ಆ್ಯಪ್ನಗರ

Best WhatsApp Feature: ಈ ವರ್ಷ ವಾಟ್ಸಪ್ ಪರಿಚಯಿಸಿದ ಬೆಸ್ಟ್ ಫೀಚರ್‌ಗಳಿವು!

ಈ ವರ್ಷವೂ ಬಹೂಪಯೋಗಿ ಮತ್ತು ಆಕರ್ಷಕ ಫೀಚರ್ಸ್ ಅನ್ನು ಅಪ್‌ಡೇಟ್ ಮೂಲಕ ಬಳಕೆದಾರರಿಗೆ ಒದಗಿಸಿದೆ. ಅದರ ಕುರಿತು ವಿವರ ಇಲ್ಲಿದೆ.

Times Now 9 Dec 2020, 1:49 pm
ವಾಟ್ಸಪ್ ಎನ್ನುವುದು ಅತ್ಯಂತ ಜನಪ್ರಿಯ ಮಾಧ್ಯಮವಾಗಿ ಮಾರ್ಪಟ್ಟಿದೆ. ಸ್ಮಾರ್ಟ್‌ಫೋನ್ ಇದ್ದರೆ ವಾಟ್ಸಪ್ ಇದ್ದಂತೆಯೇ ಎನ್ನುವಷ್ಟು ಮಟ್ಟಿಗೆ ವಾಟ್ಸಪ್ ಜನಪ್ರಿಯತೆ ಗಳಿಸಿದೆ. ಭಾರತದಲ್ಲಿ ಒಟ್ಟಾರೆ 40 ಕೋಟಿ ವಾಟ್ಸಪ್ ಬಳಕೆದಾರರಿದ್ದಾರೆ ಎಂದು ಕಂಪನಿ ಹೇಳಿದೆ.
Vijaya Karnataka Web Best WhatsApp feature
WhatsApp Update


ಪ್ರತಿ ವರ್ಷವೂ ವಾಟ್ಸಪ್ ಹೊಸ ಹೊಸ ಫೀಚರ್‌ಗಳನ್ನು ದೇಶದಲ್ಲಿ ಬಳಕೆದಾರರಿಗೆ ನೀಡುತ್ತಿದೆ. ಅದರಂತೆ ಈ ವರ್ಷವೂ ಬಹೂಪಯೋಗಿ ಮತ್ತು ಆಕರ್ಷಕ ಫೀಚರ್ಸ್ ಅನ್ನು ಅಪ್‌ಡೇಟ್ ಮೂಲಕ ಬಳಕೆದಾರರಿಗೆ ಒದಗಿಸಿದೆ. ಅದರ ಕುರಿತು ವಿವರ ಇಲ್ಲಿದೆ.

ಡಿಸಾಪಿಯರಿಂಗ್ ಮೆಸೇಜಸ್
ವೈಯಕ್ತಿಕ ಚಾಟ್ ಮತ್ತು ಗ್ರೂಪ್ ಮೆಸೇಜ್ ಅಲ್ಲಿ ನೀವು ಡಿಸಾಪಿಯರಿಂಗ್ ಮೆಸೇಜಸ್ ಫೀಚರ್ ಆಯ್ಕೆ ಮಾಡಿದರೆ, ನಿಮ್ಮ ಮೆಸೇಜ್‌ಗಳು 7 ದಿನಗಳಲ್ಲಿ ತಾನಾಗಿಯೇ ಡಿಲೀಟ್ ಆಗುತ್ತವೆ.

ಅನಿಮೇಟೆಡ್ ಸ್ಟಿಕರ್ಸ್
ವಾಟ್ಸಪ್ ಈ ಬಾರಿ ಅನಿಮೇಶನ್ ಸ್ಟಿಕರ್ಸ್ ಅನ್ನು ಬಳಕೆದಾರರಿಗೆ ಒದಗಿಸಿದ್ದು, ಆಕರ್ಷಕ ಫೀಚರ್ಸ್ ಇದಾಗಿದೆ. ಸ್ಟಿಕರ್ಸ ಬಳಕೆದಾರರಿಗೆ ಇದರಿಂದ ಅನುಕೂಲವಾಗಲಿದೆ.

ವಾಟ್ಸಪ್ ಪೇಮೆಂಟ್ಸ್
ವಾಟ್ಸಪ್ ಕೊನೆಗೂ ದೇಶದಲ್ಲಿ ಯುಪಿಐ ಪೇಮೆಂಟ್ಸ್ ಆಯ್ಕೆಯನ್ನು ನೀಡುತ್ತಿದೆ. ಪೇಟಿಎಂ, ಗೂಗಲ್ ಪೇ ಮತ್ತು ಅಮೆಜಾನ್ ಪೇ, ಫೋನ್‌ಪೆ ಮಾದರಿಯಲ್ಲಿ ನೀವು ವಾಟ್ಸಪ್ ಬಳಸಿಕೊಂಡು ಪಾವತಿ ಮಾಡಬಹುದು.

ಡಾರ್ಕ್ ಮೋಡ್
ವಾಟ್ಸಪ್ ಬಳಕೆದಾರರ ಕಣ್ಣಿನ ಆರೋಗ್ಯ ಕಾಪಾಡಲು ಮತ್ತು ಹೆಚ್ಚಿನ ಬ್ಯಾಟರಿ ಉಳಿತಾಯ ಮಾಡುವ ಸಲುವಾಗಿ ಡಾರ್ಕ್ ಮೋಡ್ ಆಯ್ಕೆ ದೊರೆಯುತ್ತಿದೆ.

WhatsApp Safety: ವಾಟ್ಸಪ್‌ನಲ್ಲಿ ಕಿರಿಕಿರಿಯಾಗುತ್ತಿದ್ದರೆ ಈ ಟಿಪ್ಸ್ ಅನುಸರಿಸಿ ನೋಡಿ..

ಶಾಶ್ವತ ಮ್ಯೂಟ್
ಚಾಟ್ ಅಥವಾ ಗ್ರೂಪ್ ಚಾಟ್ ಅನ್ನು ನೀವು ಈಗ ಶಾಶ್ವತವಾಗಿ ಮ್ಯೂಟ್ ಮಾಡಬಹುದು. ಈ ಆಯ್ಕೆ ಒದಗಿಸುವ ಮೂಲಕ ವಾಟ್ಸಪ್ ಬಳಕೆದಾರರಿಗೆ ವಿಶೇಷ ಅನುಕೂಲ ಕಲ್ಪಿಸಿದೆ.

AirPods Max: 59,900 ರೂ. ದರದ ಅತ್ಯಾಧುನಿಕ ಹೆಡ್‌ಫೋನ್ ಪರಿಚಯಿಸಿದ ಆ್ಯಪಲ್!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌