ಆ್ಯಪ್ನಗರ

Flipkart: ಗೃಹಬಳಕೆ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಮಾರ್ಕ್‌ ಹಾಗೂ ಪ್ಯಾನಸೋನಿಕ್‌ ಪಾಲುದಾರಿಕೆ

ಮಾರ್ಕ್‌ನ ಹೊಸ ಶ್ರೇಣಿಯ ಉಪಕರಣಗಳನ್ನು ಬಾಳಿಕೆ ಮತ್ತು ಇಂಧನ-ಸಾಮರ್ಥ್ಯವಾಗಿಸಲು ವಿನ್ಯಾಸಗೊಳಿಸಲಾಗಿದೆ ಮತ್ತು ಉತ್ತಮ ಕಾರ್ಯಕ್ಷಮತೆ ನೀಡುವ ವೈಶಿಷ್ಟ್ಯಗಳನ್ನು ಒದಗಿಸಲಾಗಿದೆ.

Vijaya Karnataka 17 Nov 2020, 12:53 pm
ಸ್ವದೇಶಿ ಇ-ಕಾಮರ್ಸ್ ಮಾರುಕಟ್ಟೆ ಫ್ಲಿಪ್‌ಕಾರ್ಟ್‌, ದೇಶದ ಗ್ರಾಹಕರಿಗೆ ಫ್ಲಿಪ್‌ಕಾರ್ಟ್‌ನ ಮಾರ್ಕ್ ಅಡಿಯಲ್ಲಿ ವಾಷಿಂಗ್‌ ಮೆಷಿನ್‌, ಏರ್‌ಕಂಡೀಷನರ್‌ ಮತ್ತು ರೆಫ್ರಿಜರೇಟರ್‌ ಅನ್ನು ಒದಗಿಸಲು ದೇಶದ ಮುಂಚೂಣಿಯ ವಿಭಿನ್ನ ತಂತ್ರಜ್ಞಾನ ಕಂಪನಿ ಪ್ಯಾನಸೋನಿಕ್‌ನೊಂದಿಗೆ ಪಾಲುದಾರಿಕೆ ಹೊಂದಿದೆ. ಪ್ಯಾನಸೋನಿಕ್ ವಿಶ್ವ ದರ್ಜೆಯ ತಂತ್ರಜ್ಞಾನ ಹೊಂದಿದ್ದು, ಉತ್ಪನ್ನಗಳನ್ನು ಭಾರತೀಯ ಗ್ರಾಹಕರಿಗೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಇದು ಭಾರತೀಯ ಮಾರುಕಟ್ಟೆಗಳಿಗೆ ಸರಿಹೊಂದುತ್ತದೆ. ಪ್ಯಾನಸೋನಿಕ್ ತಂತ್ರಜ್ಞಾನವನ್ನು ಬಳಸಿಕೊಂಡು ಈ ಉತ್ಪನ್ನಗಳನ್ನು ಸಂಪೂರ್ಣವಾಗಿ ಭಾರತದಲ್ಲಿ ವಿನ್ಯಾಸಗೊಳಿಸಿ, ತಯಾರಿಸಲಾಗಿದೆ.
Vijaya Karnataka Web Flipkart
Flipkart Sale


ಭಾರತೀಯ ಹವಾಮಾನ ಮತ್ತು ಪ್ರತಿನಿತ್ಯದ ಬಳಕೆ ಗೃಹ ಉಪಕರಣಗಳ ಬಾಳಿಕೆ, ಪರಿಣಾಮಕತೆ ಮತ್ತು ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ ಮಾರ್ಕ್‌ನ ಹೊಸ ಶ್ರೇಣಿಯ ಉಪಕರಣಗಳನ್ನು ಬಾಳಿಕೆ ಮತ್ತು ಇಂಧನ-ಸಾಮರ್ಥ್ಯವಾಗಿಸಲು ವಿನ್ಯಾಸಗೊಳಿಸಲಾಗಿದೆ ಮತ್ತು ಉತ್ತಮ ಕಾರ್ಯಕ್ಷಮತೆ ನೀಡುವ ವೈಶಿಷ್ಟ್ಯಗಳನ್ನು ಒದಗಿಸಲಾಗಿದೆ.

ಉದಾಹರಣೆಗೆ, ವಾಷಿಂಗ್‌ ಮೆಷಿನ್‌ನಲ್ಲಿನ ಹೆಚ್ಚಿನ ಸ್ಪಿನ್ ಆರ್‌ಪಿಎಂ ತ್ವರಿತ ಸಮಯದಲ್ಲಿ ಬಟ್ಟೆಗಳು ಒಣಗಿದೆಯೆ ಎಂದು ಖಚಿತಪಡಿಸುತ್ತದೆ ಮತ್ತು 5 ಸ್ಟಾರ್ ಬಿಇ ರೇಟಿಂಗ್ ವರ್ಗ ಶಕ್ತಿಯ ದಕ್ಷತೆ ನೀಡುತ್ತದೆ, ಆದರೆ ಉನ್ನತ-ಲೋಡ್ ಕಾಂಪ್ಯಾಕ್ಟ್ ಕ್ಯಾಬಿನೆಟ್ ವಿನ್ಯಾಸ ಸಣ್ಣ ಸ್ಥಳಗಳಿಗೆ ಉಪಯುಕ್ತವಾಗಿವೆ. ಈ ಹವಾನಿಯಂತ್ರಕಗಳು 145ವ್ಯಾಟ್‌ ಇಂದ 285 ವ್ಯಾಟ್‌ ವೋಲ್ಟೇಜ್ ಏರಿಳಿತಗಳನ್ನು ತಡೆದುಕೊಳ್ಳುವ ಮತ್ತು 52 ಡಿಗ್ರಿಗಳವರೆಗೆ ತಾಪಮಾನದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ. ಜೊತೆಗೆ, ದೊಡ್ಡ ಸಂಗ್ರಹ ಸಾಮರ್ಥವುಳ್ಳ ರೆಫ್ರಿಜರೇಟರ್‌ಗಳು ಭಾರತೀಯ ಗ್ರಾಹಕರಿಗೆ ಒಂದು ದೊಡ್ಡ ಪ್ಲಸ್ ಆಗಿದೆ. ಪ್ಯಾನಸೋನಿಕ್ ಮತ್ತು ಫ್ಲಿಪ್‌ಕಾರ್ಟ್ ಇವುಗಳನ್ನು ಮಾರುಕಟ್ಟೆಗೆ ಪ್ರಸ್ತುತಪಡಿಸಲಿವೆ.

ಪ್ಯಾನಸೋನಿಕ್ ಇಂಡಿಯಾ ಎಪಿಐಎನ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌರಭ್ ರಾವತ್, ಸ್ಥಳೀಯ ಉತ್ಪಾದನೆಯನ್ನು ಉತ್ತೇಜಿಸುವುದು ಕೈಗಾರಿಕಾ ಪುನರುಜ್ಜೀವನಕ್ಕೆ ಕಾರಣವಾಗುತ್ತದೆ ಎಂಬುದು ನಮ್ಮ ನಂಬಿಕೆ. ಗ್ರಾಹಕರ ಮೌಲ್ಯವನ್ನು ಹೆಚ್ಚಿಸುವ ದೃಷ್ಟಿಯೊಂದಿಗೆ ಫ್ಲಿಪ್‌ಕಾರ್ಟ್‌ನೊಂದಿಗೆ ಪಾಲುದಾರರಾಗಲು ತುಂಬಾ ಸಂತೋಷಪಡುತ್ತೇವೆ. ಬೇಸ್ ಪ್ಲಾಟ್‌ಫಾರ್ಮ್ ಅನ್ನು ಇತರ ಪಾಲುದಾರ ಬ್ರಾಂಡ್‌ಗಳ ತಯಾರಿಕೆಗೆ ಬಳಸಲಾಗುತ್ತದೆಯಾದರೂ, ಪ್ಯಾನಸೋನಿಕ್ ಇಂಡಿಯಾ ತನ್ನ ಉತ್ಪನ್ನಗಳಿಗೆ ಸ್ವಾಮ್ಯದ ತಂತ್ರಜ್ಞಾನ ಇಟ್ಟುಕೊಂಡು ಪ್ರತ್ಯೇಕತೆಯನ್ನು ಕಾಪಾಡಿಕೊಳ್ಳುತ್ತದೆ ಎಂದಿದ್ದಾರೆ.

OnePlus Nord SE: ಒನ್‌ಪ್ಲಸ್ ಪರಿಚಯಿಸುತ್ತಿದೆ ಹೊಸ ಸ್ಮಾರ್ಟ್‌ಫೋನ್

ಉತ್ಪನ್ನದ ಪ್ರಮುಖ ವೈಶಿಷ್ಟ್ಯಗಳು
ವಾಶ್ ಲೋಡ್, ಅಸಮತೋಲನ ಮತ್ತು ನೀರಿನ ಮಟ್ಟ ಗುರುತಿಸುವ ವಾಷಿಂಗ್‌ ಮೆಷಿನ್‌ಗಳಲ್ಲಿನ ಸ್ಮಾರ್ಟ್ ಸಂವೇದಕಗಳು ಉತ್ತಮವಾದ ತೊಳೆಯುವ ಅನುಭವ ನೀಡುತ್ತವೆ,
ರೆಫ್ರಿಜರೇಟರ್‌ಗಳಲ್ಲಿ ಸ್ಮಾರ್ಟ್ ಸೆನ್ಸರ್ ತಂತ್ರಜ್ಞಾನ,
ಕನಿಷ್ಠ ಕಂಪನಗಳು ಮತ್ತು ಶಬ್ದವನ್ನು ಖಚಿತಪಡಿಸಿಕೊಳ್ಳಲು ಹವಾನಿಯಂತ್ರಣಗಳಲ್ಲಿ ಬ್ರಷ್‌ರಹಿತ ಡಿಸಿ ಮೋಟಾರ್ಸ್ ಮತ್ತು ತೊಳೆಯುವ ಯಂತ್ರಗಳಲ್ಲಿ ಇಂಡಕ್ಷನ್ ಮೋಟಾರ್‌ಗಳಿವೆ.

Vivo Y12s: ಬಜೆಟ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ವಿವೋ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌