ಆ್ಯಪ್ನಗರ

Chinese App Ban: ಶವೋಮಿ ರೆಡ್ಮಿ ಬಳಕೆದಾರರಿಗೆ ಸಂದೇಶ ನೀಡಿದ ಕಂಪನಿ

ಶವೋಮಿ ರೆಡ್ಮಿ ಗ್ರಾಹಕರ ಯಾವುದೇ ಮಾಹಿತಿ ದೇಶದಿಂದ ಹೊರಹೋಗುವುದಿಲ್ಲ, ಬದಲಾಗಿ ದೇಶದಲ್ಲೇ ಇರಲಿದೆ. ಸರ್ವರ್, ಡಾಟಾ ನಿರ್ವಹಣೆ ಭಾರತದಲ್ಲೇ ಇರುತ್ತದೆ ಎಂದು ಹೇಳಿದೆ.

Gadgets Now 7 Aug 2020, 3:27 pm
ದೇಶದಲ್ಲಿ ಚೀನಾ ಮೂಲದ ಟಿಕ್‌ಟಾಕ್ ಸಹಿತ 100ಕ್ಕೂ ವಿವಿಧ ಆ್ಯಪ್‌ಗಳನ್ನು ನಿಷೇಧಿಸಲಾಗಿದೆ. ಅದರಲ್ಲಿ ಶವೋಮಿ ರೆಡ್ಮಿ ಫೋನ್‌ನಲ್ಲಿ ಮೊದಲೇ ಇನ್‌ಸ್ಟಾಲ್ ಆಗಿ ಬರುತ್ತಿದ್ದ ಆ್ಯಪ್‌ ಕೂಡ ಸೇರಿದೆ. ಅದರ ಬೆನ್ನಲ್ಲೇ ಮುಂದೆ ಶವೋಮಿ ರೆಡ್ಮಿ ಕೂಡ ಬ್ಯಾನ್ ಆಗಬಹುದು ಎಂಬ ಗೊಂದಲ ಸೃಷ್ಟಿಯಾಗಿದ್ದರಿಂದ, ಕಂಪನಿ ಸ್ಪಷ್ಟನೆ ಬಿಡುಗಡೆ ಮಾಡಿದೆ.
Vijaya Karnataka Web Xiaomi
China App Ban


ಶವೋಮಿ ರೆಡ್ಮಿ ಮತ್ತು ಎಂಐ ಫೋನ್‌ಗಳಲ್ಲಿ ಎಂಐ ಬ್ರೌಸರ್ ಡಿಫಾಲ್ಟ್ ಆಗಿ ಇನ್‌ಸ್ಟಾಲ್ ಆಗಿರುತ್ತಿತ್ತು. ಅಲ್ಲದೆ, ಶವೋಮಿ ಫೋನ್‌ನಲ್ಲಿರುವ ಎಂಐಯುಐ ಕ್ಲೀನರ್ ಆ್ಯಪ್‌ ನಿಷೇಧಿತ ಕ್ಲೀನ್ ಮಾಸ್ಟರ್ ಆ್ಯಪ್‌ ಅನ್ನು ಬಳಸುತ್ತಿದೆ ಎನ್ನಲಾಗಿತ್ತು. ಆದರೆ ಈ ಕುರಿತು ಶವೋಮಿ ಕಂಪನಿ ಹೇಳಿಕೆ ಬಿಡುಗಡೆ ಮಾಡಿದೆ.

ಏನು ಹೇಳುತ್ತಿದೆ ಶವೋಮಿ ರೆಡ್ಮಿ?
ಶವೋಮಿ ರೆಡ್ಮಿ ಭಾರತ ಘಟಕದ ಮನು ಕುಮಾರ್ ಜೈನ್ ಈ ಕುರಿತು ಟ್ವೀಟ್ ಮಾಡಿದ್ದು, ಶವೋಮಿ ರೆಡ್ಮಿ ಮತ್ತು ಎಂಐ ಫೋನ್‌ಗಳಲ್ಲಿ, ದೇಶದಲ್ಲಿ ನಿಷೇಧವಾಗಿರುವ ಯಾವುದೇ ಆ್ಯಪ್‌ ದೊರೆಯುವುದಿಲ್ಲ ಎಂದಿದ್ದಾರೆ.

ಜತೆಗೆ ನಿಷೇಧಿತ ಕ್ಲೀನ್ ಮಾಸ್ಟರ್ ಆ್ಯಪ್‌ಗೂ, ಎಂಐಯುಐ ಕ್ಲೀನರ್ ಆ್ಯಪ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಶವೋಮಿ ತಿಳಿಸಿದೆ.

ಶವೋಮಿ ರೆಡ್ಮಿ ಗ್ರಾಹಕರ ಯಾವುದೇ ಮಾಹಿತಿ ದೇಶದಿಂದ ಹೊರಹೋಗುವುದಿಲ್ಲ, ಬದಲಾಗಿ ದೇಶದಲ್ಲೇ ಇರಲಿದೆ. ಸರ್ವರ್, ಡಾಟಾ ನಿರ್ವಹಣೆ ಭಾರತದಲ್ಲೇ ಇರುತ್ತದೆ ಎಂದು ಹೇಳಿದೆ.

Xiaomi Browser Ban: ದೇಶದಲ್ಲಿ ಚೀನಾದ ಶವೋಮಿ ಬ್ರೌಸರ್‌ಗೆ ನಿಷೇಧ

ಹೊಸ ಓಎಸ್ ಎಂಐಯುಐ ಆವೃತ್ತಿ ಶೀಘ್ರ ಬಿಡುಗಡೆಯಾಗಲಿದ್ದು, ನಿಷೇಧಿತ ಆ್ಯಪ್‌ ಇಲ್ಲದೆಯೇ ಹೊಸ ಸಾಫ್ಟ್‌ವೇರ್ ಬಳಕೆಗೆ ದೊರೆಯಲಿದೆ ಎಂದಿದೆ. ಜತೆಗೆ ಸರಕಾರದ ನಿಯಮಗಳಿಗೆ ಬದ್ಧವಾಗಿದ್ದು, ಮುಂಬರುವ ಹೊಸ ಫೋನ್‌ಗಳಲ್ಲಿ ನಿಷೇಧಿತ ಯಾವುದೇ ಆ್ಯಪ್‌ ಪ್ರಿ ಇನ್‌ಸ್ಟಾಲ್ ಆಗಿರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

China App Banned: ಮತ್ತೆ ಚೀನಾದ 14 ಆ್ಯಪ್‌ ನಿಷೇಧ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌