ಆ್ಯಪ್ನಗರ

Flipkart: ಎಂಎಸ್‍ಎಂಇ ಸಬಲೀಕರಣಕ್ಕೆ ಗ್ರೋಥ್ ಕ್ಯಾಪಿಟಲ್ ಯೋಜನೆ ಪರಿಷ್ಕರಣೆ

ಒಂದು ಲಕ್ಷಕ್ಕೂ ಅಧಿಕ ವ್ಯಾಪಾರಿಗಳು ಅಥವಾ ಮಾರಾಟಗಾರರು 10 ಎನ್‍ಬಿಎಫ್‍ಸಿಗಳು ಮತ್ತು ಬ್ಯಾಂಕುಗಳಿಂದ ಆಕರ್ಷಕ ಬಡ್ಡಿ ದರದಲ್ಲಿ ಸಾಲವನ್ನು ಪಡೆಯಬಹುದಾಗಿದೆ.

Vijaya Karnataka Web 21 Jun 2019, 3:50 pm
ದೇಶಾದ್ಯಂತ ಎಂಎಸ್‍ಎಂಇಗಳನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಭಾರತದ ಪ್ರಮುಖ ಮಾರ್ಕೆಟ್‍ಪ್ಲೇಸ್ ಎನಿಸಿರುವ ಫ್ಲಿಪ್‍ಕಾರ್ಟ್ ಗ್ರೋಥ್ ಕ್ಯಾಪಿಟಲ್ ಹೆಸರಿನ ಮಾರಾಟಗಾರರ ಹಣಕಾಸು ಯೋಜನೆಯನ್ನು ಪರಿಷ್ಕರಿಸಿದೆ.
Vijaya Karnataka Web flipkart


ಆನ್‍ಲೈನ್ ಮೂಲಕ ಕಾರ್ಯಾಚರಣೆ ಮಾಡುತ್ತಿರುವ ಎಂಎಸ್‍ಎಂಇಗಳಿಗೆ ಆರ್ಥಿಕ ಸೇರ್ಪಡೆಗೆ ಅರ್ಹರಾಗುವಂತೆ ಮಾಡುವುದು ಮತ್ತು ಅವುಗಳಿಗೆ ಸ್ವಾತಂತ್ರ್ಯ ನೀಡುವ ಸಲುವಾಗಿ ಈ ಯೋಜನೆಯನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಕಳೆದ ತಿಂಗಳು ಈ ಬದಲಾವಣೆಯನ್ನು ಮಾಡಿದ್ದು, ಒಂದು ಲಕ್ಷಕ್ಕೂ ಅಧಿಕ ವ್ಯಾಪಾರಿಗಳು ಅಥವಾ ಮಾರಾಟಗಾರರು 10 ಎನ್‍ಬಿಎಫ್‍ಸಿಗಳು ಮತ್ತು ಬ್ಯಾಂಕುಗಳಿಂದ ಆಕರ್ಷಕ ಬಡ್ಡಿ ದರದಲ್ಲಿ ಸಾಲವನ್ನು ಪಡೆಯಬಹುದಾಗಿದೆ. ಇದೀಗ ಕೇವಲ ಒಂದು ದಿನದಲ್ಲಿ ಸಾಲಕ್ಕೆ ಅನುಮೋದನೆ ನೀಡಲಾಗುತ್ತಿದ್ದು, ಇದಾದ 48 ಗಂಟೆಯೊಳಗೆ ಸಾಲದ ಹಣ ಅವರ ಕೈಗೆ ಸಿಗಲಿದೆ.

ದೇಶದಲ್ಲಿ 60 ದಶಲಕ್ಷಕ್ಕೂ ಅಧಿಕ ಎಂಎಸ್‍ಎಂಇಗಳು ಇವೆ ಎಂದು ಸರಕಾರ ಅಂದಾಜು ಮಾಡಿದೆ. ಇವುಗಳಲ್ಲಿ ಬಹುತೇಕ ಎಂಎಸ್‍ಎಂಇಗಳಿಗೆ ಹಣಕಾಸು ಸೌಲಭ್ಯವನ್ನು ಮತ್ತು ಸಾಲ ಸೌಲಭ್ಯವನ್ನು ಪಡೆಯುವುದೇ ಸವಾಲಿನ ಕೆಲಸವಾಗಿತ್ತು. ಫ್ಲಿಪ್‍ಕಾರ್ಟ್‍ನ ಈ ಗ್ರೋಥ್ ಕ್ಯಾಪಿಟಲ್ ಉಪಕ್ರಮದ ಉದ್ದೇಶ ಹಣಕಾಸು ಸಂಸ್ಥೆಗಳು ಮತ್ತು ಹಣಕಾಸು ಸೌಲಭ್ಯ ದೊರೆಯದವರ ಮಧ್ಯೆ ಇರುವ ಅಂತರವನ್ನು ತಂತ್ರಜ್ಞಾನ ಮತ್ತು ಡಿಜಿಟಲ್ ಆರ್ಥಿಕತೆಯ ಮೂಲಕ ಭರ್ತಿ ಮಾಡುವುದಾಗಿದೆ. ಈ ಕಾರ್ಯಕ್ರಮವು ಇತ್ತೀಚಿನ ಮಾರಾಟಗಾರರ-ಸಬಲೀಕರಣಕ್ಕಾಗಿ ರೂಪಿಸಿದ್ದು, ಇದರ ಮೂಲಕ ಫ್ಲಿಪ್‍ಕಾರ್ಟ್ ಮಾರಾಟಗಾರರಿಗೆ ನೆರವಾಗಿ ಅವರಿಗೆ ಇ-ಕಾಮರ್ಸ್ ಅನ್ನು ಸಂಪೂರ್ಣವಾಗಿ ತಲುಪುವಂತೆ ಮಾಡಲು ಬೆಂಬಲ ನೀಡುತ್ತಿದೆ.

ಗ್ರೋಥ್ ಕ್ಯಾಪಿಟಲ್ ಯೋಜನೆಯಡಿ ಹಣಕಾಸು ಸೌಲಭ್ಯ ಪಡೆಯಲು ಕನಿಷ್ಠ ದಾಖಲಾತಿಗಳು ಮತ್ತು ತಡೆರಹಿತವಾದ ಅರ್ಜಿ ಪ್ರಕ್ರಿಯೆ ಇರುತ್ತದೆ. ಈ ಯೋಜನೆಯಡಿ ಹಣಕಾಸು ಪಾಲುದಾರರೆಂದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಆಕ್ಸಿಸ್ ಬ್ಯಾಂಕ್, ಆದಿತ್ಯ ಬಿರ್ಲಾ ಫೈನಾನ್ಸ್, ಟಾಟಾ ಕ್ಯಾಪಿಟಲ್, ಫ್ಲೆಕ್ಸಿಲೋನ್ಸ್, ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್‍ಮೆಂಟ್ ಬ್ಯಾಂಕ್ ಆಫ್ ಇಂಡಿಯಾ, ಲೆಂಡಿಂಗ್‍ಕಾರ್ಟ್, ಇಂಡಿಫೈ ಮತ್ತು ಹ್ಯಾಪಿ ಲೋನ್ಸ್. ಬಹುತೇಕ ಮಾರಾಟಗಾರರು ಈ ಯೋಜನೆಯಿಂದ ಪ್ರಯೋಜನ ಪಡೆಯುತ್ತಿದ್ದಾರೆ.

ಇವರಲ್ಲಿ ಪ್ರಮುಖವಾಗಿ ಸಣ್ಣ ಪ್ರಮಾಣದ ಮಾರಾಟಗಾರರು ಸಾಲದ ಹಣವನ್ನು ದುಡಿಯುವ ಬಂಡವಾಳವನ್ನಾಗಿ ಮಾಡಿಕೊಂಡು ತಮ್ಮ ಅಗತ್ಯತೆಗಳು ಮತ್ತು ಬೇಡಿಕೆಗಳನ್ನು ಪೂರೈಸಿಕೊಳ್ಳುತ್ತಿದ್ದಾರೆ. ಸಾಲದ ಮೊತ್ತ ಸರಾಸರಿ 7 ಲಕ್ಷ ರೂ.ಗಳಾಗಿರುತ್ತದೆ. ಆದರೆ, ಮಾರಾಟಗಾರರು 3 ಕೋಟಿ ರೂ.ವರೆಗೆ ಸಾಲವನ್ನು ಪಡೆಯಬಹುದಾಗಿದೆ. ಇದಕ್ಕೆ ಶೇ. 9.5 ರಷ್ಟು ಬಡ್ಡಿಯನ್ನು ವಿಧಿಸಲಾಗುತ್ತದೆ. ಈ ಸಾಲ ಮರುಪಾವತಿ ಅವಧಿ 12 ತಿಂಗಳಾಗಿರುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌