ಆ್ಯಪ್ನಗರ

Flipkart: ಪೂರೈಕೆ ಜಾಲದ ವಿಸ್ತರಣೆ

ಬಿಗ್ ಬಿಲಿಯನ್ ಡೇಸ್ ಪೂರ್ವದಲ್ಲಿ ದೊಡ್ಡ ಗೃಹೋಪಯೋಗಿ ವಸ್ತುಗಳಿಗೆ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪೂರೈಕೆ ಜಾಲದ ವಿಸ್ತರಣೆಯನ್ನು ಕೈಗೊಂಡಿರುವುದಾಗಿ ದೇಶದ ಪ್ರಮುಖ ಇ ಕಾಮರ್ಸ್ ತಾಣ ಫ್ಲಿಪ್‍ಕಾರ್ಟ್ ಘೋಷಿಸಿದೆ. ಕಳೆದ ವರ್ಷಕ್ಕಿಂತ ಶೇ. 80 ಹೆಚ್ಚು ಪಿನ್ ಕೋಡ್ ವ್ಯಾಪ್ತಿಯ ವಿಸ್ತರಣೆ ಹಾಗೂ ಪೂರೈಕೆ ಸಾಮರ್ಥ್ಯ 14 ಪಟ್ಟು ಹೆಚ್ಚಳವಾಗಿದೆ.

Vijaya Karnataka Web 16 Sep 2019, 4:38 pm
ಬಿಗ್ ಬಿಲಿಯನ್ ಡೇಸ್ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಪೂರೈಕೆ ಜಾಲವನ್ನು ಇನ್ನಷ್ಟು ಪ್ರಮಾಣದಲ್ಲಿ ವಿಸ್ತರಿಸುವುದಾಗಿ ದೇಶದ ಪ್ರಮುಖ ಇ ಕಾಮರ್ಸ್ ಮಾರ್ಕೆಟ್ ಪ್ಲೇಸ್ ಫ್ಲಿಪ್‍ಕಾರ್ಟ್ ತಿಳಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 80 ರಷ್ಟು ಪಿನ್‍ಕೋಡ್ ವ್ಯಾಪ್ತಿಯಲ್ಲಿ ದೊಡ್ಡ ಪ್ರಮಾಣದ ಗೃಹೋಪಯೋಗಿ ವಸ್ತುಗಳನ್ನು ಪೂರೈಕೆ ಮಾಡುವ ಗುರಿಯನ್ನು ಹೊಂದಿರುವುದಾಗಿ ಫ್ಲಿಪ್‍ಕಾರ್ಟ್ ಹೇಳಿದೆ.
Vijaya Karnataka Web FLIPKART


ವಿತರಣಾ ಜಾಲದ ವಿಸ್ತರಣೆಯ ಮೂಲಕ ಫ್ಲಿಪ್‍ಕಾರ್ಟ್ ಪ್ರಸ್ತುತ ಪಿನ್‍ಕೋಡ್ ವ್ಯಾಪ್ತಿಯ ಬಹುತೇಕ ಪ್ರದೇಶಗಳಿಗೆ ದೊಡ್ಡ ಗೃಹೋಪಯೋಗಿ ವಸ್ತುಗಳನ್ನು ವಿತರಣೆ ಮಾಡಲು ಶಕ್ತವಾಗಿದೆ. ಇದರ ಜತೆಗೆ ಎರಡನೇ ದರ್ಜೆಯ ನಗರಗಳನ್ನು ಮೀರಿ ದೇಶದ ಬಹುತೇಕ ಕಡೆಗೆ ದೊಡ್ಡ ಗೃಹೋಪಯೋಗಿ ವಸ್ತುಗಳನ್ನು ಪೂರೈಕೆ ಮಾಡುವ ಸಾಮರ್ಥ್ಯವನ್ನು ಹೊಂದಿದಂತಾಗಿದೆ. ಬೆಂಗಳೂರಿನಲ್ಲಿ 3.5 ಲಕ್ಷ ಚದರ ಅಡಿ ಪ್ರದೇಶದಷ್ಟು ಬೃಹತ್ತಾಗಿರುವ ಸಂಗ್ರಹಣಾ ವ್ಯವಸ್ಥೆಯ ಮೂಲಕ ಫ್ಲಿಪ್‍ಕಾರ್ಟ್ ಪ್ರಸ್ತುತ 2018 ನೇ ವರ್ಷಕ್ಕಿಂತ 14 ಪಟ್ಟು ಹೆಚ್ಚು ವಿತರಣಾ ಸಾಮರ್ಥ್ಯ ವೃದ್ಧಿಸಿಕೊಂಡಿದೆ.

ದೊಡ್ಡ ಗೃಹೋಪಯೋಗಿ ವಸ್ತುಗಳ ಖರೀದಿಯ ವೇಳೆ ಗ್ರಾಹಕರ ಮನದಲ್ಲಿ ಉಂಟಾಗುವ ಆತಂಕಗಳಿಗೆ ಉತ್ತರಿಸುವ ನಿಟ್ಟಿನಲ್ಲಿ ಕಾರ್ಯಗತವಾಗಿರುವ ಫ್ಲಿಪ್‍ಕಾರ್ಟ್, ಪೂರೈಕೆ ಬಳಿಕ ಖರೀದಿದಾರರ ಮುಂದೆಯೇ ಓಪನ್ ಬಾಕ್ಸ್ ಡೆಲಿವರಿ ಆಯ್ಕೆ ಅಳವಡಿಸಿಕೊಂಡಿದ್ದು, ಈ ಮೂಲಕ ಗ್ರಾಹಕರಿಗೆ ಖರೀದಿಸಿದ ವಸ್ತುವಿಗೆ ಯಾವುದೇ ಹಾನಿಯಾಗಿಲ್ಲ ಎಂಬುದನ್ನು ಖಾತ್ರಿ ಮಾಡಿಸಲಾಗುತ್ತದೆ.

Motorola TV: ಮಾರುಕಟ್ಟೆಗೆ ಮೋಟೋರೋಲಾ ಟಿವಿ

ಒಂದು ವೇಳೆ ಗ್ರಾಹಕರು ಏನಾದರೂ ಸಮಸ್ಯೆ ಎದುರಿಸಿದರೆ, ಯಾವುದೇ ಅಡೆತಡೆಯಿಲ್ಲದೆ ಡೋರ್‌ ಸ್ಟೆಪ್ ರಿಪ್ಲೇಸ್‍ಮೆಂಟ್ ಅವಕಾಶವನ್ನು ಕೊಡಲಾಗಿದೆ. ದೊಡ್ಡ ಗಾತ್ರದ ಗೃಹೋಪಯೋಗಿ ವಸ್ತುಗಳನ್ನು ಫ್ಲಿಪ್‍ಕಾರ್ಟ್‍ನಿಂದ ಖರೀದಿ ಮಾಡಿದರೆ ಅಲ್ಲಿಗೆ ಎಲ್ಲವೂ ಮುಕ್ತಾಯವಾಗುವುದಿಲ್ಲ. ಖರೀದಿ ಮಾಡಿರುವ ದಿನದಿಂದ 48 ಗಂಟೆಗಳ ಒಳಗೆ ಅಳವಡಿಕೆ ಖಾತರಿ ಒದಗಿಸಲಾಗಿದೆ.

ಹೀಗಾಗಿ ಪ್ರಸ್ತುತ ಬಿಗ್ ಬಿಲಿಯನ್ ಡೇಸ್‍ನಂದು ಸಣ್ಣ ಪಟ್ಟಣಗಳ ಗ್ರಾಹಕರು ಕೂಡ ದೊಡ್ಡ ಗಾತ್ರದ ಗೃಹೋಪಯೋಗಿ ವಸ್ತುಗಳಾದ ಸ್ಮಾರ್ಟ್ ಟಿವಿ, ವಾಷಿಂಗ್ ಮಷಿನ್ ಹಾಗೂ ರೆಫ್ರಿಜರೇಟರ್ನಂಥ ವಸ್ತುಗಳನ್ನು ಖರೀದಿಸುವ ಅವಕಾಶ ನೀಡಲಾಗಿದ್ದು, ಇದರಿಂದಾಗಿ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಲಿದೆ.

Big Billion Days: ಫ್ಲಿಪ್‍ಕಾರ್ಟ್ ಆಫರ್ ಸೇಲ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌