ಆ್ಯಪ್ನಗರ

Redmi Smart LED TV: ಶವೋಮಿ ರೆಡ್ಮಿ ಟಿವಿ

ಚೀನಾ ಮೂಲದ ಶವೋಮಿ ಈಗಾಗಲೇ ಎಂಐ ಬ್ರ್ಯಾಂಡ್ ಅಡಿ ಸ್ಮಾರ್ಟ್ ಟಿವಿ ಪರಿಚಯಿಸಿದೆ. ಮುಂದೆ ರೆಡ್ಮಿ ಟಿವಿ ಹೊರತರುವ ಯೋಜನೆಯಲ್ಲಿದೆ.

Gadgets Now 19 Aug 2019, 5:22 pm
ಶವೋಮಿ ಎಂಐ ಸರಣಿಯ ಎಲ್‌ಇಡಿ ಮತ್ತು ಸ್ಮಾರ್ಟ್‌ ಟಿವಿ ಈಗಾಗಲೇ ಜನಪ್ರಿಯತೆ ಗಳಿಸಿದೆ. ಮುಂದೆ ಶವೋಮಿ ರೆಡ್ಮಿ ಬ್ರ್ಯಾಂಡ್‌ನಡಿ ಸ್ಮಾರ್ಟ್ ಎಲ್‌ಇಡಿ ಟಿವಿ ಹೊರತರಲು ಮುಂದಾಗಿದೆ.
Vijaya Karnataka Web TV2


ಆಗಸ್ಟ್ 29ಕ್ಕೆ ಶವೋಮಿ ಚೀನಾದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಹೊಸ ರೆಡ್ಮಿ ನೋಟ್ 8 ಬಿಡುಗಡೆಯಾಗುತ್ತಿದೆ. ಇದೇ ಸಂದರ್ಭದಲ್ಲಿ ನೂತನ 70 ಇಂಚಿನ ಸ್ಕ್ರೀನ್ ಗಾತ್ರದ ರೆಡ್ಮಿ ಸ್ಮಾರ್ಟ್ ಎಲ್ಇಡಿ ಟಿವಿ ಬಿಡುಗಡೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಶವೋಮಿ, ಚೀನಾದ ಜಾಲತಾಣ ವೆಬೋ ಪೋಸ್ಟ್‌ನಲ್ಲಿ ಹೊಸ ಟಿವಿ ಬಿಡುಗಡೆ ಮಾಡುತ್ತಿರುವ ಕುರಿತು ಟೀಸರ್ ಚಿತ್ರವನ್ನು ಪೋಸ್ಟ್ ಮಾಡಿದೆ.

ಚೀನಾದಲ್ಲಿ ಶವೋಮಿ ಟಿವಿ 3C ಸರ್ಟಿಫಿಕೇಟ್ ಅನ್ನು ಪೂರೈಸಿದ್ದು, ಆ ಸಂದರ್ಭದಲ್ಲಿ L70M5 ಎಂಬ ಮಾದರಿ ಸಂಖ್ಯೆಯನ್ನು ಹೊಂದಿತ್ತು.
ಶವೋಮಿ ರೆಡ್ಮಿ ಟಿವಿ ಅಂದಾಜು 52,000 ರೂ. ದರ ಹೊಂದಿರಲಿದೆ ಎನ್ನಲಾಗಿದೆ.

ಎಂಐ ಟಿವಿ ಬ್ರ್ಯಾಂಡ್‌ನಂತೆಯೇ ರೆಡ್ಮಿ ಟಿವಿಯನ್ನು ಕೂಡ ಶವೋಮಿ ಬ್ರ್ಯಾಂಡ್ ಫೇಮಸ್ ಮಾಡಲು ಮುಂದಾಗಿದ್ದು, ಹೊಸ ಮಾದರಿಯ ಸ್ಮಾರ್ಟ್ ಎಲ್‌ಇಡಿ ಟಿವಿ ಹೊರತರುತ್ತಿದೆ ಎಂಬ ಮಾತು ಕೇಳಿಬಂದಿದೆ. ಚೀನಾದಲ್ಲಿ ಮೊದಲು ಬಿಡುಗಡೆಯಾದ ಬಳಿಕ ಭಾರತದಲ್ಲಿ ಲಭ್ಯವಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌