ಆ್ಯಪ್ನಗರ

Xstream Smart Box: ಏರ್‌ಟೆಲ್‌ ಡಿಜಿಟಲ್ ಟಿವಿ

ಡಿಟಿಎಚ್ ಮತ್ತು ಇಂಟರ್‌ನೆಟ್ ಸ್ಟ್ರೀಮಿಂಗ್ ಸೇವೆಗಳು ಹೆಚ್ಚು ಜನಪ್ರಿಯವಾಗುತ್ತಿದ್ದು, ಸೇವಾದಾರ ಕಂಪನಿಗಳು ಹೊಸ ಆಯ್ಕೆಗಳನ್ನು ಪರಿಚಯಿಸುತ್ತಿವೆ.

Agencies 13 Aug 2019, 4:25 pm
ರಿಲಯನ್ಸ್ ಜಿಯೊದ ಗಿಗಾಫೈಬರ್‌ ಸೇವೆಗಳ ಬಿಡುಗಡೆ ದಿನಾಂಕ ಘೋಷಣೆಯಾಗಿದ್ದು, ಪ್ಯಾಕೇಜ್ ಮತ್ತು ಆಫರ್ ಪಟ್ಟಿ ಕೂಡ ಪ್ರಕಟಗೊಂಡಿದೆ.
Vijaya Karnataka Web airtel


ಆದರೆ ಇದಕ್ಕೆ ಸವಾಲೊಡ್ಡುವಂತೆ ಎಕ್ಸ್‌ಟ್ರೀಮ್‌ ಸ್ಮಾರ್ಟ್‌ ಬಾಕ್ಸ್‌ ಅನ್ನು ಏರ್‌ಟೆಲ್‌ ಡಿಜಿಟಲ್‌ ಟಿವಿಗಾಗಿ ಬಿಡುಗಡೆ ಮಾಡಲು ಭಾರ್ತಿ ಏರ್‌ಟೆಲ್‌ ಮುಂದಾಗಿದೆ.

ವರದಿಗಳ ಪ್ರಕಾರ ಇದು ಆ್ಯಂಡ್ರಾಯ್ಡ್‌ 9 ಪೈ ಮತ್ತು ಬ್ರಾಡ್‌ಕಾಸ್ಟ್‌ ಡೈರೆಕ್ಟ್ ಟು ಹೋಮ್‌(ಡಿಟಿಎಚ್‌), ಇಂಟರ್‌ನೆಟ್‌ ಪ್ರೊಟೊಕಾಲ್‌ ಟೆಲಿವಿಷನ್‌(ಐಪಿಟಿವಿ), ಓವರ್‌ ದಿ ಟಾಪ್‌(ಒಟಿಟಿ) ಕಂಟೆನ್ಟ್‌ ಅನ್ನು ಈ ಬಾಕ್ಸ್‌ ಮೂಲಕ ಪಡೆಯಬಹುದಾಗಿದೆ.

2 ಜಿಬಿ RAM ಮತ್ತು 8 ಜಿಬಿ ಸ್ಟೋರೇಜ್‌ ಸಾಮರ್ಥ್ಯ‌ವನ್ನು ಹೊಂದಿರುವ ಎಕ್ಸ್‌ಟ್ರೀಮ್ ಸ್ಮಾರ್ಟ್‌ ಬಾಕ್ಸ್, ಇಂಟರ್‌ನೆಟ್ ಸಂಪರ್ಕ ಒದಗಿಸುವ ಜತೆಗೆ, ಮನೋರಂಜನೆಯ ವಿವಿಧ ಕಾರ್ಯಕ್ರಮಗಳನ್ನು ಕೂಡ ಪ್ರಚುರಪಡಿಸಲಿದೆ.

ಅಲ್ಲದೆ ಏರ್‌ಟೆಲ್ ಸಮೂಹದ ಚಲನಚಿತ್ರ, ಸಂಗೀತ ಇತರ ಮನೋರಂಜನ ಕಾರ್ಯಕ್ರಮಗಳು ಕೂಡ ಏರ್‌ಟೆಲ್‌ನ ಹೊಸ ಎಕ್ಸ್‌ಟ್ರೀಮ್ ಸ್ಮಾರ್ಟ್‌ ಬಾಕ್ಸ್ ಮೂಲಕ ದೊರೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌