ಆ್ಯಪ್ನಗರ

ಫೇವರಿಟ್‌ ಆ್ಯಪ್‌ಗಳು

ಈಗ ಸ್ಮಾರ್ಟ್‌ಫೋನ್‌ಗಳು ಇಲ್ಲದೆ ಬದುಕಿಲ್ಲ. ನಾವು ಸಿಕ್ಕಾಪಟ್ಟೆ ಅದರ ಮೇಲೆ ಅವಲಂಬಿತರಾಗಿದ್ದೇವೆ. ಜತೆಗೆ ಅನಗತ್ಯವಾಗಿ ಸ್ಮಾರ್ಟ್‌ಫೋನ್‌ಗಳ ಮೇಲೆ ಸಮಯವನ್ನು ಕಳೆಯುತ್ತಿದ್ದೇವೆ. ಅನಗತ್ಯ ಬಳಕೆಯನ್ನು ತಡೆಯಲು ಈ ಆ್ಯಪ್‌ ನಿಮಗೆ ನೆರವು ನೀಡುತ್ತದೆ.

Vijaya Karnataka Web 19 Feb 2018, 9:20 am

thrive

Vijaya Karnataka Web favourite apps
ಫೇವರಿಟ್‌ ಆ್ಯಪ್‌ಗಳು



ಈಗ ಸ್ಮಾರ್ಟ್‌ಫೋನ್‌ಗಳು ಇಲ್ಲದೆ ಬದುಕಿಲ್ಲ. ನಾವು ಸಿಕ್ಕಾಪಟ್ಟೆ ಅದರ ಮೇಲೆ ಅವಲಂಬಿತರಾಗಿದ್ದೇವೆ. ಜತೆಗೆ ಅನಗತ್ಯವಾಗಿ ಸ್ಮಾರ್ಟ್‌ಫೋನ್‌ಗಳ ಮೇಲೆ ಸಮಯವನ್ನು ಕಳೆಯುತ್ತಿದ್ದೇವೆ. ಅನಗತ್ಯ ಬಳಕೆಯನ್ನು ತಡೆಯಲು ಈ ಆ್ಯಪ್‌ ನಿಮಗೆ ನೆರವು ನೀಡುತ್ತದೆ. ಈ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡರೆ, ಥ್ರೈವ್‌ ಮೋಡ್‌, ಸೂಪರ್‌ ಥ್ರೈವ್‌ ಮೋಡ್‌ ಎಂಬ ಆಯ್ಕೆಗಳು ದೊರೆಯುತ್ತವೆ. ನಿಮಗೆ ಬೇಕಾದ ಆ್ಯಪ್‌ಗಳನ್ನು ಮಾತ್ರ ಇಟ್ಟುಕೊಂಡು ಅನಗತ್ಯ ಎನಿಸುವ ಅಥವಾ ಹೆಚ್ಚಾಗ ಬಳಕೆಯಾಗದ ಆ್ಯಪ್‌ಗಳನ್ನು ಇದರ ಪಟ್ಟಿಗೆ ಸೇರಿಸಬಹುದು. ಆಗ ನಿಮಗೆ ಅಗತ್ಯ ಇರುವ ಆ್ಯಪ್‌ಗಳನ್ನು ಮಾತ್ರ ಬಳಸಲು ಸುಲಭವಾಗುತ್ತದೆ. ಹಾಗೆಯೇ, ಹೆಚ್ಚು ಸಮಯವನ್ನು ಮೊಬೈಲ್‌ಗಾಗಿಯೇ ಮೀಸಲಿಡುವುದನ್ನು ತಪ್ಪಿಸಬಹುದು.

Greenify

ನಿಮ್ಮ ಫೋನ್‌ ಬ್ಯಾಟರಿ ಅನಗತ್ಯವಾಗಿ ಸೋರಿಕೆಯಾಗುತ್ತಿದೆಯೇ? ಹಾಗಾದರೆ ಒಂದಿಷ್ಟು ಉಪಾಯಗಳಿವೆ. ಲಾಲಿಪಪ್‌ ಒಎಸ್‌ನಲ್ಲಿ ಆಂತರಿಕವಾಗಿಯೇ ಬ್ಯಾಟರಿ ಸೇವಿಂಗ್‌ ಟೂಲ್‌ಗಳಿವೆ ಮತ್ತು ಕೆಲವು ಫೋನ್‌ಗಳಲ್ಲಿ ಬ್ಯಾಟರಿ ಸೇವಿಂಗ್ಸ್‌ ಮೋಡ್‌ಗಳಿರುತ್ತವೆ. ಹೀಗಿದ್ದಾಗ್ಯೂ, ನಿಮ್ಮ ಬ್ಯಾಟರಿ ಖರ್ಚು ಆಗುವುದನ್ನು ತಪ್ಪಿಸಲು ಗ್ರೀನಿಫೈ ಎಂಬ ಆ್ಯಪ್‌ ಇದೆ. ಈ ಬ್ಯಾಕ್‌ಗ್ರೌಂಡ್‌ನಲ್ಲಿ ಸಕ್ರಿಯವಾಗಿ ಯಾವ ಆ್ಯಪ್‌ಗಳು ಎಷ್ಟು ಬ್ಯಾಟರಿಯನ್ನು ಬಳಸುತ್ತಿವೆ ಎಂಬುದನ್ನು ನಿರ್ವಹಣೆ ಮಾಡುತ್ತದೆ. ಒಂದು ವೇಳೆ ನಿಮಗೆ ಅಗತ್ಯವಿರದ ಆ್ಯಪ್‌ ಬಗ್ಗೆ ಇದಕ್ಕೆ ತಿಳಿಸಿದರೆ ಅಂಥ ಆ್ಯಪ್‌ ಬ್ಯಾಟರಿ ಬಳಸುವುದನ್ನು ತಪ್ಪಿಸುತ್ತದೆ. ಹೀಗೆ ನೀವು ಈ ಆ್ಯಪ್‌ನಿಂದ ಬ್ಯಾಟರಿ ಬಾಳಿಕೆಯನ್ನು ಹೆಚ್ಚಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌