ಆ್ಯಪ್ನಗರ

Facebook Shopping: ಹೊಸ ಶಾಪಿಂಗ್ ಟ್ಯಾಬ್ ಪರಿಚಯಿಸಿದ ಫೇಸ್‌ಬುಕ್

ಗ್ರಾಹಕರು ಮತ್ತು ಮಾರಾಟಗಾರರ ಮಧ್ಯೆ ಉತ್ಪನ್ನ ಮಾರಾಟ-ಖರೀದಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವುದು ಮತ್ತು ಸಂಬಂಧಿತ ಸೇವೆ ನೀಡುವ ಮೂಲಕ ಜನರಿಗೆ ಅನುಕೂಲ ಕಲ್ಪಿಸುವುದು ಫೇಸ್‌ಬುಕ್ ಉದ್ದೇಶವಾಗಿದೆ.

Times Now 26 Aug 2020, 12:47 pm
ಫೇಸ್‌ಬುಕ್ ಹೊಸ ಹೊಸ ಆಯ್ಕೆಗಳನ್ನು ಸದಾಕಾಲ ಗ್ರಾಹಕರಿಗೆ ಪರಿಚಯಿಸುತ್ತಿರುತ್ತದೆ. ಅದರಂತೆ, ಈ ಬಾರಿ ಶಾಪಿಂಗ್ ಮತ್ತು ಮಾರ್ಕೆಟ್‌ಪ್ಲೇಸ್‌ಗೆ ಪೂರಕವಾಗಿ, ನೂತನ ಆಯ್ಕೆ ಬಿಡುಗಡೆ ಮಾಡಿದೆ. ಫೇಸ್‌ಬುಕ್‌ನಲ್ಲಿ ಹೊಸದಾಗಿ ಶಾಪಿಂಗ್ ಟ್ಯಾಬ್ ಕಾಣಿಸಿಕೊಂಡಿದ್ದು, ವಿವಿಧ ಬ್ರ್ಯಾಂಡ್ ಮತ್ತು ಉತ್ಪನ್ನಗಳ ಖರೀದಿಗೆ ಅನುಕೂಲ ಕಲ್ಪಿಸಿದೆ.
Vijaya Karnataka Web Facebook shopping
Facebook Shopping


ಫೇಸ್‌ಬುಕ್ ಒಡೆತನದ ಇನ್‌ಸ್ಟಾಗ್ರಾಂನಲ್ಲಿ ಈಗಾಗಲೇ ಈ ಆಯ್ಕೆ ಇದ್ದು, ಶಾಪಿಂಗ್ ಟೂಲ್ ಮೂಲಕ ಕಂಪನಿಗಳು ತಮ್ಮ ಉತ್ಪನ್ನ ಮಾರಾಟ ಮಾಡಲು ಮತ್ತು ಪ್ರಚಾರ ಮಾಡಲು ಅವಕಾಶವಿದೆ. ಜತೆಗೆ ಗ್ರಾಹಕರಿಗೂ ಖರೀದಿ ಆಯ್ಕೆಯಿದ್ದು, ಅವರು ಉತ್ಪನ್ನವೊಂದನ್ನು ಇನ್‌ಸ್ಟಾಗ್ರಾಂ ಶಾಪಿಂಗ್ ಮೂಲಕವೇ ಖರೀದಿಸಬಹುದಾಗಿದೆ. ಅದೇ ಮಾದರಿಯಲ್ಲಿ ಫೇಸ್‌ಬುಕ್ ಕೂಡ ನೂತನ ಆಯ್ಕೆ ಬಿಡುಗಡೆ ಮಾಡಿದೆ.

ಫೇಸ್‌ಬುಕ್ ಶಾಪಿಂಗ್ ಪ್ರಸ್ತುತ ಅಮೆರಿಕದ ಬಳಕೆದಾರರಿಗೆ ಮಾತ್ರ ಲಭ್ಯವಿದ್ದು, ಪರಿಶೀಲನಾ ಹಂತದಲ್ಲಿದೆ. ಮುಂದೆ ಎಲ್ಲ ಬಳಕೆದಾರರಿಗೆ ದೊರೆಯಲಿದೆ.

ಗ್ರಾಹಕರು ಮತ್ತು ಮಾರಾಟಗಾರರ ಮಧ್ಯೆ ಉತ್ಪನ್ನ ಮಾರಾಟ-ಖರೀದಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವುದು ಮತ್ತು ಸಂಬಂಧಿತ ಸೇವೆ ನೀಡುವ ಮೂಲಕ ಜನರಿಗೆ ಅನುಕೂಲ ಕಲ್ಪಿಸುವುದು ಫೇಸ್‌ಬುಕ್ ಉದ್ದೇಶವಾಗಿದೆ.

Samsung Galaxy: ಅಮೆರಿಕ ಸೇನಾ ಬಳಕೆಗೆ ವಿಶೇಷ ಫೋನ್ ವಿನ್ಯಾಸ ಮಾಡಿದ ಸ್ಯಾಮ್‌ಸಂಗ್

ಆನ್‌ಲೈನ್ ಮಾರುಕಟ್ಟೆಗೆ ಹೆಚ್ಚಿನ ಬೇಡಿಕೆಯಿದ್ದು, ಜನರು ಕೂಡ ಸುಲಭದ ಶಾಪಿಂಗ್ ಅನುಭವ ಬಯಸುತ್ತಾರೆ, ಹೀಗಾಗಿ ಅವರಿಗೆ ಫೇಸ್‌ಬುಕ್ ಶಾಪಿಂಗ್ ಫೀಚರ್ ಒದಗಿಸಲಾಗುತ್ತಿದೆ ಎಂದು ಫೇಸ್‌ಬುಕ್ ಹೇಳಿದೆ.

Fitbit Versa 3: ಸ್ಮಾರ್ಟ್‌ವಾಚ್, ಸ್ಮಾರ್ಟ್‌ಫಿಟ್ನೆಸ್ ಟ್ರ್ಯಾಕರ್ ಪರಿಚಯಿಸಿದ ಫಿಟ್‌ಬಿಟ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌