ಆ್ಯಪ್ನಗರ

Raksha Bhandan Gift: 15,000 ರೂ. ಒಳಗಿನ ಬೆಸ್ಟ್‌ ಫೋನ್

ಸಹೋದರತ್ವ ಸಾರುವ ಹಬ್ಬ ರಾಖಿ ಮತ್ತೆ ಬಂದಿದೆ. ನಿಮ್ಮ ಸಹೋದರಿಗೆ ಯಾವ ಸ್ಮಾರ್ಟ್‌ಫೋನ್ ಉಡುಗೊರೆ ಕೊಡಬಹುದು ಎನ್ನುವ ಗೊಂದಲವಿದ್ದರೆ, ಇಲ್ಲಿವೆ ಕೆಲವೊಂದು ಆಯ್ಕೆಗಳು.

Times Now 12 Aug 2019, 12:06 pm
ರಾಖಿ ಹಬ್ಬ ಬರುತ್ತಿದೆ. ಸಹೋದರ ಮತ್ತು ಸಹೋದರಿಯ ನಡುವಣ ಬಾಂಧವ್ಯವನ್ನು ಗಟ್ಟಿಗೊಳಿಸುವ ಈ ಹಬ್ಬಕ್ಕೆ ದೇಶದಲ್ಲಿ ವಿಶೇಷ ಮಹತ್ವವಿದೆ.
Vijaya Karnataka Web Rakhi


ಗ್ಯಾಜೆಟ್ ಮತ್ತು ಸ್ಮಾರ್ಟ್‌ಫೋನ್‌ ಯುಗದಲ್ಲಿ ಸಹೋದರಿಗೆ ಹೊಸ ಸ್ಮಾರ್ಟ್‌ಫೋನ್ ಕೊಡಿಸಲು ಇದು ಸಕಾಲ. ರಾಖಿ ಗಿಫ್ಟ್ ಕೂಡ ಸಹೋದರಿಗೆ ವಿಶೇಷವಾಗಿದ್ದು, ಸ್ಮಾರ್ಟ್‌ಫೋನ್ ಗಿಫ್ಟ್ ನೀಡುವುದು ಉತ್ತಮ ಆಯ್ಕೆಯಾಗಿದೆ.

ನಿಮ್ಮ ಸಹೋದರಿ ಹೊಸ ಸ್ಮಾರ್ಟ್‌ಫೋನ್ ಬಯಸುತ್ತಿದ್ದರೆ, ಮತ್ತು ನಿಮ್ಮ ಬಜೆಟ್ 15,000 ರೂ. ಆಗಿದ್ದರೆ ಇಲ್ಲಿ ಕೆಲವೊಂದು ಆಯ್ಕೆಗಳನ್ನು ನೀಡಲಾಗಿದೆ.

ಶವೋಮಿ ರೆಡ್ಮಿ ನೋಟ್ 7 Pro:
6.3 ಇಂಚಿನ ಡಿಸ್‌ಪ್ಲೇ, 4 GB ಅಥವಾ 6 GB RAM ಮತ್ತು64 GB ಇಲ್ಲವೆ 128 GB ಸ್ಟೋರೇಜ್ ಇದೆ.
ಬೆಲೆ 13,999 ರೂ.

ರಿಯಲ್‌ಮಿ 3 Pro:
6.3 ಇಂಚಿನ ಡಿಸ್‌ಪ್ಲೇ ಹಾಗೂ 4 GB ಇಲ್ಲವೆ 6 GB RAM ಮತ್ತು64 GB ಅಥವಾ 128 GB ಸ್ಟೋರೇಜ್‌.
ಬೆಲೆ 12,999 ರೂ.

ವಿವೋ Z1 Pro:
6.53 ಇಂಚಿನ ಡಿಸ್‌ಪ್ಲೇ, 32 MP ಸೆಲ್ಫಿ, 16+8+2 ಮೆಗಾಪಿಕ್ಸೆಲ್ ತ್ರಿವಳಿ ಕ್ಯಾಮರಾ.
ಬೆಲೆ 14,990 ರೂ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M30:
4 GB RAM + 64 GB ಮೆಮೊರಿ, 13+5+5 ಮೆಗಾಪಿಕ್ಸೆಲ್ ತ್ರಿವಳಿ ಕ್ಯಾಮರಾ.
ಬೆಲೆ 13,990 ರೂ.

ಹೊನೊರ್ 20i:
ಹೊನೊರ್‌ ಫೋನ್ 4 GB RAM ಮತ್ತು 64 GB ಸ್ಟೋರೇಜ್, 24+8+2 ಮೆಗಾಪಿಕ್ಸೆಲ್ ತ್ರಿವಳಿ ಕ್ಯಾಮರಾ ಇದರಲ್ಲಿದೆ.
ಬೆಲೆ 14,999 ರೂ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌