ಆ್ಯಪ್ನಗರ

Prime Day 2019: ಮತ್ತೆ ಬರುತ್ತಿದೆ ಅಮೆಜಾನ್ ವಿಶೇಷ ಸೇಲ್

ಅಮೆಜಾನ್ ಪ್ರೈಮ್ ವಿಶೇಷ ಸೇಲ್ ನಡೆಯುತ್ತಿದ್ದು, ಜುಲೈ 15 ಮತ್ತು 16ರಂದು 48 ಗಂಟೆಗಳ ಪ್ರೈಮ್ ಆಫರ್ ಸೇಲ್ ಇರಲಿದೆ.

Vijaya Karnataka Web 27 Jun 2019, 12:14 pm
ಇ ಕಾಮರ್ಸ್ ದೈತ್ಯ ಕಂಪನಿ ಅಮೆಜಾನ್ ಈ ವರ್ಷವೂ ಪ್ರೈಮ್ ಡೇ ಸೇಲ್ ಅನ್ನು ಜಾಗತಿಕವಾಗಿ ಹಮ್ಮಿಕೊಳ್ಳುತ್ತಿದೆ.
Vijaya Karnataka Web amazon


ಭಾರತದಲ್ಲೂ ಅಮೆಜಾನ್ ಪ್ರೈಮ್ ವಿಶೇಷ ಸೇಲ್ ನಡೆಯುತ್ತಿದ್ದು, ಜುಲೈ 15 ಮತ್ತು 16ರಂದು 48 ಗಂಟೆಗಳ ಪ್ರೈಮ್ ಆಫರ್ ಸೇಲ್ ಇರಲಿದೆ.

ಈ ಸಂದರ್ಭದಲ್ಲಿ ಅಮೆಜಾನ್, ದೊಡ್ಡ ಡಿಸ್ಕೌಂಟ್, ಹೊಸ ಪ್ರೈಮ್ ವಿಡಿಯೋ ಮತ್ತು ಮ್ಯೂಸಿಕ್ ರಿಲೀಸ್, ಮತ್ತು ಇತರ ಹತ್ತು ಹಲವು ಹೊಸ ಉತ್ಪನ್ನಗಳ ಬಿಡುಗಡೆ ಮಾಡಲಿದೆ.

ಭಾರತದಲ್ಲಿ ಇದು ಮೂರನೇ ಪ್ರೈಮ್ ಸೇಲ್ ಆಗಿರಲಿದ್ದು, ಜಾಗತಿಕವಾಗಿ ಐದನೆಯದ್ದಾಗಿದೆ.

ಪ್ರೈಮ್ ಡೇ ಅವಧಿಯಲ್ಲಿ, ಹೊಸ ಅಮೆಜಾನ್ ಎಕ್ಸ್‌ಕ್ಲೂಸಿವ್ ಉತ್ಪನ್ನ ಪರಿಚಯದ ಜತೆಗೆ, ಎಲೆಕ್ಟ್ರಾನಿಕ್ಸ್, ಸ್ಮಾರ್ಟ್‌ಫೋನ್ ಮೇಲೆ ಈ ಹಿಂದೆಂದಿಗಿಂತಲೂ ಹೆಚ್ಚಿನ ಆಫರ್ ನೀಡುತ್ತಿರುವುದಾಗಿ ತಿಳಿಸಿದೆ. ವಿಶೇಷ ಕೊಡುಗೆಗಳು ಅಮೆಜಾನ್ ಪ್ರೈಮ್ ಸದಸ್ಯರಿಗೆ ಮಾತ್ರ ಎನ್ನುವುದು ವಿಶೇಷ. ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್‌ ಕಾರ್ಡ್ ಹೊಂದಿರುವ ಗ್ರಾಹಕರಿಗೆ ಅಧಿಕ ಪ್ರಯೋಜನ ಲಭ್ಯವಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌