ಆ್ಯಪ್ನಗರ

MyGov Corona Helpdesk: ಫೇಸ್‌ಬುಕ್ ಮೆಸೆಂಜರ್ ಹೆಲ್ಪ್‌ಡೆಸ್ಕ್

ವಿವಿಧ ಸ್ವರೂಪದ ಗಾಳಿಸುದ್ದಿ ಫೇಸ್‌ಬುಕ್ ಮೂಲಕ ಹರಡುತ್ತಿದ್ದು, ಅದಕ್ಕೆ ಕಡಿವಾಣ ಹಾಕಲು ಫೇಸ್‌ಬುಕ್ ಸೂಕ್ತ ಕ್ರಮ ಕೈಗೊಳ್ಳುತ್ತಿದೆ. ಜತೆಗೆ ಸರಕಾರ, ವಿಶ್ವ ಆರೋಗ್ಯ ಸಂಸ್ಥೆ ಮೂಲಕ ಅಧಿಕೃತವಾಗಿ ಪಡೆದ ಅಂಕಿಅಂಶಗಳು, ಕೊರೊನಾ ವೈರಸ್ ಜಾಗೃತಿಯನ್ನು ಫೇಸ್‌ಬುಕ್ ಒದಗಿಸಲಿದೆ.

Times Now 27 Mar 2020, 6:37 pm
ಕೊರೊನಾವೈರಸ್ ಕುರಿತು ಹಬ್ಬುತ್ತಿರುವ ಗಾಳಿ ಸುದ್ದಿ ಮತ್ತು ವದಂತಿಗೆ ತೆರೆ ಎಳೆಯುವ ಸಲುವಾಗಿ ಸರಕಾರ ಮತ್ತು ಆರೋಗ್ಯ ಸಚಿವಾಲಯದ ಜತೆ ಫೇಸ್‌ಬುಕ್ ಕೈಜೋಡಿಸಿದೆ.
Vijaya Karnataka Web Facebook
Facebook Messenger


ಫೇಸ್‌ಬುಕ್ ಮೆಸೆಂಜರ್ ಮೂಲಕ ಜನರು ಕೊರೊನಾವೈರಸ್ ಕುರಿತು ತಮಗಿರುವ ಸಂಶಯ ಪರಿಹರಿಸಿಕೊಳ್ಳಬಹುದು. ಜತೆಗೆ ಫೇಸ್‌ಬುಕ್ ಮೆಸೆಂಜರ್‌, ಮೈ ಗೊವ್ ಹೆಲ್ಪ್‌ಡೆಸ್ಕ್ ಚಾಟ್‌ಬಾಟ್ ಮೂಲಕ ಅಧಿಕೃತ ಮಾಹಿತಿಯನ್ನು ಜನರಿಗೆ ಒದಗಿಸಲಿದೆ.

ವದಂತಿಗೆ ತೆರೆ
ಸಾಮಾಜಿಕ ತಾಣಗಳ ಮೂಲಕ ಅಧಿಕ ಸಂಖ್ಯೆಯಲ್ಲಿ ಕೊರೊನಾವೈರಸ್ ಕುರಿತು ವದಂತಿ ಹರಡಲಾಗುತ್ತಿದೆ. ಜತೆಗೆ ವಿವಿಧ ಸ್ವರೂಪದ ಗಾಳಿಸುದ್ದಿ ಫೇಸ್‌ಬುಕ್ ಮೂಲಕ ಹರಡುತ್ತಿದ್ದು, ಅದಕ್ಕೆ ಕಡಿವಾಣ ಹಾಕಲು ಫೇಸ್‌ಬುಕ್ ಸೂಕ್ತ ಕ್ರಮ ಕೈಗೊಳ್ಳುತ್ತಿದೆ. ಜತೆಗೆ ಸರಕಾರ, ವಿಶ್ವ ಆರೋಗ್ಯ ಸಂಸ್ಥೆ ಮೂಲಕ ಅಧಿಕೃತವಾಗಿ ಪಡೆದ ಅಂಕಿಅಂಶಗಳು, ಕೊರೊನಾ ವೈರಸ್ ಜಾಗೃತಿಯನ್ನು ಫೇಸ್‌ಬುಕ್ ಒದಗಿಸಲಿದೆ.

ಬಳಕೆ ಹೇಗೆ?
ಫೇಸ್‌ಬುಕ್‌ನಲ್ಲಿ ಬಳಕೆದಾರರು ಮೈಗೊವ್ ಇಂಡಿಯಾ ಪೇಜ್‌ಗೆ ತೆರಳಿ, ಅಲ್ಲಿ ಕೊಟ್ಟಿರುವ ಮೆಸೆಂಜರ್ ಲಿಂಕ್ ಕ್ಲಿಕ್ ಮಾಡಿದರೆ, ಚಾಟ್ ಬಾಕ್ಸ್ ತೆರೆದುಕೊಳ್ಳುತ್ತದೆ. ಸೂಚನೆಯ ಅನುಸಾರ ನಿಮಗೆ ಬೇಕಾದ ಅಗತ್ಯ ಮಾಹಿತಿಯನ್ನು ಪಡೆದುಕೊಳ್ಳಬಹುದು.



Free Netflix Service: ಉಚಿತ ಆಫರ್ ಪಾಸ್ ಬಗ್ಗೆ ಗಮನಿಸಿ..!

Corona Help Desk: ವಾಟ್ಸಪ್‌, ಮೈಗೊವ್‌ನಿಂದ ಮಾಹಿತಿ ಸೇವೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌