ಆ್ಯಪ್ನಗರ

HarmonyOS: ಹುವೈನ ಹೊಸ ಓಎಸ್

ಅಂಡ್ರಾಯ್ಡ್ ಆಪರೇಟಿಂಗ್ ವ್ಯವಸ್ಥೆಗೆ ಸಡ್ಡು ಹೊಡೆದು, ಹೊಸದಾಗಿ ತನ್ನದೇ ಆದ ಆಪರೇಟಿಂಗ್ ಸಿಸ್ಟಂ ಸಾಫ್ಟ್‌ವೇರ್ ಹೊರತರುವುದಾಗಿ ಘೋಷಿಸಿದ್ದ ಹುವೈ, ಕೊನೆಗೂ ನೂತನ ಓಎಸ್ ಪರಿಚಯಿಸಿದೆ.

Times Now 10 Aug 2019, 11:43 am
ಚೀನಾ ಮೂಲದ ಹುವೈ ಗೂಗಲ್‌ನ ಆಂಡ್ರಾಯ್ಡ್ ಕಾರ್ಯಾಚರಣ ವ್ಯವಸ್ಥೆಗೆ ಕೊನೆಗೂ ಪರ್ಯಾಯವಾಗಿ ತನ್ನದೇ ಆದ ಹೊಸ ಹಾರ್ಮನಿ ಓಎಸ್ ಬಿಡುಗಡೆ ಮಾಡಿದೆ.
Vijaya Karnataka Web OS


ಕಡಿಮೆ ಸ್ಥಳಾವಕಾಶ ಬಳಸುವ ಓಎಸ್ ಇದಾಗಿದ್ದು, ಸರಳ ಆದರೆ ಅತಿ ಹೆಚ್ಚು ಆಯ್ಕೆಗಳು, ಬಲಿಷ್ಠ ಕಾರ್ಯಾಚರಣ ವ್ಯವಸ್ಥೆ ಇದಾಗಿದೆ. ಆರಂಭದಲ್ಲಿ ಸ್ಮಾರ್ಟ್‌ವಾಚ್ ಮತ್ತು ಸ್ಮಾರ್ಟ್‌ ಸ್ಕ್ರೀನ್ ಮತ್ತು ಸ್ಮಾರ್ಟ್‌ ಸ್ಪೀಕರ್‌ಗಳಲ್ಲಿ ಬಳಸಲಾಗುತ್ತದೆ. ನಂತರದಲ್ಲಿ ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್‌ಗಳಿಗೆ ದೊರೆಯಲಿದೆ.

ಆಂಡ್ರಾಯ್ಡ್ ಮತ್ತು ಐಓಎಸ್‌ಗಿಂತಲೂ ಹಾರ್ಮನಿ ಓಎಸ್ ವಿಭಿನ್ನವಾಗಿದ್ದು, ಬಳಕೆದಾರರಿಗೆ ವಿಭಿನ್ನ ಅನುಭವ ನೀಡಲಿದೆ. ಅಲ್ಲದೆ ಸರಳ ಕಾರ್ಯಾಚರಣೆ, ವಿವಿಧ ಉಪಕರಣಗಳ ಜತೆ ಸಂಯೋಜಿತ ಕೆಲಸ ಹೀಗೆ ಹಲವು ಅನುಕೂಲಗಳು ಹುವೈನ ಹೊಸ ಹಾರ್ಮನಿ ಓಎಸ್‌ನಲ್ಲಿ ಇರಲಿದೆ.

ಜತೆಗೆ ಆಂಡ್ರಾಯ್ಡ್ ಆಪರೇಟಿಂಗ್ ವ್ಯವಸ್ಥೆಯ ರೀತಿ ಯಾವುದೇ ಸಮಸ್ಯೆಗೆ ಒಳಗಾಗುವುದಿಲ್ಲ. ಗರಿಷ್ಠ ಭದ್ರತೆ ಮತ್ತು ಸುರಕ್ಷತೆ ಇದರ ವಿಶೇಷತೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌