ಆ್ಯಪ್ನಗರ

Cambridge Analytica: ಆ್ಯಪ್‌ಗಳನ್ನು ಕಿತ್ತುಹಾಕಿದ ಫೇಸ್‌ಬುಕ್

ಕೇಂಬ್ರಿಡ್ಜ್ ಅನಾಲಿಟಿಕಾ ಡಾಟಾ ಹಗರಣದ ಬಳಿಕ ಎಚ್ಚೆತ್ತುಕೊಂಡಿರುವ ಫೇಸ್‌ಬುಕ್ ಬಳಕೆದಾರರ ಡಾಟಾ ಕದಿಯಬಲ್ಲ ಆ್ಯಪ್‌ಗಳಿಗೆ ಕಡಿವಾಣ ಹಾಕಲು ಫೇಸ್‌ಬುಕ್ ಮುಂದಾಗಿದೆ.

Times Now 21 Sep 2019, 1:11 pm
ಬಳಕೆದಾರರ ದತ್ತಾಂಶ ಕಳವು ಪ್ರಕರಣ ಮತ್ತು ಮಾಹಿತಿ ಸೋರಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಫೇಸ್‌ಬುಕ್, ಹಲವು ಆ್ಯಪ್‌ಗಳಿಗೆ ನಿರ್ಬಂಧ ಹೇರುವ ಜತೆಗೆ, ಫೇಸ್‌ಬುಕ್‌ನಿಂದ ಅವುಗಳನ್ನು ತೆಗೆದುಹಾಕಿದೆ.
Vijaya Karnataka Web fb


ಸುಮಾರು 400ಕ್ಕೂ ಅಧಿಕ ಆ್ಯಪ್‌ ಡೆವಲಪರ್‌ಗಳ ಮೂಲಕ ಅಭಿವೃದ್ಧಿಪಡಿಸಲಾಗಿದ್ದ 1000ಕ್ಕೂ ಅಧಿಕ ಆ್ಯಪ್‌ಗಳನ್ನು ಫೇಸ್‌ಬುಕ್ ತೆಗೆದುಹಾಕಿದೆ.

ಕೇಂಬ್ರಿಜ್ ಅನಾಲಿಟಿಕಾ ಪ್ರಕರಣದ ಬಳಿಕ ಗ್ರಾಹಕರ ವೈಯಕ್ತಿಕ ಮಾಹಿತಿ ಕಳವು ಪ್ರಕರಣ ಹೆಚ್ಚು ಸದ್ದು ಮಾಡಿದ್ದು, ಬಳಕೆದಾರರಿಂದ ಟೀಕೆಗೆ ಗುರಿಯಾಗಿತ್ತು.

ಗೂಗಲ್ ಪ್ಲೇ ಸ್ಟೋರ್‌ನ ಎಲ್ಲ ಆ್ಯಪ್‌ ನಂಬಲರ್ಹವಲ್ಲ!

ಜತೆಗೆ ಚುನಾವಣೆಯಲ್ಲಿ ಕೂಡ ಜನರ ಮೇಲೆ ಪ್ರಭಾವ ಬೀರುವ ಕೆಲಸವನ್ನು ಫೇಸ್‌ಬುಕ್ ಮೂಲಕ ಮಾಡಿಸಲಾಗುತ್ತದೆ ಎಂಬ ಆರೋಪದ ಬಳಿಕ ಈ ಕ್ರಮಕ್ಕೆ ಫೇಸ್‌ಬುಕ್ ಮುಂದಾಗಿದೆ.

ಕೆಲವೊಂದು ಆ್ಯಪ್‌ ಉಪಯೋಗಿಸುವ ಸಂದರ್ಭದಲ್ಲಿ ಬಳಕೆದಾರರ ಮಾಹಿತಿ ನೀಡಬೇಕಾಗುತ್ತದೆ. ಆದರೆ ಕೆಲವೊಂದು ಸಂದರ್ಭದಲ್ಲಿ ಆ್ಯಪ್‌ಗಳು ಅವಾಗಿಯೇ ಮಾಹಿತಿ ಕದಿಯುವ ಕೆಲಸ ಮಾಡುತ್ತವೆ. ಹೀಗಾಗಿ ಅಂತಹ ಆ್ಯಪ್‌ಗಳನ್ನು ಪರಿಶೀಲಿಸಿ, ತೆಗೆದುಹಾಕುವ ಕೆಲಸಕ್ಕೆ ಫೇಸ್‌ಬುಕ್ ಮುಂದಾಗಿದೆ.

Redmi K20 Pro: ಶವೋಮಿ ಪ್ರೀಮಿಯಂ ಫೋನ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌