ಆ್ಯಪ್ನಗರ

Instagram Bug: ಚೆನ್ನೈ ಟೆಕ್ಕಿಗೆ 7,19,400 ರೂ. ಬಹುಮಾನ

ಇನ್‌ಸ್ಟಾಗ್ರಾಂ ಮಾತ್ರವಲ್ಲದೆ ಫೇಸ್‌ಬುಕ್, ವಾಟ್ಸಪ್ ಮುಂತಾದ ಜನಪ್ರಿಯ ಆ್ಯಪ್ ಮತ್ತು ಸೇವೆಗಳಲ್ಲಿ ಸಮಸ್ಯೆಯಿದ್ದರೆ, ಅದನ್ನು ಪತ್ತೆಹಚ್ಚಿ ಕಂಪನಿಗೆ ತಿಳಿಸುವ ಕೆಲಸವನ್ನು ಎಥಿಕಲ್ ಹ್ಯಾಕರ್ಸ್ ಮಾಡುತ್ತಾರೆ.

Times Now 26 Aug 2019, 4:59 pm
ಇನ್‌ಸ್ಟಾಗ್ರಾಂನಲ್ಲಿ ತೊಂದರೆ ಪತ್ತೆಹಚ್ಚಿದ ಚೆನ್ನೈನ ಟೆಕ್ಕಿಗೆ 10,000 ಡಾಲರ್ ಬಹುಮಾನ ಲಭಿಸಿದೆ.
Vijaya Karnataka Web iNSta


ತಮಿಳುನಾಡಿನ ಚೆನ್ನೈ ಮೂಲದ ಲಕ್ಷ್ಮಣ್ ಮುತ್ತಯ್ಯ ಎಂಬ ಭದ್ರತಾ ಸಂಶೋಧಕ ಕಳೆದ ತಿಂಗಳು ಫೇಸ್‌ಬುಕ್‌ನಲ್ಲಿದ್ದ ತೊಂದರೆಯೊಂದನ್ನು ಪತ್ತೆಹಚ್ಚಿದ್ದಕ್ಕೆ 30,000 ಡಾಲರ್ ಬಹುಮಾನವಾಗಿ ಲಭಿಸಿತ್ತು. ಈ ಬಾರಿ ಇನ್‌ಸ್ಟಾಗ್ರಾಂನ ಭದ್ರತಾ ದೋಷವನ್ನು ಪತ್ತೆಹಚ್ಚಿರುವುದಕ್ಕೆ ಪ್ರತಿಯಾಗಿ ಇನ್‌ಸ್ಟಾಗ್ರಾಂ ಬಗ್ ಬೌಂಟಿ ಯೋಜನೆಯಡಿ ವಿಶೇಷ ಮೊತ್ತ ಲಭಿಸಿದೆ.

ಇನ್‌ಸ್ಟಾಗ್ರಾಂ ಖಾತೆಯಲ್ಲಿನ ಲಾಗಿನ್ ಸಂಬಂಧಿತ ದೋಷದ ಕುರಿತು ಮುತ್ತಯ್ಯ ಈ ಹಿಂದೆಯೂ ಪತ್ತೆಹಚ್ಚಿದ್ದರು. ಅದೇ ಮಾದರಿಯಲ್ಲಿ ಈ ಬಾರಿಯೂ ಲಾಗಿನ್ ದೋಷವೊಂದು ಇದ್ದು, ಅದರಿಂದ ಇನ್ನೊಬ್ಬರ ಖಾತೆಯನ್ನು ಬಳಕೆದಾರರ ಗಮನಕ್ಕೆ ಬಾರದಂತೆ ಹ್ಯಾಕ್ ಮಾಡಿ ಅದರ ಮೂಲಕ ಅವರ ಖಾತೆ ಮಾಹಿತಿ ಕದಿಯಬಹುದಾಗಿತ್ತು.

ಈ ಬಗ್ಗೆ ಪತ್ತೆಹಚ್ಚಿದ ಮುತ್ತಯ್ಯ, ಕಂಪನಿಗೆ ತಿಳಿಸಿದ್ದು, ಸಮಸ್ಯೆಯನ್ನು ಫೇಸ್‌ಬುಕ್ ಸರಿಪಡಿಸಿದೆ ಎಂದು ತಿಳಿಸಿದ್ದಾರೆ.

Reliance JioFiber: ತಡವಾಗಲಿದೆಯೇ ರಿಲಯನ್ಸ್ ಸೇವೆ?

Nokia 105: ಹೊಸ ಬೇಸಿಕ್ ಫೋನ್ ಬಿಡುಗಡೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌