ಆ್ಯಪ್ನಗರ

Mi 9X: ಶಿಯೋಮಿಯಿಂದ ಮತ್ತೊಂದು ಸ್ಮಾರ್ಟ್‌ಫೋನ್

ಶಿಯೋಮಿ ಎಂಐ 9X, ಹಿಂಬದಿಯಲ್ಲಿ ತ್ರಿವಳಿ ಕ್ಯಾಮರಾ ಹೊಂದಿರಲಿದ್ದು, 48 ಮೆಗಾಪಿಕ್ಸೆಲ್, 13 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಮತ್ತು 8 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಇರಲಿದೆ.

TOI-Online 28 Mar 2019, 3:42 pm
ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಿಕ ಸಂಸ್ಥೆ ಶಿಯೋಮಿ ಎಂಐ ಸರಣಿಯಲ್ಲಿ ಶಿಯೋಮಿ ಎಂಐ 9X ಪರಿಚಯಿಸಲಿದ್ದು, ನೂತನ ಸ್ಮಾರ್ಟ್‌ಫೋನ್‌ನ ತಾಂತ್ರಿಕ ವೈಶಿಷ್ಟ್ಯಗಳು ಬಿಡುಗಡೆಗೂ ಮೊದಲೇ ಆನ್‌ಲೈನ್‌ನಲ್ಲಿ ಲೀಕ್ ಆಗಿವೆ.
Vijaya Karnataka Web Mi 9


Xiaomi Mi 9X ಕ್ವಾಲ್ಕಂ ಸ್ನ್ಯಾಪ್‌ಡ್ರಾಗ್ಯನ್ 675 ಪ್ರೊಸೆಸರ್ ಮತ್ತು 6GB ರ‍್ಯಾಮ್ ಹೊಂದಿರಲಿದೆ. ಸೋರಿಕೆಯಾಗಿರುವ ಮಾಹಿತಿ ಪ್ರಕಾರ, ಶಿಯೋಮಿ ಎಂಐ 9X, ಹಿಂಬದಿಯಲ್ಲಿ ತ್ರಿವಳಿ ಕ್ಯಾಮರಾ ಹೊಂದಿರಲಿದ್ದು, 48 ಮೆಗಾಪಿಕ್ಸೆಲ್, 13 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಮತ್ತು 8 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಇರಲಿದೆ.

6.4 ಇಂಚಿನ ಫುಲ್‌ ಎಚ್‌ಡಿ ಅಮೋಲಿಡ್ ಡಿಸ್‌ಪ್ಲೇ ಮತ್ತು ವಾಟರ್‌ಡ್ರಾಪ್ ನಾಚ್‌ ಇದರ ವೈಶಿಷ್ಟವಾಗಿದೆ.

ಮುಂಭಾಗದಲ್ಲಿ 32 ಮೆಗಾಪಿಕ್ಸೆಲ್ ಸೆಲ್ಫಿ, ಆ್ಯಂಡ್ರಾಯ್ಡ್‌ 9 ಪೈ ಆಪರೇಟಿಂಗ್ ಸಾಫ್ಟ್‌ವೇರ್ ಹೊಂದಿದೆ. ಉಳಿದಂತೆ 3,300 ಎಂಎಎಚ್ ಬ್ಯಾಟರಿ ಇದ್ದು, 18W ಫಾಸ್ಟ್ ಚಾರ್ಜಿಂಗ್ ಬೆಂಬಲವಿದೆ.

ಶಿಯೋಮಿ ಎಂಐ9 ಎಕ್ಸ್ ಏಪ್ರಿಲ್‌ನಲ್ಲಿ ದೇಶದ ಸ್ಮಾರ್ಟ್‌ಫೋನ್‌ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಯಿದ್ದು, ಅಂದಾಜು 17,500 ರೂ. ಬೆಲೆ ಹೊಂದಿರಲಿದೆ ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌