ಆ್ಯಪ್ನಗರ

ಗೂಗಲ್‌ ಪೇ ಮೂಲಕ ರೈಲು ಟಿಕೆಟ್‌ ಬುಕಿಂಗ್

ಇಂಡಿಯನ್‌ ರೈಲ್ವೆ ಕೆಟರಿಂಗ್‌ ಮತ್ತು ಟೂರಿಸಮ್‌ ಕಾರ್ಪೊರೇಷನ್‌(ಐಆರ್‌ಟಿಸಿ) ಬೆಂಬಲಿತ ಸೇವೆ ಇದಾಗಿದೆ. ಈ ಸೇವೆಯು ಆ್ಯಂಡ್ರಾಯ್ಡ್‌ ಮತ್ತು ಐಒಎಸ್‌ ಬಳಕೆದಾರರಿಗೆ ಲಭ್ಯವಿದೆ.

Vijaya Karnataka Web 24 Mar 2019, 5:30 pm
ಸರ್ಚ್‌ ಎಂಜಿನ್‌ ದೈತ್ಯ ಗೂಗಲ್‌ ಕಂಪನಿಯು ತನ್ನ ಗೂಗಲ್‌ ಪೇ ಆ್ಯಪ್‌ಗೆ ಹೊಸ ಫೀಚರ್‌ವೊಂದನ್ನು ಸೇರಿಸಿದ್ದು, ಅದರ ಮೂಲಕ ನೀವು ರೈಲು ಟಿಕೆಟ್‌ ಬುಕ್‌ ಮಾಡಬಹುದು.
Vijaya Karnataka Web Google pay


ಇಂಡಿಯನ್‌ ರೈಲ್ವೆ ಕೆಟರಿಂಗ್‌ ಮತ್ತು ಟೂರಿಸಮ್‌ ಕಾರ್ಪೊರೇಷನ್‌(ಐಆರ್‌ಟಿಸಿ) ಬೆಂಬಲಿತ ಸೇವೆ ಇದಾಗಿದೆ. ಈ ಸೇವೆಯು ಆ್ಯಂಡ್ರಾಯ್ಡ್‌ ಮತ್ತು ಐಒಎಸ್‌ ಬಳಕೆದಾರರಿಗೆ ಲಭ್ಯವಿದೆ.

ಲಭ್ಯವಿರುವ ರೈಲುಗಳ ಶೋಧ, ಟಿಕೆಟ್‌ ಬುಕ್‌ ಮಾಡುವುದು ಮತ್ತು ರದ್ದು ಪಡಿಸುವುದು ಸೇರಿದಂತೆ ಇನ್ನಿತರ ಆಪ್ಷನ್‌ಗಳನ್ನು ಈ ಆ್ಯಪ್‌ ಒದಗಿಸುತ್ತದೆ. ಜತೆಗೆ, ಬಳಕೆದಾರರು ಸುಲಭವಾಗಿ ಟಿಕೆಟ್‌ ಲಭ್ಯತೆ, ಪ್ರಯಾಣದ ಅವಧಿ, ಟ್ರಾವೆಟ್‌ ಟೈಮ್‌ ಸೇರಿದಂತೆ ಇನ್ನಿತರ ಮಾಹಿತಿಯನ್ನೂ ತಿಳಿದುಕೊಳ್ಳಬಹುದು.

ಈ ಹೊಸ ಫೀಚರ್‌ನಿಂದಾಗಿ ಈಗಾಗಲೇ ಗೂಗಲ್‌ ಪೇ ಆ್ಯಪ್‌ನಲ್ಲಿರುವ ಪ್ರಯಾಣ ಮತ್ತು ಸಾರಿಗೆ ಸೇವೆಗಳನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಸಾಧ್ಯವಾಗಲಿದೆ.

ಹಣ ವರ್ಗಾವಣೆಯಲ್ಲಿ ಭಾರಿ ಜನಪ್ರಿಯವಾಗಿರುವ ಗೂಗಲ್‌ ಪೇ ಭಾರತದಲ್ಲಿ ಈ ಮೂಲಕ ಮತ್ತೊಂದಿಷ್ಟು ಬಳಕೆದಾರರನ್ನು ತನ್ನತ್ತ ಸೆಳೆದುಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌