ಆ್ಯಪ್ನಗರ

WhatsApp: ದೇಶದ ವಿವಿಧ ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆ ಜತೆ ಸಹಯೋಗ

ಡಿಜಿಟಲ್ ಪಾವತಿ ಮಾತ್ರವಲ್ಲದೆ, ಇನ್ಸೂರೆನ್ಸ್, ಸಣ್ಣ ಹಣಕಾಸು ಮತ್ತು ಪಿಂಚಣಿ ಮತ್ತಿತರ ಸೇವೆಗಳು ಸುಲಭದಲ್ಲಿ ಜನರಿಗೆ ದೊರಕುವಂತಾಗಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ವಾಟ್ಸಪ್‌ ಭಾರತ ಮುಖ್ಯಸ್ಥ ಅಭಿಜಿತ್ ಬೋಸ್ ತಿಳಿಸಿದ್ದಾರೆ.

Times Now 23 Jul 2020, 12:20 pm
ಫೇಸ್‌ಬುಕ್ ಒಡೆತನದ ವಾಟ್ಸಪ್, ದೇಶದಲ್ಲಿ ಡಿಜಿಟಲ್ ಮತ್ತು ವ್ಯಾಲೆಟ್ ಪೇ ಸೇವೆ ಒದಗಿಸುವ ವಾಟ್ಸಪ್ ಪೇ ಯೋಜನೆಯನ್ನು ಶೀಘ್ರದಲ್ಲೇ ಜಾರಿಗೆ ತರಲಿದೆ. ಈಗಾಗಲೇ ದೇಶದಲ್ಲಿ ಜನಪ್ರಿಯವಾಗಿರುವ ಗೂಗಲ್ ಪೇ, ಪೇಟಿಎಂ, ಫೋನ್‌ಪೇ ಇತ್ಯಾದಿ ಡಿಜಿಟಲ್ ಪಾವತಿ ಕಂಪನಿಗಳಿಗೆ ವಾಟ್ಸಪ್ ಪೇ ಭಾರಿ ಸ್ಪರ್ಧೆ ಒಡ್ಡಲಿದೆ.
Vijaya Karnataka Web WhatsApp
WhatsApp


ಅಲ್ಲದೆ, ರಿಲಯನ್ಸ್ ಜತೆಗಿನ ಸಹಯೋಗವು ಕೂಡ ವಾಟ್ಸಪ್‌ಗೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ. ಜತೆಗೆ ಡಿಜಿಟಲ್ ಪೇ ಯೋಜನೆಯನ್ನು ಮತ್ತಷ್ಟು ಹೆಚ್ಚಿನ ಜನರಿಗೆ ತಲುಪಿಸುವ ಸಲುವಾಗಿ ವಾಟ್ಸಪ್, ದೇಶದ ಪ್ರಮುಖ ಬ್ಯಾಂಕ್‌ಗಳ ಜತೆ ಸಹಯೋಗ ಹೊಂದಲಿದೆ.

ಹಣಕಾಸು ಸಂಸ್ಥೆಗಳ ಜತೆಗೂ ವಾಟ್ಸಪ್ ಒಪ್ಪಂದ ಮಾಡಿಕೊಳ್ಳಲಿದ್ದು, ಡಿಜಿಟಲ್ ಪಾವತಿ ಮಾತ್ರವಲ್ಲದೆ, ಇನ್ಸೂರೆನ್ಸ್, ಸಣ್ಣ ಹಣಕಾಸು ಮತ್ತು ಪಿಂಚಣಿ ಮತ್ತಿತರ ಸೇವೆಗಳು ಸುಲಭದಲ್ಲಿ ಜನರಿಗೆ ದೊರಕುವಂತಾಗಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ವಾಟ್ಸಪ್‌ ಭಾರತ ಮುಖ್ಯಸ್ಥ ಅಭಿಜಿತ್ ಬೋಸ್ ತಿಳಿಸಿದ್ದಾರೆ.

ಬ್ಯಾಂಕಿಂಗ್ ಸೇವೆಗಳು ಸುಲಭದಲ್ಲಿ ಗ್ರಾಮೀಣ ಭಾಗದ ಜನರಿಗೂ ದೊರಕುವಂತಾಗಲು, ಮತ್ತು ಕಡಿಮೆ ಆದಾಯ ಹೊಂದಿರುವ ಜನರಿಗೂ ಅಗತ್ಯ ಸೇವೆ ನೀಡಲು ಅನುಕೂಲವಾಗುವಂತೆ ವಾಟ್ಸಪ್ ವಿವಿಧ ಯೋಜನೆ ಹೊಂದಿದೆ ಎಂದು ಬೋಸ್ ಹೇಳಿದ್ದಾರೆ.

OnePlus Nord: ಸ್ಯಾಮ್‌ಸಂಗ್ ಗ್ಯಾಲಕ್ಸಿ A51 ಅಥವಾ ಒನ್‌ಪ್ಲಸ್ ನಾರ್ಡ್? ಯಾವುದು ಬೆಸ್ಟ್?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌