ಆ್ಯಪ್ನಗರ

Personal Computer: ಪಿಸಿ ಮಾರುಕಟ್ಟೆ ಶೇ. 15.8 ಬೆಳವಣಿಗೆ

ಸ್ಮಾರ್ಟ್‌ಫೋನ್ ಭರಾಟೆಯಲ್ಲಿಯೂ ಕಂಪ್ಯೂಟರ್‌ಗಳ ಕುರಿತು ಜನರಿಗೆ ಒಲವು ಕಡಿಮೆಯಾಗಿಲ್ಲ. ದೇಶದ ಕಂಪ್ಯೂಟರ್ ಮಾರಾಟದಲ್ಲಿ ಗಮನಾರ್ಹ ಏರಿಕೆ ದಾಖಲಾಗಿದೆ.

THE ECONOMIC TIMES 19 Nov 2019, 12:04 pm
ಪರ್ಸನಲ್‌ ಕಂಪ್ಯೂಟರ್‌ಗಳ(ಪಿಸಿ) ಮಾರುಕಟ್ಟೆ ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿಶೇ. 15.8ರ ಬೆಳವಣಿಗೆ ಕಂಡಿದೆ. ತಮಿಳುನಾಡು ಸರಕಾರದ ಉಚಿತ ಲ್ಯಾಪ್‌ಟಾಪ್‌ಗಳ ವಿತರಣೆ ಕಾರ್ಯಕ್ರಮ, ಕಾರ್ಪೋರೇಟ್‌ ಕಂಪನಿಗಳು ವಿಂಡೋಸ್‌ 10 ಅಪ್‌ಗ್ರೇಡ್‌ ಪ್ರಕ್ರಿಯೆ ಮತ್ತಿತರ ಅಂಶಗಳು ಮಾರುಕಟ್ಟೆ ಬೆಳವಣಿಗೆಗೆ ಪ್ರಭಾವ ಬೀರಿವೆ.
Vijaya Karnataka Web Computer
Personal Computer


ಜಗತ್ತಿನಲ್ಲಿನ ಪರ್ಸನಲ್‌ ಕಂಪ್ಯೂಟರ್‌ ಸಾಧನಗಳ ಬೆಳವಣಿಗೆ ಬಗ್ಗೆ ಮಾಹಿತಿ ನೀಡುವ ಇಂಟರ್‌ನ್ಯಾಷನಲ್‌ ಡೇಟಾ ಕಾರ್ಪೋರೇಷನ್‌(ಐಡಿಸಿ) ಪ್ರಕಾರ, ಭಾರತದ ಪಿಸಿ ಮಾರುಕಟ್ಟೆ ಉತ್ತಮವಾಗಿದೆ. ಡೆಸ್ಕ್‌ಟಾಪ್‌ಗಳು, ನೋಟ್‌ಬುಕ್‌ಗಳ ಒಳಗೊಂಡ 31 ಲಕ್ಷ ಘಟಕಗಳು ಮಾರಾಟವಾಗಿವೆ. 2020ಕ್ಕೆ ವಿಂಡೋಸ್‌ 7 ಅಂತ್ಯವಾಗುತ್ತಿದ್ದು, ಅಪ್‌ಗ್ರೇಡ್‌ಗಳಿಗೆ ಕಂಪನಿಗಳು ಗಮನ ಹರಿಸಿವೆ.

Phone Lost: ಕಳೆದುಹೋದ ಫೋನ್ ಗೂಗಲ್ ಮ್ಯಾಪ್‌ನಲ್ಲಿ ಹುಡುಕಿ!

ವಿಂಡೋಸ್‌ 10ಗಳಿಗೆ ಬ್ಯಾಂಕಿಂಗ್‌ ವಲಯದಲ್ಲಿ ಬೇಡಿಕೆ ಕಂಡು ಬಂದಿದೆ. ಡೆಸ್ಕ್‌ಟಾಪ್‌ ವಿಭಾಗದ ಮಾರುಕಟ್ಟೆಯಲ್ಲಿ ಶೇ. 10.6ರಷ್ಟು ಬೆಳವಣಿಗೆ ಕಂಡು ಬಂದಿದೆ. ನೋಟ್‌ ಬುಕ್‌ಗಳ ಮಾರುಕಟ್ಟೆ ಬೆಳವಣಿಗೆ ಶೇ. 18ರಷ್ಟಿದೆ.

ಪಿಸಿ ಮಾರುಕಟ್ಟೆಯಲ್ಲಿ ಲೆನೋವೋ ತನ್ನ ನಾಯಕತ್ವವನ್ನು ಕಾಯ್ದುಗೊಂಡಿದ್ದು, ಶೇ. 28.5ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ.

TikTok: ಈಗ 150 ಕೋಟಿ ಡೌನ್‌ಲೋಡ್!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌