ಆ್ಯಪ್ನಗರ

Paytm Payment Gateway: ವರ್ತಕರಿಗಾಗಿ ಬಲ್ಕ್ ಪೇಮೆಂಟ್ಸ್ ಸೌಲಭ್ಯ

ಬಲ್ಕ್ ಪೇಮೆಂಟ್ಸ್ ಸಹಾಯದಿಂದ ಸಂಸ್ಥೆಗಳು ಪಾವತಿಯನ್ನು ಸುಲಭವಾಗಿ ಮಾಡಬಹುದು ಜತೆಗೆ ಅಟೋಮೇಟ್ ಮತ್ತು ಸೆಂಟ್ರಲೈಜ್ ಕೂಡ ಮಾಡುವ ಅನುಕೂಲವನ್ನು ಪೇಟಿಎಂ ಕಲ್ಪಿಸಿದೆ.

Vijaya Karnataka Web 7 Aug 2019, 12:53 pm
ದೇಶಿಯ ವರ್ತಕರು ಮತ್ತು ಉದ್ಯಮಗಳ ಅನುಕೂಲಕ್ಕಾಗಿ ಪೇಟಿಎಂ ಈಗಾಗಲೇ ಹಲವು ಆಯ್ಕೆಗಳನ್ನು ಪರಿಚಯಿಸಿದ್ದು, ಇದರಿಂದ ಬಳಕೆದಾರರಿಗೆ ಪ್ರಯೋಜನವಾಗಲಿದೆ.
Vijaya Karnataka Web paytm


ವರ್ತಕರ ಅನುಕೂಲಕ್ಕಾಗಿ 'ಬಲ್ಕ್ ಪೇಮೆಂಟ್ಸ್' ಸೌಲಭ್ಯಕ್ಕೆ ಪೇಟಿಎಂ ಪೇಮೆಂಟ್ ಗೇಟ್‌ವೇ ಚಾಲನೆ ನೀಡಿದೆ. ಇದರ ಪರಿಣಾಮ ಸಣ್ಣ ಹಾಗು ದೊಡ್ಡ ಉದ್ಯಮಗಳು ವಿವಿಧ ಬ್ಯಾಂಕ್‍ಗಳ ಬಹು ಖಾತೆಗಳಿಗೆ ಒಂದೆ ಸಲಕ್ಕೆ ತಕ್ಷಣವೇ ಹಣ ವರ್ಗವಣೆ ಮಾಡಬಹುದು.

ಇದನ್ನು ಪರಿಚಯಿಸುವುದರ ಮೂಲಕ ಬಿ2ಬಿ ಅಥವಾ ಬಿ2ಸಿ ಕಂಪನಿಗಳ ಪಾವತಿಯನ್ನು ಡಿಜಿಟೈಸ್ ಮಾಡುವುದರ ಜತೆಗೆ ಪಾವತಿ ಪ್ರಕ್ರಿಯೆನ್ನು ಸರಳ ಮಾಡುವ ಉದ್ದೇಶ ಹೊಂದಿದೆ. ಸಂಸ್ಥೆಗಳು ತಮ್ಮ ವೆಂಡರ್ಸ್‍ಗಳಿಗೆ, ನೌಕರರಿಗೆ, ಗ್ರಾಹಕರಿಗೆ ಮತ್ತು ಪಾಲುದಾರರಿಗೆ ಬಲ್ಕ್ ಪೇಮೆಂಟ್ಸ್ ಮಾಡುವುದು ಇನ್ನಷ್ಟು ಸರಳವಾಗಿದೆ.

ವಿವಿಧ ವ್ಯಾಪಾರ ಮತ್ತು ಅವರ ಅಗತ್ಯಗಳನ್ನು ಗಣನೆಗೆ ತೆಗೆದುಕೊಂಡು ಈ ಸುರಕ್ಷಿತ ಪರಿಹಾರವನ್ನು ಅಭಿವೃದ್ಧಿಪಡಿಸಲಾಗಿದೆ. ಇದನ್ನು ಬಹಳ ಸುಲಭವಾಗಿ ಬಳಸಬಹುದಾಗಿದೆ ಮತ್ತು ವರ್ತಕರ ಪ್ರಸಕ್ತ ವ್ಯವಸ್ಥೆ ಜತೆ ಇದನ್ನು ಇಂಟಿಗ್ರೆಟ್ ಮಾಡಿಕೊಳ್ಳಬಹುದಾಗಿದೆ. ಬ್ಯಾಂಕ್ ಖಾತೆ, ಯುಪಿಐ ಮತ್ತು ವ್ಯಾಲೆಟ್ ಯಾವುದಾದರು ಆಯ್ಕೆ ಮಾಡಿ ಹಣ ವರ್ಗವಣೆ ಮಾಡಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌