ಆ್ಯಪ್ನಗರ

Fitbit Versa 3: ಸ್ಮಾರ್ಟ್‌ವಾಚ್, ಸ್ಮಾರ್ಟ್‌ಫಿಟ್ನೆಸ್ ಟ್ರ್ಯಾಕರ್ ಪರಿಚಯಿಸಿದ ಫಿಟ್‌ಬಿಟ್

ಫಿಟ್‌ಬಿಟ್ ಸೆನ್ಸ್ ಜತೆಗೆ 6 ತಿಂಗಳ ಫಿಟ್‌ಬಿಟ್ ಪ್ರೀಮಿಯಂ ಉಚಿತ ಟ್ರಯಲ್ ಕೂಡ ದೊರೆಯಲಿದ್ದು, ನಿಮ್ಮ ಆರೋಗ್ಯದ ಕುರಿತ ಎಲ್ಲ ವಿವರವನ್ನು ಅದರ ಮೂಲಕ ಪಡೆದುಕೊಳ್ಳಬಹುದು.​

Times Now 26 Aug 2020, 9:38 am
ಸ್ಮಾರ್ಟ್‌ವಾಚ್ ಮತ್ತು ಫಿಟ್ನೆಸ್ ಟ್ರ್ಯಾಕರ್ ಕ್ಷೇತ್ರದಲ್ಲಿ ಹೆಸರು ಗಳಿಸಿರುವ ಫಿಟ್‌ಬಿಟ್ ದೇಶದಲ್ಲಿ ಮೂರು ಆಕರ್ಷಕ ಗ್ಯಾಜೆಟ್ ಪರಿಚಯಿಸಿದೆ. ಫಿಟ್‌ಬಿಟ್ ಸೆನ್ಸ್, ಫಿಟ್‌ಬಿಟ್ ವರ್ಸಾ 3 ಮತ್ತು ಫಿಟ್‌ಬಿಟ್ ಇನ್‌ಸ್ಪೈರ್ 2 ಮಾರುಕಟ್ಟೆಗೆ ಪರಿಚಯಿಸಲ್ಪಟ್ಟಿದ್ದು, ಅಕ್ಟೋಬರ್ ಬಳಿಕ ಖರೀದಿಗೆ ಲಭ್ಯವಾಗಲಿದೆ.
Vijaya Karnataka Web Fitbit Versa
Fitbit


ಫಿಟ್‌ಬಿಟ್ ಇನ್‌ಸ್ಪೈರ್ 2ನಲ್ಲಿ ಆಕ್ಟಿವ್ ಝೋನ್ ಮಿನಟ್ಸ್, ಹೊಸ ಡಿಸ್‌ಪ್ಲೇ, 10 ದಿನಗಳ ಬ್ಯಾಟರಿ ಬಾಳಿಕೆ ಹೊಂದಿದೆ. ಫಿಟ್‌ಬಿಟ್ ಸೆನ್ಸ್ ಜತೆಗೆ 6 ತಿಂಗಳ ಫಿಟ್‌ಬಿಟ್ ಪ್ರೀಮಿಯಂ ಉಚಿತ ಟ್ರಯಲ್ ಕೂಡ ದೊರೆಯಲಿದ್ದು, ನಿಮ್ಮ ಆರೋಗ್ಯದ ಕುರಿತ ಎಲ್ಲ ವಿವರವನ್ನು ಅದರ ಮೂಲಕ ಪಡೆದುಕೊಳ್ಳಬಹುದು.

ಬೆಲೆ ವಿವರ
ಫಿಟ್‌ಬಿಟ್ ಸೆನ್ಸ್ ಬೆಲೆ ದೇಶದಲ್ಲಿ 34,999 ರೂ. ಇದೆ. ಕಾರ್ಬನ್, ಗ್ರಾಫೈಟ್ ಸ್ಟೈನ್‌ಲೆಸ್ ಸ್ಟೀಲ್, ಲೂನಾರ್ ವೈಟ್, ಸಾಫ್ಟ್ ಗೋಲ್ಡ್ ಸ್ಟೆನ್‌ಲೆಸ್ ಸ್ಟೀಲ್ ಬಣ್ಣಗಳಲ್ಲಿ ಲಭ್ಯವಿದೆ.
ಫಿಟ್‌ಬಿಟ್ ವರ್ಸಾ 3 ಬೆಲೆ 26,499 ರೂ. ಇದ್ದು, ಕಪ್ಪು ಮತ್ತು ಕಪ್ಪು ಅಲ್ಯೂಮಿನಿಯಂ, ಪಿಂಕ್ ಕ್ಲೇ ಮತ್ತು ಸಾಫ್ಟ್ ಗೋಲ್ಡ್ ಅಲ್ಯೂಮಿನಿಯಂ, ಮಿಡ್‌ನೈಟ್ ಮತ್ತು ಸಾಫ್ಟ್‌ ಗೋಲ್ಡ್ ಬಣ್ಣಗಳಲ್ಲಿ ಲಭ್ಯ.

LG Q92 5G: ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ಎಲ್‌ಜಿ

ಫಿಟ್‌ಬಿಟ್ ಇನ್‌ಸ್ಪೈರ್ 2 ಮಾದರಿ ಬೆಲೆ 10,999 ರೂ. ಇದ್ದು, ಕಪ್ಪು, ಲೂನಾರ್ ವೈಟ್ ಮತ್ತು ಡೆಸರ್ಟ್ ರೋಸ್ ಬಣ್ಣಗಳಲ್ಲಿ ದೊರೆಯಲಿದೆ.
ಫಿಟ್‌ಬಿಟ್ ಪ್ರೀಮಿಯಂ ತಿಂಗಳ ಚಂದಾ ದರ 819 ರೂ. ಇದ್ದು, ವಾರ್ಷಿಕ ದರ 6,999 ರೂ. ಇದೆ.

Jio Recharge Offer: ಜಿಯೋ ರಿಚಾರ್ಜ್ ಮಾಡಿ ಉಚಿತವಾಗಿ ಐಪಿಎಲ್‌ ನೋಡಿ..!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌