ಆ್ಯಪ್ನಗರ

Flipkart: ಎಕ್ಸಿಸ್ ಬ್ಯಾಂಕ್‍ ಕೋ-ಬ್ರ್ಯಾಂಡೆಡ್ ಕ್ರೆಡಿಟ್ ಕಾರ್ಡ್ ಬಿಡುಗಡೆ

​ಫ್ಲಿಪ್‍ಕಾರ್ಟ್, ಎಕ್ಸಿಸ್ ಬ್ಯಾಂಕ್‍ನಿಂದ ಮಾಸ್ಟರ್ ಕಾರ್ಡ್ ಸಹಯೋಗದಲ್ಲಿ ಕೋ-ಬ್ರ್ಯಾಂಡೆಡ್ ಕ್ರೆಡಿಟ್ ಕಾರ್ಡ್ ಬಿಡುಗಡೆ ಮಾಡಿದ್ದು, ಗ್ರಾಹಕರಿಗೆ ಈ ಕಾರ್ಡ್ ಮೂಲಕ ಹಲವಾರು ಆಫರ್ ದೊರೆಯಲಿದೆ.

Vijaya Karnataka Web 11 Jul 2019, 4:41 pm
ಹೆಸರಾಂತ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಫ್ಲಿಪ್‍ಕಾರ್ಟ್ ಮತ್ತು ಎಕ್ಸಿಸ್ ಬ್ಯಾಂಕ್ ಸಹಭಾಗಿತ್ವದಲ್ಲಿ ಕೋ-ಬ್ರ್ಯಾಂಡೆಡ್ ಕ್ರೆಡಿಟ್ ಕಾರ್ಡ್ ಪರಿಚಯಿಸಿವೆ. ಇದಕ್ಕೆ ಮಾಸ್ಟರ್ ಕಾರ್ಡ್ ಸಹಯೋಗ ನೀಡುತ್ತಿದೆ. ಈ ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ ಹಲವು ಪ್ರಯೋಜನ ಮತ್ತು ಅನಿಯಮಿತ ಕ್ಯಾಶ್‍ಬ್ಯಾಕ್ ಆಫರ್‌ ನೀಡಲಿದೆ. ಗ್ರಾಹಕರು ಈ ಕಾರ್ಡ್ ಮೂಲಕ ಆನ್‍ಲೈನ್ ಮತ್ತು ಆಫ್‌ಲೈನ್ ಶಾಪಿಂಗ್ ಮಾಡಿದರೆ ವಿವಿಧ ಕೊಡುಗೆ ಸಿಗಲಿವೆ.
Vijaya Karnataka Web Flipkart


ಭಾರತದಲ್ಲಿ ಕ್ರೆಡಿಟ್ ಕಾಡ್ ಇಕೋಸಿಸ್ಟಮ್ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿದೆ ಮತ್ತು ಸ್ವೀಕಾರ ಹಾಗೂ ಲಭ್ಯತೆಯ ಭರವಸೆ ಹೆಚ್ಚಾಗತೊಡಗಿದೆ. ಹೆಚ್ಚು ಭಾರತೀಯರು ಅನೌಪಚಾರಿಕ ಸಾಲವನ್ನು ಪಡೆಯುತ್ತಿದ್ದಾರೆ. ಭಾರತದಲ್ಲಿ ಅಂದಾಜು 49 ದಶಲಕ್ಷ ಕ್ರೆಡಿಟ್ ಕಾರ್ಡ್‍ಗಳ ವಿತರಣೆಯಾಗಿವೆ. ಸಿಬಿಲ್‍ನ ಅಂದಾಜಿನ ಪ್ರಕಾರ ಕ್ರೆಡಿಟ್ ಕಾರ್ಡ್ ಪಡೆಯಲು ಸುಮಾರು 220 ದಶಲಕ್ಷ ಜನರು ಅರ್ಹರಿದ್ದಾರೆ. ಇವರಲ್ಲಿ ಮೂರನೇ ಒಂದು ಭಾಗದಷ್ಟು ಜನರನ್ನು ಔಪಚಾರಿಕವಾದ ಹಣಕಾಸು ಸಂಸ್ಥೆಗಳು ತಲುಪಿಲ್ಲ.

ಕ್ರೆಡಿಟ್ ಕಾರ್ಡ್‍ಗೆ ಅರ್ಹರಾಗಿರುವ ಭಾರತೀಯರು ಮತ್ತು ಈ ಹಿಂದೆ ಔಪಚಾರಿಕವಾದ ಸಾಲ ಪಡೆಯದೇ ಇರುವಂತಹ ಜನರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಫ್ಲಿಪ್‍ಕಾರ್ಟ್-ಎಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ವಿನ್ಯಾಸಗೊಳಿಸಲಾಗಿದೆ. ದೇಶಾದ್ಯಂತ ಇರುವ ಎಕ್ಸಿಸ್ ಬ್ಯಾಂಕ್ ಮತ್ತು ಫ್ಲಿಪ್‍ಕಾರ್ಟ್ ವಿತರಣೆ ಜಾಲದ ಮೂಲಕ ಈ ಕ್ರೆಡಿಟ್ ಕಾರ್ಡ್ ಕಾರ್ಯಾಚರಣೆ ಮಾಡಲಾಗುತ್ತದೆ. ಈ ಕಾರ್ಡ್ ಆಯ್ದ ಗ್ರಾಹಕರಿಗೆ ಜುಲೈನಿಂದ ಲಭ್ಯವಾಗಲಿದೆ. ಮುಂಬರುವ ವಾರಗಳಲ್ಲಿ ಎಲ್ಲ ಗ್ರಾಹಕರಿಗೆ ಲಭ್ಯವಾಗಲಿವೆ.

ಗ್ರಾಹಕರು ಈ ಕಾರ್ಡನ್ನು ಮೇಕ್‍ಮೈ ಟ್ರಿಪ್, ಗೋಇಬಿಬೊ, ಉಬೆರ್, ಪಿವಿಆರ್, ಗಾನಾ, ಕ್ಯೂರ್‌ಇಟ್ ಮತ್ತು ಅರ್ಬನ್ ಕ್ಲಾಪ್ ಸಹಿತ ವಿವಿಧ ವ್ಯವಹಾರಗಳಿಗೆ ಬಳಸಿಕೊಳ್ಳಬಹುದಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌