ಆ್ಯಪ್ನಗರ

Canon EOS R5: ಆಕರ್ಷಕ ಮಿರರ್‌ಲೆಸ್ ಕ್ಯಾಮರಾ ಪರಿಚಯಿಸಿದ ಕ್ಯಾನನ್

ಕ್ಯಾನನ್ EOS R5 ಮೂಲಕ 8K ಸಿನಿಮಾ ಚಿತ್ರೀಕರಣ, 45 ಮೆಗಾಪಿಕ್ಸೆಲ್ ಫುಲ್ ಫ್ರೇಮ್ CMOS ಸೆನ್ಸರ್ ಲಭ್ಯವಾದರೆ, ಕ್ಯಾನನ್ EOS R6 ಮೂಲಕ 4K ಸಿನಿಮಾ ಚಿತ್ರೀಕರಿಸಬಹುದಾಗಿದೆ.

Times Now 10 Jul 2020, 11:05 am
ಕ್ಯಾಮರಾ ಮತ್ತು ಫೋಟೋಗ್ರಫಿ ಪರಿಕರಗಳ ಉತ್ಪಾದನೆಯಲ್ಲಿ ಹೆಸರುವಾಸಿಯಾಗಿರುವ ಜಪಾನ್ ಮೂಲದ ಕ್ಯಾನನ್, EOS ಸರಣಿಯಲ್ಲಿ ಎರಡು ನೂತನ ಕ್ಯಾಮರಾ ಪರಿಚಯಿಸಿದೆ.
Vijaya Karnataka Web Canon
Canon EOS R5


ದೇಶದಲ್ಲಿ ಹವ್ಯಾಸಿ ಫೋಟೋಗ್ರಾಫರ್‌ಗಳ ಮತ್ತು ಆಸಕ್ತರ ಸಂಖ್ಯೆ ಹೆಚ್ಚುತ್ತಿದ್ದು, ಅವರ ಬೇಡಿಕೆಗೆ ಅನುಗುಣವಾಗಿ ಕ್ಯಾನನ್ ಕೂಡ ಅತ್ಯಾಧುನಿಕ ತಂತ್ರಜ್ಞಾನವನ್ನು ಪರಿಚಯಿಸುತ್ತಿದೆ.

ಕ್ಯಾನನ್ EOS ಕ್ಯಾಮರಾ ಅತ್ಯಂತ ಹೆಚ್ಚು ಸ್ಪಷ್ಟ ಮತ್ತು ಬಣ್ಣಗಳ ಸಂಯೋಜನೆಯ ಚಿತ್ತಾರವನ್ನು ಮೂಡಿಸುವುದಕ್ಕೆ ಪ್ರಸಿದ್ಧವಾಗಿದೆ. ಹೊಸ ಕ್ಯಾಮರಾ ಸರಣಿಯಲ್ಲಿ EOS R5 ಮತ್ತು EOS R6 ಎಂಬ ಎರಡು ಮಾದರಿಗಳು ಲಭ್ಯವಿದೆ. ಆಗಸ್ಟ್‌ನಲ್ಲಿ ದೇಶದ ಮಾರುಕಟ್ಟೆಗೆ ಹೊಸ ಕ್ಯಾಮರಾ ದೊರೆಯಲಿದೆ. ಕ್ಯಾನನ್ ಇಮೇಜ್ ಸ್ಕ್ವೇರ್ ಮತ್ತು ಅಧಿಕೃತ ರಿಟೇಲ್ ಮಳಿಗೆ ಮೂಲಕ ನೂತನ ಕ್ಯಾಮರಾ ಖರೀದಿಸಬಹುದಾಗಿದೆ.

ಬೆಲೆ ಎಷ್ಟಿದೆ?
ಕ್ಯಾನನ್ EOS R5 ಮಾದರಿಗೆ 3,39,995 ರೂ.
ಕ್ಯಾನನ್ EOS R6 ದರ 2,15,995 ರೂ.

ಕ್ಯಾನನ್ EOS R5 ಮೂಲಕ 8K ಸಿನಿಮಾ ಚಿತ್ರೀಕರಣ, 45 ಮೆಗಾಪಿಕ್ಸೆಲ್ ಫುಲ್ ಫ್ರೇಮ್ CMOS ಸೆನ್ಸರ್ ಲಭ್ಯವಾದರೆ, ಕ್ಯಾನನ್ EOS R6 ಮೂಲಕ 4K ಸಿನಿಮಾ ಚಿತ್ರೀಕರಿಸಬಹುದಾಗಿದೆ. ಜತೆಗೆ 20.1 ಮೆಗಾಪಿಕ್ಸೆಲ್ ಫುಲ್ ಫ್ರೇಮ್ CMOS ಸೆನ್ಸರ್ ಇದರಲ್ಲಿದೆ.

Best Refrigerator: ನಮ್ಮ ದೇಶದ ಫ್ರಿಡ್ಜ್‌ ಕಂಪನಿಗಳು ಯಾವುದು?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌