ಆ್ಯಪ್ನಗರ

OnePlus 5G smartphone: ಒನ್‌ಪ್ಲಸ್‌ನಿಂದ ಹೊಸ ಫೋನ್‌

ಗೌಪ್ಯತೆ ಕಾಯ್ದುಕೊಳ್ಳುವ ಸಲುವಾಗಿ ವಿನ್ಯಾಸವನ್ನು ಮುಚ್ಚಿ ನೂತನ ಸ್ಮಾರ್ಟ್‌ಫೋನ್ ಪ್ರದರ್ಶಿಸಲಾಗಿದೆ ಎಂದು ಒನ್‌ಪ್ಲಸ್ ಹೇಳಿದೆ.

Vijaya Karnataka Web 25 Feb 2019, 6:18 pm
ಮೊಬೈಲ್‌ ವರ್ಲ್ಡ್ ಕಾಂಗ್ರೆಸ್‌ನಲ್ಲಿ ಚೀನಾ ಮೂಲದ ಒನ್‌ಪ್ಲಸ್‌ ನೂತನ 5G ಸ್ಮಾರ್ಟ್‌ಫೋನ್‌ ಪರಿಚಯಿಸಿದೆ.
Vijaya Karnataka Web 1551093669-OnePlus_5G_Prototype


ಒನ್‌ಪ್ಲಸ್‌ನ ನೂತನ ಸ್ಮಾರ್ಟ್‌ಫೋನ್ ಪರಿಚಯಿಸುವ ಸಂದರ್ಭ ಅದರ ಸುತ್ತಲೂ ಕವರ್‌ ಅಳವಡಿಸಿ, ವಿನ್ಯಾಸ ಜನರಿಗೆ ಗೊತ್ತಾಗದಂತೆ ಎಚ್ಚರಿಕೆ ವಹಿಸಿದೆ.

ಇದೇ ಸಂದರ್ಭದಲ್ಲಿ ಒನ್‌ಪ್ಲಸ್‌ ಕ್ವಾಲ್ಕಂ 5G ಡೆಮೋ ಕೂಡ ನೀಡಿದ್ದು, ವೇಗದ ಗೇಮಿಂಗ್ ಜತೆಗೆ ನೆಟ್‌ವರ್ಕ್‌ ಅನುಭವ ಒದಗಿಸಿದೆ. ನೂತನ ಸ್ಮಾರ್ಟ್‌ಫೋನ್ ಒನ್‌ಪ್ಲಸ್ 7 ಆಗಿರಬಹುದು ಎಂದು ಅಂದಾಜಿಸಿದ್ದು, ಆದರೆ ಒನ್‌ಪ್ಲಸ್ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.

ಗೌಪ್ಯತೆ ಕಾಯ್ದುಕೊಳ್ಳುವ ಸಲುವಾಗಿ ವಿನ್ಯಾಸವನ್ನು ಮುಚ್ಚಿ ನೂತನ ಸ್ಮಾರ್ಟ್‌ಫೋನ್ ಪ್ರದರ್ಶಿಸಲಾಗಿದೆ ಎಂದು ಒನ್‌ಪ್ಲಸ್ ಹೇಳಿದೆ.
ಕ್ವಾಲ್ಕಂ ಟೆಕ್ನಾಲಜೀಸ್ ಬೂತ್‌ನಲ್ಲಿ ಒನ್‌ಪ್ಲಸ್‌ ನೂತನ ಸ್ಮಾರ್ಟ್‌ಫೋನ್ ಮತ್ತು ಅದರ ಗೇಮಿಂಗ್ ಡೆಮೋ ಒದಗಿಸಿ, ಆಸಕ್ತರಿಗೆ ಮತ್ತಷ್ಟು ಸುಳಿವು ನೀಡಿದೆ.

Snapdragon 8 ಸರಣಿಯ ಪ್ರೊಸೆಸರ್‌ಗಳನ್ನು ಬಳಸುತ್ತಿರುವ ಒನ್‌ಪ್ಲಸ್, ಈ ವರ್ಷ ಹೊರತರಲಿರುವ ಒನ್‌ಪ್ಲಸ್‌ 7 ಸ್ಮಾರ್ಟ್‌ಫೋನ್‌ನಲ್ಲಿ ವೇಗದ ನೆಟ್‌ವರ್ಕ್‌, ಗೇಮಿಂಗ್ ಮತ್ತು ಕಾರ್ಯಾಚರಣ ವ್ಯವಸ್ಥೆ ಹೊಂದಿರುವ ಕುರಿತು ಸ್ಪಷ್ಟಪಡಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌