ಆ್ಯಪ್ನಗರ

PhonePe: 700 ಮಿಲಿಯನ್ ಡಾಲರ್ ಹೂಡಿಕೆ ಪಡೆದುಕೊಂಡ ಫೋನ್‌ಪೆ!

ದೇಶದಲ್ಲಿ ಡಿಜಿಟಲ್ ಇಂಡಿಯಾ ಮತ್ತು ನಗದು ರಹಿತ ವಹಿವಾಟಿಗೆ ಕೇಂದ್ರ ಸರಕಾರದ ಉತ್ತೇಜನ, ಆರ್‌ಬಿಐ ನೀತಿಗಳು ಪೂರಕವಾಗಿದೆ. ಅಲ್ಲದೆ, ಕೋವಿಡ್ ಲಾಕ್‌ಡೌನ್ ಬಳಿಕ ಕ್ಯಾಶ್‌ಲೆಸ್ ವಹಿವಾಟು ಕೂಡ ಏರಿಕೆಯಾಗಿದೆ.

Times Now 4 Dec 2020, 11:09 am
ದೇಶದ ಪ್ರಮುಖ ಇ ಕಾಮರ್ಸ್ ಸಂಸ್ಥೆ, ವಾಲ್‌ಮಾರ್ಟ್ ಹೂಡಿಕೆ ಮಾಡಿರುವ ಫ್ಲಿಪ್‌ಕಾರ್ಟ್ ಒಡೆತನದಲ್ಲಿದ್ದ ಫೋನ್‌ಪೆ ಈಗ ಪ್ರತ್ಯೇಕಗೊಂಡಿದೆ. ಅಷ್ಟೇ ಅಲ್ಲದೆ, 700 ಮಿಲಿಯನ್ ಡಾಲರ್ ಹೂಡಿಕೆ ಕೂಡ ಪಡೆದುಕೊಂಡಿದೆ. ಡಿಜಿಟಲ್ ಪೇಮೆಂಟ್ ಕ್ಷೇತ್ರದಲ್ಲಿನ ಅಪಾರ ಅವಕಾಶ ಮತ್ತು ಸ್ವತಂತ್ರ ಸಂಸ್ಥೆಯಾಗಿ ಬೆಳೆಯಲು ಅವಕಾಶ ಕಲ್ಪಿಸುವ ಸಲುವಾಗಿ ಫೋನ್‌ಪೆ ಅನ್ನು ಫ್ಲಿಪ್‌ಕಾರ್ಟ್‌ನಿಂದ ಪ್ರತ್ಯೇಕಗೊಳಿಸಲಾಗುತ್ತದೆ.
Vijaya Karnataka Web PhonePe
PhonePe


ಪ್ರತ್ಯೇಕ ಸಂಸ್ಥೆ
ಫೋನ್‌ಪೆ ಅನ್ನು ಖರೀದಿಸಿದ್ದ ಫ್ಲಿಪ್‌ಕಾರ್ಟ್, ಬಳಿಕ ಮತ್ತಷ್ಟು ಹೂಡಿಕೆ ಮಾಡಿ ಅದನ್ನು ವ್ಯಾಪಕವಾಗಿ ಜನಪ್ರಿಯಗೊಳಿಸಿತ್ತು. ಮುಂದೆ ಇನ್ನಷ್ಟು ಹೂಡಿಕೆ ಅವಕಾಶ ಮತ್ತು ಉದ್ಯಮ ವಿಸ್ತರಣೆ ಉದ್ದೇಶದಿಂದ ಫ್ಲಿಪ್‌ಕಾರ್ಟ್ ಫೋನ್‌ಪೆ ಅನ್ನು ಪ್ರತ್ಯೇಕವಾಗಿಸುತ್ತಿದೆ.

700 ಮಿಲಿಯನ್ ಡಾಲರ್ ಹೂಡಿಕೆ
ದೇಶದ ಜನಪ್ರಿಯ ಯುಪಿಐ ಡಿಜಿಟಲ್ ಪೇಮೆಂಟ್ ಅಪ್ಲಿಕೇಶನ್ ಫೋನ್‌ಪೆ, ಪ್ರಸ್ತುತ 700 ಮಿಲಿಯನ್ ಡಾಲರ್ ಹೂಡಿಕೆ ಪಡೆದುಕೊಂಡಿದೆ. ಇದರಿಂದಾಗಿ ಇನ್ನಷ್ಟು ಬಲಿಷ್ಠವಾಗಿ ಮಾರುಕಟ್ಟೆ ವಿಸ್ತರಿಸಲು ಸಾಧ್ಯವಾಗಲಿದೆ. ಫ್ಲಿಪ್‌ಕಾರ್ಟ್‌ನಿಂದ ಪ್ರತ್ಯೇಕಗೊಂಡರೂ, ಫೋನ್‌ಪೆನಲ್ಲಿ ಗರಿಷ್ಠ ಷೇರು ಹೊಂದಿರುವುದು ಫ್ಲಿಪ್‌ಕಾರ್ಟ್ ಆಗಿರುತ್ತದೆ.

Google Pay: ಗೂಗಲ್ ಪೇ ಪಿನ್ ಬದಲಾವಣೆ ಹೇಗೆ ಗೊತ್ತಾ?

ಡಿಜಿಟಲ್ ಪೇಮೆಂಟ್ ಹೆಚ್ಚಳ
ದೇಶದಲ್ಲಿ ಡಿಜಿಟಲ್ ಇಂಡಿಯಾ ಮತ್ತು ನಗದು ರಹಿತ ವಹಿವಾಟಿಗೆ ಕೇಂದ್ರ ಸರಕಾರದ ಉತ್ತೇಜನ, ಆರ್‌ಬಿಐ ನೀತಿಗಳು ಪೂರಕವಾಗಿದೆ. ಅಲ್ಲದೆ, ಕೋವಿಡ್ ಲಾಕ್‌ಡೌನ್ ಬಳಿಕ ಕ್ಯಾಶ್‌ಲೆಸ್ ವಹಿವಾಟು ಕೂಡ ಏರಿಕೆಯಾಗಿದೆ. ಪ್ರಸ್ತುತ ಫೋನ್‌ಪೆ, ಗೂಗಲ್ ಪೇ, ಪೇಟಿಎಂ ಸಹಿತ ಇತರ ಯುಪಿಐ ಡಿಜಿಟಲ್ ಪೇಮೆಂಟ್ ಸೇವೆಗಳ ಜತೆ ಸ್ಪರ್ಧಿಸುತ್ತಿದೆ. 10 ಕೋಟಿಗೂ ಅಧಿಕ ಆಕ್ಟಿವ್ ಬಳಕೆದಾರರನ್ನು ಫೋನ್‌ಪೆ ಹೊಂದಿದೆ.

Power Bill: ಆನ್‌ಲೈನಿನಲ್ಲಿ ವಿದ್ಯುತ್ ಬಿಲ್ ಪಾವತಿ ಹೇಗೆ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌