ಆ್ಯಪ್ನಗರ

PubG ಆಡಿ ಆಡಿ ಹಾರ್ಟ್ ಅಟ್ಯಾಕ್: ಸಾವನ್ನಪ್ಪಿದ ಬಾಲಕ

ಪಬ್‌ಜಿ ಗೇಮ್‌ ವ್ಯಸನಿಯಾಗಿದ್ದ ಫುರ್ಕಾನ್‌ ಸತತವಾಗಿ 6 ಗಂಟೆಗಳ ಕಾಲ ಪಬ್‌ಜಿ ಆಟವಾಡಿ ಹೃದಯಾಘಾತಕ್ಕೊಳಗಾಗಿದ್ದಾನೆ.ಆಸ್ಪತ್ರೆಗೆ ಹೋಗುವಷ್ಟರಲ್ಲಿ ಬಾಲಕ ಮೃತಪಟ್ಟಿದ್ದ ಎಮದು ತಿಳಿದುಬಂದಿದೆ.

TIMESOFINDIA.COM 31 May 2019, 3:19 pm
ಇಂದೋರ್: ಮೊಬೈಲ್‌ ಫೋನ್‌ನಲ್ಲಿ ಪಬ್‌ಜಿ ಆಡುತ್ತಿದ್ದ 16 ವರ್ಷದ ಬಾಲಕ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸತತವಾಗಿ 6 ಗಂಟೆಗಳ ಕಾಲ ಪಬ್‌ಜಿ ಆಟವಾಡಿದ್ದ ಕಾರಣ ಹೃದಯಾಘಾತಕ್ಕೊಳಗಾಗಿದ್ದಾನೆ ಎಂದು ತಿಳಿದುಕೊಂಡಿದೆ.
Vijaya Karnataka Web furkan quereshi


ಮಧ್ಯಪ್ರದೇಶದ ನೀಮುಚ್‌ ನಗರದಲ್ಲಿ ಹನ್ನೆರಡನೇ ತರಗತಿಯ ಬಾಲಕ ಫುರ್ಕಾನ್‌ ಖುರೇಷಿ ಪಬ್‌ಜಿ ಆಟವಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಜೋರಾಗಿ ಕೂಗಲು ಆರಂಭಿಸಿದ್ದು, ಬಳಿಕ ನೆಲದ ಮೇಲೆ ಕುಸಿದು ಬಿದ್ದಿದ್ದಾನೆ ಎಂದು ಬಾಲಕನ ತಂದೆ ಹರೂನ್‌ ರಷೀದ್ ಖುರೇಷಿ ಗುರುವಾರ (ಮೇ 30,2019) ವರದಿಗಾರರಿಗೆ ತಿಳಿಸಿದ್ದಾರೆ. ಪಬ್‌ಜಿ ಆಟದಲ್ಲಿ ಸೋತಿದ್ದಕ್ಕೆ ತೀವ್ರ ಬೇಸರಗೊಂಡು ಕಿರುಚಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಮೇ 28ರಂದು ಈ ಘಟನೆ ನಡೆದಿದ್ದು, ಫುರ್ಕಾನ್‌ ಹಾಗೂ ಕುಟುಂಬ ಸಂಬಂಧಿಕರ ಮದುವೆಗೆ ಹೋಗಿದ್ದರು. ಆದರೆ, ಪಬ್‌ಜಿ ಗೇಮ್‌ ವ್ಯಸನಿಯಾಗಿದ್ದ ಫುರ್ಕಾನ್‌ ಊಟವಾದ ತಕ್ಷಣ ಆಟವಾಡುವುದರಲ್ಲಿ ತಲ್ಲೀನನಾಗಿದ್ದ ಎಂದು ಖುರೇಷಿ ಹೇಳಿದ್ದಾರೆ.

ಅಲ್ಲದೆ, ಬ್ಲಾಸ್ಟ್‌ ಮಾಡು, ಬ್ಲಾಸ್ಟ್ ಮಾಡು ಎಂದು ಇದ್ದಕ್ಕಿದ್ದಂತೆ ಕೂಗುತ್ತಿದ್ದ. ಬಳಿಕ, ಇಯರ್‌ ಫೋನ್‌ ತೆಗೆದ ಫುರ್ಕಾನ್, ಮೊಬೈಲ್ ಫೋನ್‌ ಬಿಸಾಕಿ ಅಳಲು ಆರಂಭಿಸಿದ. ಜತೆಗೆ, ಅಯಾನ್‌, ನಾನು ನಿನ್ನ ಜತೆಗೆ ಆಟವಾಡುವುದಿಲ್ಲ. ನೀನು ನನ್ನನ್ನು ಸೋಲಿಸಿದೆ ಎಂದು ಸಹ ಫುರ್ಕಾನ್ ಸಹೋದರಿ ಫಿಜಾ ತಿಳಿಸಿದ್ದಾರೆ.

ನಂತರ ಆತ ಕುಸಿದುಬಿದ್ದಿದ್ದು, ಕುಟುಂಬದವರು ಅವನಿಗೆ ನೆರವಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಆ ವೇಳೆಗೆ ಆತ ಮೃತಪಟ್ಟಿದ್ದ ಎಂದು ವೈದ್ಯರು ತಿಳಿಸಿದ್ದಾರೆ.

ಈ ಸಂಬಂಧ ವಿಜಯ ಕರ್ನಾಟಕ ಸೋದರ ಪತ್ರಿಕೆ ಟೈಮ್ಸ್ ಆಫ್‌ ಇಂಡಿಯಾಗೆ ಮಾಹಿತಿ ನೀಡಿದ ಕಾರ್ಡಿಯಾಲಜಿಸ್ಟ್ ಅಶೋಕ್‌ ಜೈನ್‌, ''ಆತನನ್ನು ಕರೆತಂದಾಗ ಅವನ ನಾಡಿಮಿಡಿತ ಇರಲಿಲ್ಲ. ನಾವು ಬದುಕಿಸಲು ಪ್ರಯತ್ನಪಟ್ಟರೂ ಸಹ ಸಾಧ್ಯವಾಗಲಿಲ್ಲ'' ಎಂದಿದ್ದಾರೆ. ಇನ್ನು, ವೀಡಿಯೋ ಗೇಮ್‌ನ ಉತ್ಸಾಹದಿಂದ ಅಡ್ರಿನಲಿನ್‌ ಜಾಸ್ತಿ ಆಗಿ ಹೃದಯದ ಬಡಿತ ಹೆಚ್ಚಾಗಿ ಕಾರ್ಡಿಯಾಕ್‌ ಅರೆಸ್ಟ್‌ ಉಂಟಾಗಿರಬಹುದು ಎಂದು ಡಾ. ಜೈನ್ ತಿಳಿಸಿದ್ದಾರೆ.

ಇನ್ನು, ಒಂದು ದಿನದಲ್ಲಿ 18 ಗಂಟೆಯವರೆಗೂ ಪಬ್‌ಜಿ ಆಟವಾಡಿದ್ದ. ಗೇಮ್‌ ವ್ಯಸನಿಯಾಗಿದ್ದ ಎಂದು ಫುರ್ಕಾನ್‌ ಸೋದರ ಮೊಹಮ್ಮದ್ ಹಷೀಮ್ ತಿಳಿಸಿದ್ದಾರೆ. ಅಲ್ಲದೆ, ನಾನು ತನ್ನ ಫೋನ್‌ನಿಂದ ಗೇಮ್‌ ಡಿಲೀಟ್ ಮಾಡಿದ್ದೇನೆ ಎಂದಿದ್ದಾನೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌