌ನಲ್ಲಿ 20,000 ರೂ. ಡಿಸ್ಕೌಂಟ್!

ಸ್ಯಾಮ್‌ಸಂಗ್ ಗ್ಯಾಲಕ್ಸಿ A80 ಫೋನ್ ಮೂಲ ಬೆಲೆ 52,000 ರೂ. ಇದ್ದು, ಫ್ಲಿಪ್‌ಕಾರ್ಟ್‌ನಲ್ಲಿ ಈ ಮೊದಲು ಸೇಲ್ ಪ್ರೈಸ್ 41,990 ರೂ. ಇತ್ತು.

TNN & Agencies 24 Jun 2020, 5:34 pm
ಕೊರಿಯಾ ಮೂಲದ ಸ್ಮಾರ್ಟ್‌ಫೋನ್ ಮತ್ತು ಎಲೆಕ್ಟ್ರಾನಿಕ್ಸ್ ತಯಾರಿಕ ಕಂಪನಿ ಸ್ಯಾಮ್‌ಸಂಗ್, ಗ್ಯಾಲಕ್ಸಿ ಸ್ಮಾರ್ಟ್‌ಫೋನ್ ಸರಣಿಯಲ್ಲಿ ಕಳೆದ ವರ್ಷ ಪರಿಚಯಿಸಿದ್ದ ಫೋನ್ ಗ್ಯಾಲಕ್ಸಿ A80 ಫೋನ್‌ಗೆ ಫ್ಲಿಪ್‌ಕಾರ್ಟ್‌ನಲ್ಲಿ ಭರ್ಜರಿ ಡಿಸ್ಕೌಂಟ್ ಲಭ್ಯವಾಗಿದೆ.
Vijaya Karnataka Web Samsung Galaxy A80
Samsung Galaxy A80


ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ಸ್ ಸೇಲ್‌ನಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ A80 ಫೋನ್‌ಗೆ 20,000 ರೂ. ವಿಶೇಷ ಡಿಸ್ಕೌಂಟ್ ಘೋಷಿಸಲಾಗಿದ್ದು, 21,999 ರೂ.ಗೆ ಲಭ್ಯವಾಗುತ್ತಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ A80 ಫೋನ್ ಮೂಲ ಬೆಲೆ 52,000 ರೂ. ಇದ್ದು, ಫ್ಲಿಪ್‌ಕಾರ್ಟ್‌ನಲ್ಲಿ ಈ ಮೊದಲು ಸೇಲ್ ಪ್ರೈಸ್ 41,990 ರೂ. ಇತ್ತು.

ಆದರೆ ಬಿಗ್ ಸೇವಿಂಗ್ಸ್ ಸೇಲ್‌ನಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ A80 ಫೋನ್ ಮೇಲೆ ವಿಶೇಷ ಆಫರ್ ಘೋಷಿಸಲಾಗಿದ್ದು, ಸೇಲ್ ಆರಂಭವಾದ ಕೆಲವೇ ಕ್ಷಣದಲ್ಲಿ ಔಟ್ ಆಫ್ ಸ್ಟಾಕ್ ಆಗಿದ್ದು, ಮತ್ತೆ ಹೊಸ ಸ್ಟಾಕ್ ಬರುವವರೆಗೆ ಆಸಕ್ತ ಗ್ರಾಹಕರು ಕಾಯಬೇಕಿದೆ. ಅದರ ಜತೆಗೆ ಎಚ್‌ಡಿಎಫ್‌ಸಿ ಶೇ. 10 ಡಿಸ್ಕೌಂಟ್ ಕೂಡ ಇದ್ದು, ಇಎಂಐ ಆಫರ್ ಕೂಡ ಇದೆ.

OnePlus TV: ಅಮೆಜಾನ್‌ನಲ್ಲಿ ಸ್ಮಾರ್ಟ್ ಟಿವಿ ಪ್ರಿ ಬುಕಿಂಗ್ ಆರಂಭ

ಸ್ಯಾಮ್‌ಸಂಗ್ ಗ್ಯಾಲಕ್ಸಿ A80
8 GB RAM ಮತ್ತು 128 GB ಸ್ಟೋರೇಜ್ ಇದ್ದು, 6.7 ಇಂಚಿನ ಡಿಸ್‌ಪ್ಲೇ, 48MP + 8MP ಮತ್ತು 8 MP ರೊಟೇಟಿಂಗ್ ಕ್ಯಾಮರಾ ವ್ಯವಸ್ಥೆ ಹೊಂದಿದೆ. 3700 mAh ಬ್ಯಾಟರಿ, ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ 730G ಒಕ್ಟಾ ಕೋರ್ ಪ್ರೊಸೆಸರ್ ಇದರ ವಿಶೇಷತೆಯಾಗಿದೆ.

Vodafone Idea: ಪ್ರಿಪೇಯ್ಡ್ ಗ್ರಾಹಕರಿಗೆ 5 GB ಉಚಿತ ಡೇಟಾ ಆಫರ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌