ಆ್ಯಪ್ನಗರ

BrainPOP: ಮಕ್ಕಳಿಗೆ ಆ್ಯಪ್‌ ಗುರು

​​ಬ್ರೈನ್‌ಪಾಪ್‌ ಎಂಬುದು ಶೈಕ್ಷಣಿಕ ಜಾಲ ತಾಣ. ಇದರಲ್ಲಿ ಕೆಜಿಯಿಂದ ಪಿಯುಸಿ ತನಕ ಅಂದರೆ 6-17ವರ್ಷದವರಿಗೆ ಒಂದು ಸಾವಿರಕ್ಕೂ ಹೆಚ್ಚು ಆನಿಮೇಟೆಡ್‌ ಚಲನಚಿತ್ರಗಳಿವೆ.

Agencies 28 May 2019, 2:00 pm
ಕಲಿಕೆಗೆ ಗುರುವಿರಬೇಕು ಎಂಬುದು ನಿಜ. ಆದರೆ ಮನುಷ್ಯರೂಪಿ ಗುರುವಿನ ಪಾತ್ರ ದಿನೇದಿನೆ ಕುಗ್ಗುತ್ತಿದೆ. ಅವರ ಸ್ಥಾನವನ್ನು ತಂತ್ರಜ್ಞಾನ ಆಕ್ರಮಿಸುತ್ತಿದೆ.
Vijaya Karnataka Web BrainPop


ಬ್ರೈನ್‌ಪಾಪ್‌ ಎಂಬುದು ಶೈಕ್ಷಣಿಕ ಜಾಲ ತಾಣ. ಇದರಲ್ಲಿ ಕೆಜಿಯಿಂದ ಪಿಯುಸಿ ತನಕ ಅಂದರೆ 6-17ವರ್ಷದವರಿಗೆ ಒಂದು ಸಾವಿರಕ್ಕೂ ಹೆಚ್ಚು ಆನಿಮೇಟೆಡ್‌ ಚಲನಚಿತ್ರಗಳಿವೆ. ಜೊತೆಗೆ ರಸಪ್ರಶ್ನೆ ಹಾಗೂ ಬುದ್ಧಿ ಬೆಳಗುವ ಚಟುವಟಿಕೆಗಳಿವೆ.

ಈ ವೆಬ್‌ ಮತ್ತು ಆ್ಯಪ್‌ಗಳನ್ನು ಅಮೆರಿಕದ ಶೇ. 20ರಷ್ಟು ಶಾಲೆಗಳು ಬಳಸುತ್ತವೆ. ಇದಲ್ಲದೆ ಅನೇಕ ಕುಟುಂಬಗಳು ಮತ್ತು ಮಕ್ಕಳು ಪ್ರತಿನಿತ್ಯ ನೋಡಿ ಕಲಿಯುತ್ತಿದ್ದಾರೆ. ಮೆಕ್ಸಿಕೊ, ಫ್ರಾನ್ಸ್‌, ಸ್ಪೇನ್‌, ಇಸ್ರೇಲ್‌ ಹಾಗೂ ಇತರ ದೇಶಗಳಲ್ಲೂ ಬ್ರೇನ್‌ ಪಾಪ್‌ ಪ್ರಸಿದ್ಧವಾಗಿದೆ. ಇದಕ್ಕೆ ದುಡ್ಡುಕೊಡಬೇಕು.

ಆದರೆ ಕೆಲವೊಂದು ಚಲನಚಿತ್ರಗಳೂ ಸೇರಿದಂತೆ ಹತ್ತು ಹಲವು ಶೈಕ್ಷ ಣಿಕ ಪರಿಕರಗಳು, ಲೆಸನ್‌ ಪ್ಲ್ಯಾನ್‌ಗಳು ಉಚಿತವಾಗಿ ಸಿಗುತ್ತವೆ. ಗೇಮ್‌ ಅಪ್‌ ಎನ್ನುವ ಶೈಕ್ಷ ಣಿಕ ಆಟಗಳ ಮಜಾ ವಿಶಿಷ್ಟವಾಗಿದೆ. ಈಗ ಶಿಕ್ಷ ಣವೆಂದರೆ ಇಡೀ ಕುಟುಂಬ ಇಂತಹ ಶೈಕ್ಷ ಣಿಕ ಚಟುವಟಿಕೆಯಲ್ಲಿ ಪಾಳ್ಗೊಳ್ಳುವುದೇ ಆಗಿರುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌