ಆ್ಯಪ್ನಗರ

Alibaba Group: ಇ ಕಾಮರ್ಸ್ ದೈತ್ಯ ಕಂಪನಿಯ ಜಾಕ್‌ ಮಾ ಸಂಪತ್ತು ಶೇ. 45 ಏರಿಕೆ

ಮತ್ತೊಂದೆಡೆ ಚೀನಾ ಮೂಲದ ವಿವಿಧ ಮೊಬೈಲ್ ಅಪ್ಲಿಕೇಶನ್ ಮತ್ತು ಗೇಮ್‌ಗಳನ್ನು ದೇಶದಲ್ಲಿ ನಿಷೇಧಿಸಿರುವುದರಿಂದ, ಅವುಗಳ ಕಂಪನಿಗಳಿಗೆ ಅತಿದೊಡ್ಡ ಮಾರುಕಟ್ಟೆಯಾಗಿದ್ದ ಭಾರತದಲ್ಲಿ ನಷ್ಟ ಉಂಟಾಗಿದೆ.

TNN & Agencies 26 Oct 2020, 12:15 pm
ಜಾಗತಿಕವಾಗಿ ವಿವಿಧ ರಾಷ್ಟ್ರಗಳಲ್ಲಿ ಉದ್ಯಮ ಹೊಂದಿರುವ ಚೀನಾ ಮೂಲದ ಅಲಿಬಾಬಾ ಗ್ರೂಪ್‌ನ ಸ್ಥಾಪಕ ಜಾಕ್ ಮಾ ಈಗ ಮತ್ತೆ ಸುದ್ದಿಯಲ್ಲಿದ್ದಾರೆ.
Vijaya Karnataka Web Jack Ma
Jack Ma


ಇ-ಕಾಮರ್ಸ್‌ ದೈತ್ಯ ಸಂಸ್ಥೆ ಅಲಿಬಾಬಾ ಸಂಸ್ಥಾಪಕ, ಚೀನಾದ ನಂ.1 ಶ್ರೀಮಂತ ಜಾಕ್‌ ಮಾ ಅವರ ಸಂಪತ್ತು ಕೋವಿಡ್‌ ಬಿಕ್ಕಟ್ಟಿನ ನಡುವೆಯೂ ವೃದ್ಧಿಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಅವರ ಸಂಪತ್ತು 45% ವೃದ್ಧಿಯಾಗಿದೆ.

ಹುರುನ್‌ ರೀಸರ್ಚ್ ಇನ್‌ಸ್ಟಿಟ್ಯೂಟ್‌ನ ಸಮೀಕ್ಷೆ ಪ್ರಕಾರ, ಕೋವಿಡ್‌ ಬಿಕ್ಕಟ್ಟಿನ ಸಂದರ್ಭದಲ್ಲಿ ಆನ್‌ಲೈನ್‌ ಶಾಪಿಂಗ್‌ ಮತ್ತು ಸೇವೆಗಳಿಗೆ ಹೆಚ್ಚಿನ ಬೇಡಿಕೆ ಕಂಡು ಬಂದಿತ್ತು. ಹೀಗಾಗಿ ಜಾಕ್‌ ಮಾ ಸಂಪತ್ತು 58.8 ಶತಕೋಟಿ ಡಾಲರ್‌ಗೆ ವೃದ್ಧಿಯಾಗಿದೆ. ಚೀನಾದ ನಂ. 2 ಶ್ರೀಮಂತರಾಗಿ ಟೆನ್ಸೆಂಟ್‌ ಸಂಸ್ಥಾಪಕ ಮಾ ಹುಟೆಂಗ್‌ ಇದ್ದಾರೆ. ವೀಚಾಟ್‌ ಮೆಸೇಜಿಂಗ್‌ ಸೇವೆಯು ಇವರ ಒಡೆತನದಲ್ಲಿದೆ.

ಕಳೆದ ಒಂದು ವರ್ಷದಲ್ಲಿ ಚೀನಾದಲ್ಲಿ ಸರಾಸರಿ ಐವರು ಹೊಸ ಉದ್ಯಮಿಗಳ ಸಂಪತ್ತು, ಪ್ರತಿ ವಾರವೂ ಕನಿಷ್ಠ 100 ಕೋಟಿ ಡಾಲರ್‌ ವೃದ್ಧಿಯಾಗಿದೆ ಎಂದು ಹುರುನ್‌ ಹೇಳಿದೆ. ಕೇವಲ ಒಂದು ವರ್ಷದಲ್ಲಿಯೇ ಇಷ್ಟೊಂದು ಸಂಪತ್ತು ವೃದ್ಧಿಯಾಗಿರುವುದನ್ನು ಜಗತ್ತು ಎಲ್ಲೂ ಕಂಡದ್ದೇ ಇಲ್ಲ.

Xiaomi Redmi: ದೇಶದಲ್ಲಿ ಅತ್ಯಧಿಕ ಫೋನ್ ಮಾರಾಟ ಮಾಡಿದ ಶವೋಮಿ

ಮತ್ತೊಂದೆಡೆ ಚೀನಾ ಮೂಲದ ವಿವಿಧ ಮೊಬೈಲ್ ಅಪ್ಲಿಕೇಶನ್ ಮತ್ತು ಗೇಮ್‌ಗಳನ್ನು ದೇಶದಲ್ಲಿ ನಿಷೇಧಿಸಿರುವುದರಿಂದ, ಅವುಗಳ ಕಂಪನಿಗಳಿಗೆ ಅತಿದೊಡ್ಡ ಮಾರುಕಟ್ಟೆಯಾಗಿದ್ದ ಭಾರತದಲ್ಲಿ ನಷ್ಟ ಉಂಟಾಗಿದೆ.

Big Diwali Sale: ಫ್ಲಿಪ್‌ಕಾರ್ಟ್ ದೀಪಾವಳಿ ಸೇಲ್ ಅಕ್ಟೋಬರ್ 29ರಿಂದ ಆರಂಭ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌