ಆ್ಯಪ್ನಗರ

ಒಂದು ವರ್ಷದಲ್ಲಿ 1 ಕೋಟಿಗೂ ಹೆಚ್ಚು ಸ್ಮಾರ್ಟ್‌ವಾಚ್ ತಯಾರಿಕೆ!..ದಾಖಲೆ ಬರೆದ ಭಾರತೀಯ ಬ್ರ್ಯಾಂಡ್!

ಹೆಚ್ಚಿನ ಬೋಟ್ ಉತ್ಪನ್ನಗಳನ್ನು ಈ ಹಿಂದೆ ಚೀನಾದಲ್ಲಿ ತಯಾರಾಗುತ್ತಿದ್ದವು. ಇದೀಗ ಕಂಪನಿಯು ತನ್ನ ಉತ್ಪಾದನೆಯನ್ನು ವೈವಿಧ್ಯಮಯಗೊಳಿಸಲು ಪ್ರಯತ್ನಿಸುತ್ತಿದ್ದು, ಡಿಕ್ಸನ್ ಜೊತೆ ಜಂಟಿ ಉದ್ಯಮವನ್ನೂ ಆರಂಭಿಸಿದೆ. ಕಂಪನಿಯು ಈಗಾಗಲೇ ಹೆಚ್ಚಿನ ಉತ್ಪಾದನೆಯನ್ನು ಭಾರತದಲ್ಲೇ ನಡೆಸುತ್ತಿದ್ದು, ಪ್ರತಿ ತಿಂಗಳು ಸುಮಾರು 10 ಲಕ್ಷ ಯುನಿಟ್‌ ಉತ್ಪಾದನೆ ನಡೆಸುತ್ತಿದೆ."ನಮ್ಮ ಪ್ರಮುಖ ಉತ್ಪನ್ನಗಳಾದ ವೈಯಕ್ತಿಕ ಆಡಿಯೊ ವಿಭಾಗದಲ್ಲಿ ನಾವು ಸ್ಪಷ್ಟವಾಗಿ ಮುಂಚೂಣಿಯಲ್ಲಿದ್ದೇವೆ

Authored byಭಾಸ್ಕರ್ ಶೆಟ್ಟಿ | Vijaya Karnataka Web 30 Jan 2023, 4:35 pm
ಜನಪ್ರಿಯ ಸ್ವದೇಶಿ ವೇರಿಯಬಲ್ ಟೆಕ್ ಬ್ರ್ಯಾಂಡ್ boAt ಕಂಪೆನಿ ಒಂದು ವರ್ಷದಲ್ಲಿ 1 ಕೋಟಿಗೂ ಹೆಚ್ಚು ಸ್ಮಾರ್ಟ್‌ವಾಚ್ ಅಥವಾ ಧರಿಸಬಹುದಾದ ಉತ್ಪನ್ನಗಳನ್ನು ತಯಾರಿಸುವ ಮೊದಲ ಭಾರತೀಯ ಬ್ರ್ಯಾಂಡ್ ಎಂಬ ಹೆಗ್ಗಳಿಕೆ ಪಡೆದಿದೆ. ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಸ್ಮಾರ್ಟ್‌ವಾಚ್‌ಗಳ ತಯಾರಿಕೆಯಲ್ಲಿ ಹೆಸರುವಾಸಿಯಾಗಿರುವ boAt ಕಂಪೆನಿ ಇಂತಹ ಅಪೂರ್ವ ಸಾಧನೆ ಮಾಡಿರುವ ಬಗ್ಗೆ boAt ಸಂಸ್ಥೆಯ ಸಹ-ಸಂಸ್ಥಾಪಕ ಅಮನ್ ಗುಪ್ತಾ ಅವರು ಈ ಬಗ್ಗೆ ತಿಳಿಸಿದ್ದು, ಕಂಪನಿಯ ಮೇಕ್ ಇನ್ ಇಂಡಿಯಾ ಪ್ರಯಾಣದ ಬಗ್ಗೆ ಮಾತನಾಡುವ ವೇಳೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇಷ್ಟೇ ಅಲ್ಲದೇ, "ನಾವು ನಿಜವಾಗಿಯೂ ಮೇಕ್ ಇನ್ ಇಂಡಿಯಾ ಎಂದು ಅನೇಕ ಜನರು ಪ್ರಶ್ನಿಸಿದ್ದಾರೆ. ಇದು ಸುಲಭವಾಗಿರಲಿಲ್ಲ. ರಸ್ತೆಯಲ್ಲಿ ಅಡೆತಡೆಗಳು ಸಾಲುಗಟ್ಟಿ ನಿಂತಿದ್ದವು. ಆದರೆ ನಾವು ನಮ್ಮ ಬದ್ಧತೆಯಲ್ಲಿ ಅಚಲರಾಗಿದ್ದೇವೆ. ಮೇಕ್ ಇನ್ ಇಂಡಿಯಾಗೆ ನಮ್ಮ ಕೈಲಾದಷ್ಟು ಪ್ರಯತ್ನಿಸುವುದಾಗಿ ನಾವು ಪ್ರತಿಜ್ಞೆ ಮಾಡಿದ್ದೇವೆ" ಎಂದು ಅಮನ್ ಗುಪ್ತಾ ಅವರು ಹೇಳಿದ್ದಾರೆ.
Vijaya Karnataka Web ಒಂದು ವರ್ಷದಲ್ಲಿ 1 ಕೋಟಿಗೂ ಹೆಚ್ಚು ಸ್ಮಾರ್ಟ್‌ವಾಚ್ ತಯಾರಿಕೆ!..ದಾಖಲೆ ಬರೆದ ಭಾರತೀಯ ಬ್ರ್ಯಾಂಡ್!


ಬೋಟ್‌ನ (boAt) ಮಾತೃ ಸಂಸ್ಥೆ ಇಮ್ಯಾಜಿನ್ ಮಾರ್ಕೆಟಿಂಗ್ ಅಕ್ಟೋಬರ್ 28 ರಂದು ತನ್ನ ಅಸ್ತಿತ್ವದಲ್ಲಿರುವ ಷೇರುದಾರ ವಾರ್ಬರ್ಗ್ ಪಿಂಕಸ್‌ನ ಅಂಗಸಂಸ್ಥೆ ಸೌತ್ ಲೇಕ್ ಇನ್ವೆಸ್ಟ್‌ಮೆಂಟ್ ಮತ್ತು ಹೊಸ ಹೂಡಿಕೆದಾರ ಮಲಬಾರ್ ಇನ್ವೆಸ್ಟ್‌ಮೆಂಟ್‌ನಿಂದ 500 ಕೋಟಿ ರೂ. ಸಂಗ್ರಹಿಸಿರುವುದಾಗಿ ಕಳೆದ ಅಕ್ಟೋಬರ್‌ನಲ್ಲಿ ಘೋಷಿಸಿತ್ತು. ಸ್ಮಾರ್ಟ್‌ವಾಚ್‌ಗಳ ವಿಭಾಗದಲ್ಲಿ ಉತ್ಪನ್ನಗಳ ವಿಸ್ತರಣೆ, ಆರ್ & ಡಿ ಮತ್ತು ವಿನ್ಯಾಸ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು, ಭಾರತದ ಹೊರಗೂ ವಹಿವಾಟನ್ನು ಹೆಚ್ಚಿಸಲು ಈ ಹಣವನ್ನು ಬಳಸಲಾಗುತ್ತದೆ ಎಂದು ಕಂಪನಿ ತಿಳಿಸಿದ್ದು, ಬೋಟ್‌ ಸಂಸ್ಥೆಯು ಒಂದೆರಡು ವರ್ಷಗಳಿಂದ ಸ್ಮಾರ್ಟ್ ವಾಚ್‌ಗಳ ವಿಭಾಗದಲ್ಲಿ ತೊಡಗಿಸಿಕೊಂಡಿದೆ.

ಹೆಚ್ಚಿನ ಬೋಟ್ ಉತ್ಪನ್ನಗಳನ್ನು ಈ ಹಿಂದೆ ಚೀನಾದಲ್ಲಿ ತಯಾರಾಗುತ್ತಿದ್ದವು. ಇದೀಗ ಕಂಪನಿಯು ತನ್ನ ಉತ್ಪಾದನೆಯನ್ನು ವೈವಿಧ್ಯಮಯಗೊಳಿಸಲು ಪ್ರಯತ್ನಿಸುತ್ತಿದ್ದು, ಡಿಕ್ಸನ್ ಜೊತೆ ಜಂಟಿ ಉದ್ಯಮವನ್ನೂ ಆರಂಭಿಸಿದೆ. ಕಂಪನಿಯು ಈಗಾಗಲೇ ಹೆಚ್ಚಿನ ಉತ್ಪಾದನೆಯನ್ನು ಭಾರತದಲ್ಲೇ ನಡೆಸುತ್ತಿದ್ದು, ಪ್ರತಿ ತಿಂಗಳು ಸುಮಾರು 10 ಲಕ್ಷ ಯುನಿಟ್‌ ಉತ್ಪಾದನೆ ನಡೆಸುತ್ತಿದೆ."ನಮ್ಮ ಪ್ರಮುಖ ಉತ್ಪನ್ನಗಳಾದ ವೈಯಕ್ತಿಕ ಆಡಿಯೊ ವಿಭಾಗದಲ್ಲಿ ನಾವು ಸ್ಪಷ್ಟವಾಗಿ ಮುಂಚೂಣಿಯಲ್ಲಿದ್ದೇವೆ. ಇಯರ್‌ವೇರ್‌ನಲ್ಲಿ ಜಾಗತಿಕವಾಗಿ ಎರಡನೇ ಅತೀ ದೊಡ್ಡ ಸಂಸ್ಥೆಯಾಗಿದ್ದೇವೆ. ಭಾರತದಲ್ಲಿ ಹುಟ್ಟಿದ ಬ್ರ್ಯಾಂಡ್ ಈಗ ವಿಶ್ವದ ಪ್ರಮುಖ ಬ್ರಾಂಡ್‌ಗಳಲ್ಲಿ ಸ್ಥಾನ ಪಡೆದಿರುವುದು ಹೆಮ್ಮೆಯ ವಿಷಯ. ನಾವು ಈಗ ಸ್ಮಾರ್ಟ್ ವಾಚ್‌ಗಳನ್ನು ನಮ್ಮ ಎರಡನೇ ಪ್ರಮುಖ ಉತ್ಪನ್ನವಾಗಿಸಲು ಬಯಸುತ್ತಿದ್ದೇವೆ,” ಎಂದು ಅಮನ್ ಗುಪ್ತಾ ಅವರು ಹೇಳಿದ್ದಾರೆ.

“ಹೊಸ ಹೂಡಿಕೆಯು ನವೀನ ಉತ್ಪನ್ನಗಳೊಂದಿಗೆ ಸ್ಮಾರ್ಟ್ ವಾಚ್‌ಗಳ ವಲಯದಲ್ಲಿ ಸದ್ದು ಮಾಡಲು ನಮಗೆ ಅವಕಾಶ ನೀಡಲಿದೆ. ಬೋಟ್ ಕಂಪನಿ ಮೇಲೆ ಹೂಡಿಕೆದಾರರು ಇಟ್ಟುಕೊಂಡಿರುವ ಸಂಬಂಧ ಮತ್ತು ವಿಶ್ವಾಸದಿಂದ ನಾವು ರೋಮಾಂಚನಗೊಂಡಿದ್ದೇವೆ,” ಎಂದು ಅವರು ಹೇಳಿದ್ದಾರೆ. ಕಳೆದ ವರ್ಷದ ಆರಂಭದಲ್ಲಿ ಕಂಪನಿಯು ತನ್ನ ಕರಡು ಪತ್ರಗಳನ್ನು ಸೆಕ್ಯುರಿಟೀಸ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾಕ್ಕೆ (ಸೆಬಿ)ಗೆ ಸಲ್ಲಿಸಿ, 2,000 ಕೋಟಿ ರೂ. ಆರಂಭಿಕ ಸಾರ್ವಜನಿಕ ಕೊಡುಗೆಗೆ (ಐಪಿಒ) ಅರ್ಜಿ ಸಲ್ಲಿಸಿತ್ತು. ಆದಾಗ್ಯೂ, ಕಂಪನಿಯು ತನ್ನ ಷೇರು ಮಾರುಕಟ್ಟೆ ಪ್ರವೇಶದ ಯೋಜನೆಯನ್ನು ಹಿಂಪಡೆದಿದೆ.ಐಪಿಒಗೂ ಮುನ್ನ ಕಂಪನಿಗೆ 180 ಕೋಟಿ ರೂ. ಸಂಗ್ರಹಿಸಲು ಅನುಮತಿ ನೀಡಲಾಗಿತ್ತು. ಆದರೆ ಕಂಪನಿಯು 500 ಕೋಟಿ ರೂ.ಗೂ ಹೆಚ್ಚು ಹೂಡಿಕೆ ಸಂಗ್ರಹಿಸುವ ಮೂಲಕ ತನ್ನ ಡಿಆರ್‌ಪಿಎಚ್‌ ಹಿಂತೆಗೆದುಕೊಂಡಿದೆ.
ಲೇಖಕರ ಬಗ್ಗೆ
ಭಾಸ್ಕರ್ ಶೆಟ್ಟಿ
ವಿಜಯ ಕರ್ನಾಟಕದಲ್ಲಿ ಡಿಜಿಟಲ್ ಪತ್ರಕರ್ತನಾಗಿ 2022 ಮಾರ್ಚ್‌ನಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. ಇದಕ್ಕೂ ಮುನ್ನ ಡಿಜಿಟಲ್ ಮಾಧ್ಯಮ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ 5 ವರ್ಷಕ್ಕೂ ಹೆಚ್ಚು ಕಾಲ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ ಅನುಭವವಿದೆ. ಪ್ರಮುಖವಾಗಿ ತಂತ್ರಜ್ಞಾನ ಹಾಗೂ ಕ್ರೀಡೆಯ ಕುರಿತಾಗಿ ಲೇಖನ ಬರೆಯುವುದು ಆಸಕ್ತಿಯ ವಿಷಯಗಳು. ದೂರದ ಪ್ರಯಾಣ, ಪ್ರವಾಸ ಕೈಗೊಳ್ಳುವುದು ನನ್ನ ಮೆಚ್ಚಿನ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌