ಆ್ಯಪ್ನಗರ

WhatsApp: ಕೈ ಕೊಟ್ಟ ವ್ಯಾಟ್ಸಪ್‌, ಕಂಗಾಲಾದ ಬಳಕೆದಾರರು

ಜನಪ್ರಿಯ ಮೆಸೇಜಿಂಗ್ ಆ್ಯಪ್‌ ವಾಟ್ಸಪ್ ಭಾನುವಾರ ಸಂಜೆ ಕೆಲಕಾಲ ಸ್ಥಗಿತಗೊಂಡಿತ್ತು. ಬಳಕೆದಾರರಿಗೆ ವಾಟ್ಸಪ್‌ನ ಹಲವು ಆಯ್ಕೆಗಳು ಲಭ್ಯವಾಗದೆ ಸಮಸ್ಯೆ ಎದುರಿಸುವಂತಾಯಿತು. ಬೇಸತ್ತ ಬಳಕೆದಾರರು ಟ್ವಿಟರ್ ಮೂಲಕ ಅಸಹನೆ ತೋಡಿಕೊಂಡರು.

THE ECONOMIC TIMES 20 Jan 2020, 11:11 am
ಅತಿಹೆಚ್ಚು ಸ್ಮಾರ್ಟ್‌ಫೋನ್‌ ಬಳಕೆದಾರರು ಬಳಸುತ್ತಿರುವ ಜನಪ್ರಿಯ ಮೆಸೇಜಿಂಗ್‌ ಆ್ಯಪ್‌ 'ವಾಟ್ಸ್‌ಆ್ಯಪ್‌' ಭಾನುವಾರ ಸಂಜೆ ಕೆಲ ಗಂಟೆಗಳವರೆಗೆ ಕಾರ್ಯಸ್ಥಗಿತಗೊಳಿಸಿದ್ದರಿಂದ ಬಳಕೆದಾರರು ಪರದಾಡಿದರು. ಸಂಜೆ 4 ಗಂಟೆಗೆ ವಾಟ್ಸಪ್‌ ಬಳಕೆದಾರರು ತಮ್ಮ ಸಂದೇಶಗಳು, ಫೋಟೋಗಳು ರವಾನೆಯಾಗುತ್ತಿಲ್ಲಎಂದು ಟ್ವಿಟರ್‌ನಲ್ಲಿ ದೂರು ದಾಖಲಿಸಲು ಆರಂಭಿಸಿದರು.
Vijaya Karnataka Web WhatsApp
WhatsApp Download


ಕ್ರಮೇಣ ದೂರುಗಳ ಸಂಖ್ಯೆ ವಿಪರೀತಗೊಂಡು ಸಂಜೆ 5ರ ಹೊತ್ತಿಗೆ ವಾಟ್ಸಪ್‌ ವಿರುದ್ಧ ಭಾರತೀಯ ಬಳಕೆದಾರರ ಆಕ್ರೋಶ ತೀವ್ರಗೊಂಡಿತು. ಬ್ರೆಜಿಲ್‌, ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಕೂಡ ವಾಟ್ಸಪ್‌ ಬಳಕೆದಾರರು ಅನನುಕೂಲ ಅನುಭವಿಸಿದರು ಎಂದು ವರದಿಯಾಗಿದೆ.

ವಾಟ್ಸಪ್ ಸ್ಟೇಟಸ್ ನೋಡುವಲ್ಲಿ ಕೆಲ ಬಳಕೆದಾರರು ತೊಂದರೆ ಅನುಭವಿಸಿದರೆ, ಮತ್ತೆ ಹಲವರಿಗೆ ವಿಡಿಯೋ ಮತ್ತು ಫೋಟೋ ಡೌನ್‌ಲೋಡ್ ಮಾಡಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಅಲ್ಲದೆ ಫೋಟೋ ಸ್ಟೇಟಸ್ ಅಪ್‌ಲೋಡ್ ಮಾಡಲು, ಕಳುಹಿಸಲು ಕೂಡ ಜನರು ಪರದಾಡುವಂತಾಯಿತು. ವಿಭಿನ್ನ ರೀತಿಯ ಸಮಸ್ಯೆಗಳು ವಾಟ್ಸಪ್ ಬಳಕೆದಾರರನ್ನು ಕಾಡಿದ್ದು, 6 ಗಂಟೆಯ ಸುಮಾರಿಗೆ ವಾಟ್ಸಪ್ ಮತ್ತೆ ಯಥಾಸ್ಥಿತಿಗೆ ಮರಳಿತು.

3D Printer: ನಿಮ್ಮಿಷ್ಟದ ಚಾಕಲೇಟ್ ಮುದ್ರಿಸಿ ಸವಿಯಿರಿ!

ಡೌನ್‌ಲೋಡ್‌ ದಾಖಲೆ
ಫೇಸ್‌ಬುಕ್‌ ಒಡೆತನದ ವಾಟ್ಸಪ್‌ 500 ಕೋಟಿಗೂ ಅಧಿಕ ಬಾರಿ ಡೌನ್‌ಲೋಡ್‌ ಆದ ದಾಖಲೆ ಬರೆದಿದೆ. ಗೂಗಲ್‌ ಒಡೆತನದ ಹೊರತಾಗಿರುವ ಆ್ಯಪ್‌ವೊಂದು ಇಷ್ಟೊಂದು ಬಾರಿ ಡೌನ್‌ಲೋಡ್‌ ಆಗಿರುವುದು ಹೊಸ ದಾಖಲೆ ಎನ್ನಲಾಗಿದೆ. ವಿಶ್ವಾದ್ಯಂತ ಮಾಸಿಕ 160 ಕೋಟಿ ಬಳಕೆದಾರರನ್ನು ವಾಟ್ಸಪ್‌ ಹೊಂದಿದೆ.

TikTok: ಫೇಸ್‌ಬುಕ್, ಇನ್‌ಸ್ಟಾಗ್ರಾಂಗಿಂತಲೂ ಅಧಿಕ ಡೌನ್‌ಲೋಡ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌