ಆ್ಯಪ್ನಗರ

ಫೇವರಿಟ್‌ ಆ್ಯಪ್‌ಗಳು: ಬ್ಲಾಗ್‌ ಕಂಪಾಸ್‌

ಭಾರತೀಯರ ಬ್ಲಾಗರ್‌ಗಳಿಗಾಗಿಯೇ ಗೂಗಲ್‌, ಬ್ಲಾಗ್‌ ಕಂಪಾಸ್‌ ಎಂಬ ಹೊಸ ಆ್ಯಪ್‌ ಬಿಡುಗಡೆ ಮಾಡಿದೆ. ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಇದು ಲಭ್ಯವಿದ್ದು, ಭಾರತದಲ್ಲಿ ಮಾತ್ರ ಬಳಕೆಗೆ ಲಭ್ಯವಿದೆ.

Vijaya Karnataka 10 Sep 2018, 10:04 am
blog compass
Vijaya Karnataka Web 1


ಭಾರತೀಯರ ಬ್ಲಾಗರ್‌ಗಳಿಗಾಗಿಯೇ ಗೂಗಲ್‌, ಬ್ಲಾಗ್‌ ಕಂಪಾಸ್‌ ಎಂಬ ಹೊಸ ಆ್ಯಪ್‌ ಬಿಡುಗಡೆ ಮಾಡಿದೆ. ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಇದು ಲಭ್ಯವಿದ್ದು, ಭಾರತದಲ್ಲಿ ಮಾತ್ರ ಬಳಕೆಗೆ ಲಭ್ಯವಿದೆ. ಸದ್ಯ ಬೀಟಾ ವರ್ಷನ್‌ನಲ್ಲಿದ್ದು, ವರ್ಡ್‌ಪ್ರೆಸ್‌ ಮತ್ತು ಬ್ಲಾಗರ್‌ ಡಾಟ್‌ ಕಾಮ್‌ಗೆ ಸಪೋರ್ಟ್‌ ಮಾಡುತ್ತದೆ. ಬ್ಲಾಗರ್‌ಗಳಿಗೆ ವಿಶ್ಲೇಷಣಾತ್ಮಕವಾಗಿ ಮತ್ತು ಶಿಫಾರಸಿನ ವೇದಿಕೆಯ ರೀತಿಯಲ್ಲಿ ಕೆಲಸ ಮಾಡುತ್ತದೆ. ಬ್ಲಾಗರ್‌ಗಳಿಗೆ ತಮ್ಮ ಸೈಟ್‌ ನಿರ್ವಹಣೆ, ಅವರ ಆಸಕ್ತಿಗೆ ಅನುಗುಣವಾಗಿ ಸೂಕ್ತ ವಿಷಯಗಳನ್ನು ಹುಡುಕಿಕೊಡುವುದು ಸೇರಿದಂತೆ ಇನ್ನಿತರ ಕೆಲಸಗಳನ್ನು ನಿರ್ವಹಿಸಲಿದೆ. ಜತೆಗೆ, ಬ್ಲಾಗರ್‌ಗಳು ತಮ್ಮ ಸೈಟ್‌ ಅಂಕಿಸಂಖ್ಯೆಗಳನ್ನೂ ನಿರ್ವಹಣೆ ಮಾಡಲು ಇದು ಅವಕಾಶ ಕಲ್ಪಿಸುತ್ತದೆ.

ಕೆಟ್ಟ ಜಾಹೀರಾತಿಗೆ ಗೂಗಲ್‌ ಕೊಕ್‌

ತನ್ನ ನೀತಿಗಳನ್ನು ಉಲ್ಲಂಘಿಸುತ್ತಿರುವ ಜಾಹೀರಾತುಗಳನ್ನು ಯಾವುದೇ ಮುಲಾಜು ಇಲ್ಲದೇ ಗೂಗಲ್‌ ಕಿತ್ತು ಹಾಕುತ್ತಿದೆ. ಆಶ್ಚರ್ಯ ಎಂದರೆ, ಗೂಗಲ್‌ ಸೆಕೆಂಡ್‌ಗೆ 100ಕ್ಕೂ ಹೆಚ್ಚು ಇಂಥ ಜಾಹೀರಾತುಗಳನ್ನು ತೆಗೆದು ಹಾಕುತ್ತಿದೆ. ಕಳೆದ ವರ್ಷವಷ್ಟೇ, ಜಾಹೀರಾತು ನೀತಿಗಳನ್ನು ಉಲ್ಲಂಘಿಸಿದ್ದ 3.2 ಬಿಲಿಯನ್‌ ಸ್ಕ್ಯಾ‌ಮರ್ಸ್‌ ಜಾಹೀರಾತುಗಳನ್ನು ತೆಗೆದು ಹಾಕಲಾಗಿತ್ತು ಎಂದು ಗೂಗಲ್‌ನ ಗೂಗಲ್‌ ಪ್ರಾಡಕ್ಟ್ ಪಾಲಿಸಿ ಡೈರೆಕ್ಟರ್‌ ಡೇವಿಡ್‌ ಗ್ರಾಫ್‌ ತಿಳಿಸಿದ್ದಾರೆ. ಜನರನ್ನು ತಪ್ಪುದಾರಿಗೆ ಎಳೆಯುತ್ತಿರುವ ಜಾಹೀರಾತುಗಳು ಹೆಚ್ಚು ಕಾಣಿಸಿಕೊಳ್ಳುತ್ತಿರುವುದು ಗೂಗಲ್‌ ಕಂಪನಿ ಇಂಥ ಕಾರ್ಯಕ್ಕೆ ಮುಂದಾಗಿದೆ. ಆರೋಗ್ಯವಂಥ ಜಾಹೀರಾತು ವ್ಯವಸ್ಥೆಯನ್ನು ರೂಪಿಸುವುದು ನಮ್ಮ ಆದ್ಯತೆಗಳಲ್ಲೊಂದಾಗಿದೆ. ಅಂದರೆ, ಅದರರ್ಥ, ಕೆಟ್ಟ ಜಾಹೀರಾತುಗಳು ಮತ್ತು ದಾರಿ ತಪ್ಪಿಸುವ ಜಾಹೀರಾತುಗಳಿಂದ ನಮ್ಮ ಬಳಕೆದಾರರನ್ನು ಉಳಿಸಿಕೊಳ್ಳುವುದೇ ಆಗಿದೆ ಎಂದು ಗೂಗಲ್‌ ಕಂಪನಿ ಹೇಳಿಕೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌