ಆ್ಯಪ್ನಗರ

Big Billion Day: ಹಬ್ಬದ ವಿಶೇಷ ಮಾರಾಟಕ್ಕೆ ಸಜ್ಜಾಗುತ್ತಿದ್ದಾರೆ ಫ್ಲಿಪ್‌ಕಾರ್ಟ್‌ ಪಾಲುದಾರರು

ದೇಶದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಕಾಮರ್ಸ್ ವ್ಯವಸ್ಥೆಯಾಗಿರುವ ಇ-ಕಾಮರ್ಸ್ ಮಾರುಕಟ್ಟೆಗೆ ಕಿರಾಣಗಳು ಮತ್ತು ಗ್ರಾಹಕರನ್ನು ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ.

Vijaya Karnataka 11 Sep 2020, 5:12 pm
ಹಬ್ಬದ ಸೀಸನ್ ಮತ್ತು ಬಿಗ್ ಬಿಲಿಯನ್ ಡೇಗಳಿಗೆ ಸಿದ್ಧತೆ ಮಾಡಿಕೊಳ್ಳುವ ನಿಟ್ಟಿನಲ್ಲಿ ದೇಸಿ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್‌ಕಾರ್ಟ್ ತನ್ನ ಕಿರಾಣ ಸೇರ್ಪಡೆ ಕಾರ್ಯಕ್ರಮವನ್ನು ಗಣನೀಯ ಪ್ರಮಾಣದಲ್ಲಿ ವಿಸ್ತರಣೆ ಮಾಡಿಕೊಂಡಿದೆ. ಇದರ ಪ್ರಮುಖ ಉದ್ದೇಶ 850 ಕ್ಕೂ ಹೆಚ್ಚು ನಗರಗಳಲ್ಲಿ ಗ್ರಾಹಕರಿಗೆ ಉತ್ಪನ್ನಗಳನ್ನು ತ್ವರಿತವಾಗಿ ತಲುಪಿಸುವುದಾಗಿದೆ. 50,000 ಕ್ಕೂ ಅಧಿಕ ಕಿರಾಣಗಳ ಜತೆಗೆ ಪಾಲುದಾರಿಕೆ ಹೊಂದಿರುವ ಫ್ಲಿಪ್ ಕಾರ್ಟ್ ಲಕ್ಷಾಂತರ ಗ್ರಾಹಕರಿಗೆ ತ್ವರಿತವಾಗಿ ಮತ್ತು ವ್ಯಕ್ತಿತವಾದ ಇ-ಕಾಮರ್ಸ್ ಅನುಭವವನ್ನು ನೀಡುವ ಉದ್ದೇಶವನ್ನು ಹೊಂದಿದೆ. ಇದೇ ವೇಳೆ, ಕಿರಾಣಗಳಿಗೆ ಡಿಜಿಟಲ್ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳುವುದು ಮತ್ತು ಹೆಚ್ಚುವರಿ ಆದಾಯ ಗಳಿಕೆಗೆ ಅವಕಾಶಗಳನ್ನು ಕಲ್ಪಿಸುತ್ತಿದೆ.
Vijaya Karnataka Web Flipkart
Big Billion Day Sale


ಪಾಲುದಾರಿಕೆಯನ್ನು ಹೊಂದಿರುವ ಕಿರಾಣಗಳಿಗೆ ನೆರವಾಗುವುದು ಮತ್ತು ಹಬ್ಬದ ಸಂದರ್ಭದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಹಾಯ ಮಾಡಲೆಂದು ಫ್ಲಿಪ್ ಕಾರ್ಟ್ ನ ತಂಡವು ಸಂಪರ್ಕರಹಿತವಾದ ಸೇರ್ಪಡೆ ಪ್ರಕ್ರಿಯೆಯನ್ನು ನಡೆಸುತ್ತಿದೆ. ಅಂದರೆ, ಕಿರಾಣ ಪಾಲುದಾರರು ನೇರವಾಗಿ ಆನ್ ಲೈನ್ ಮೂಲಕ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಅಪ್ ಲೋಡ್ ಮಾಡಬಹುದು. ಕೋವಿಡ್-19 ಸಂದರ್ಭದಲ್ಲಿ ಅವರು ಹೊರಗೆ ಬಾರದೇ ತಡೆರಹಿತವಾಗಿ ಆನ್ ಬೋರ್ಡಿಂಗ್ ಅನ್ನು ಇದು ಸಕ್ರಿಯಗೊಳಿಸುತ್ತದೆ.

ವಿವರವಾದ ಪರಿಶೀಲನೆಯ ನಂತರ, ಕಿರಾಣಗಳನ್ನು ಈ ಕಾರ್ಯಕ್ರಮದಡಿಗೆ ತರಲಾಗುತ್ತದೆ. ಅದಕ್ಕೂ ಮೊದಲು ಅವರು ಡೆಲಿವರಿ ಶಿಪ್ ಮೆಂಟ್ ಗಳನ್ನು ಮಾಡಬಹುದಾಗಿದೆ. ಆ್ಯಪ್ ಆಧಾರಿತ ಡ್ಯಾಶ್ ಬೋರ್ಡ್ ಗಳು ಮತ್ತು ಡಿಜಿಟಲ್ ಪಾವತಿಗಳು ಸೇರಿದಂತೆ ವಿವಿಧ ಟೂಲ್‌ಗಳಲ್ಲಿ ತಂಡವು ಡಿಜಿಟಲ್ ತರಬೇತಿಯನ್ನು ನೀಡಲಿದೆ. ಈ ಮೂಲಕ ಕಿರಾಣಗಳು ಸಾಂಪ್ರಾದಾಯಿಕ ಸಾಮಾನ್ಯ ವ್ಯವಹಾರ ಸ್ಟೋರ್‌ಗಳಿಂದ ಆಧುನಿಕ ಅನುಕೂಲಕರ ಸ್ಟೋರ್‌ಗಳಿಗೆ ತಮ್ಮ ವ್ಯವಹಾರವನ್ನು ರೂಪಾಂತರ ಅಥವಾ ಪರಿವರ್ತನೆ ಮಾಡಿಕೊಳ್ಳಲು ನೆರವಾಗುತ್ತದೆ.

ಕಿರಾಣ ಕಾರ್ಯಕ್ರಮವನ್ನು ಅಸ್ಸಾಂನ ಟಿನ್ಸುಕಿಯಾ, ತ್ರಿಪುರಾದ ಅಗರ್ತಲ ಮತ್ತು ಕೇರಳದ ಕಣ್ಣೂರಿನಂತಹ ನಗರ ಪ್ರದೇಶಗಳಿಂದ ಬಹುದೂರ ಇರುವ ಪ್ರದೇಶಗಳಿಗೂ ವಿಸ್ತರಣೆ ಮಾಡಲಾಗುತ್ತಿದೆ. ಈ ಮೂಲಕ ದೇಶದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಕಾಮರ್ಸ್ ವ್ಯವಸ್ಥೆಯಾಗಿರುವ ಇ-ಕಾಮರ್ಸ್ ಮಾರುಕಟ್ಟೆಗೆ ಕಿರಾಣಗಳು ಮತ್ತು ಗ್ರಾಹಕರನ್ನು ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ.

Reliance Jio Fiber vs Airtel Xstream: ಬೆಸ್ಟ್ ಅನ್‌ಲಿಮಿಟೆಡ್ ಇಂಟರ್‌ನೆಟ್ ಪ್ಲ್ಯಾನ್ ಯಾವುದು?

ಕಿರಾಣಗಳು ಹೆಚ್ಚಿನ ಗ್ರಾಹಕರ ತೃಪ್ತಿದಾಯಕ ಸ್ಟೋರ್ ಗಳಾಗಿವೆ ಮತ್ತು ಈ ಕಾರ್ಯಕ್ರಮವು ಕಿರಾಣಗಳಿಗೆ ಹೆಚ್ಚುವರಿಯಾಗಿ ಆದಾಯವನ್ನು ಗಳಿಸಬಹುದಾದ ಅವಕಾಶವನ್ನು ಕಲ್ಪಿಸುತ್ತಿದೆ. ಇದೇ ವೇಳೆ, ಗ್ರಾಹಕ ಕೇಂದ್ರಿತ ಕೌಶಲ್ಯಗಳನ್ನು ನಿರ್ಮಾಣ ಮಾಡಲಾಗುತ್ತದೆ.

Great Indian Festival Sale: ಅಮೆಜಾನ್ ವಿಶೇಷ ಡಿಸ್ಕೌಂಟ್ ಮಾರಾಟಕ್ಕೆ ಸಿದ್ಧತೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌